ಕರಾವಳಿ

ಕರಾವಳಿಯ ಬಡವರಿಗೆ ಮುಂಬೈಯಲ್ಲಿ ಬದುಕು ರೂಪಿಸಿಕೊಟ್ಟವರು ಜಯ. ಸುವರ್ಣ : ಸಚಿವ ಪೂಜಾರಿ ಸಂತಾಪ

Pinterest LinkedIn Tumblr

ಜಯ ಸಿ ಸುವರ್ಣ

ಮಂಗಳೂರು ಅಕ್ಟೋಬರ್ 21 : ಭಾರತ್ ಬ್ಯಾಂಕ್ ಸ್ಥಾಪಕ ಜಯ ಸಿ ಸುವರ್ಣ ಅಗಲಿಕೆಯು ಸಮಾಜಕ್ಕೆ ಮಾತ್ರವಲ್ಲ, ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟ. ಬ್ರಹ್ಮಶ್ರೀ ನಾರಾಯಣ ಗುರುಗಳು ಸುವರ್ಣರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ. ಅವರು ಬಿಟ್ಟು ಹೋದ ಆದರ್ಶಗಳನ್ನು ಕಟ್ಟಿ ಬೆಳೆಸೋಣ ಎಂದು ಹಿಂದೂ ಧಾರ್ಮಿಕ ದತ್ತಿ, ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಂತಾಪ ವ್ಯಕ್ತಪಡಿಸಿದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ

ಕರಾವಳಿ ಜಿಲ್ಲೆಯಿಂದ ಮೇಲೆದ್ದು ಬಂದ ಎಳೆಯನೊಬ್ಬ, ಮುಂಬೈ ಸೇರಿ ಬದುಕು ಕಟ್ಟಿಕೊಳ್ಳುತ್ತಾ, ಮಾಯಾನಗರಿ ಮುಂಬೈಯ ಒಡಲೊಳಗೆ ಸಹಸ್ರಾರು ಕರಾವಳಿಯ ಬಡವರನ್ನು ಸೆಳೆದು, ಅವರಿಗೆ ಅಲ್ಲಿ ಬದುಕು ರೂಪಿಸಿಕೊಟ್ಟವರು ಜಯ ಸಿ ಸುವರ್ಣ.

ಅನಕ್ಷರಸ್ಥ ಸಮುದಾಯದ ಮೂಲಕ ಭಾರತ್ ಬ್ಯಾಂಕ್ ಅನ್ನುವ ಬೃಹತ್ ಬ್ಯಾಂಕ್ ನಿರ್ಮಿಸಿ ಸಹಸ್ರಾರು ಜನರಿಗೆ ಉದ್ಯೋಗ, ಲಕ್ಷಾಂತರ ಜನರಿಗೆ ಅವಕಾಶ, ಇವೆಲ್ಲವನ್ನು ಒಬ್ಬ ವ್ಯಕ್ತಿಯಿಂದ ಸಾಧ್ಯವೇ ಎನ್ನುವಷ್ಟರ ಮಟ್ಟಿಗೆ ಜಯ ಸಿ ಸುವರ್ಣರು ಎತ್ತರದ ಮನುಷ್ಯರಾಗಿ ರೂಪುಗೊಂಡಿದ್ದರು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Comments are closed.