ಪ್ರಮುಖ ವರದಿಗಳು

ಮಂಗಳಸೂತ್ರವನ್ನು ನಾಯಿ ಚೈನಿಗೆ ಹೋಲಿಸಿದ ಗೋವಾದ ಮಹಿಳಾ ಪ್ರೊಫೇಸರ್ ವಿರುದ್ಧ FIR…!

Pinterest LinkedIn Tumblr

ಪಣಜಿ: ಮಹಿಳಾ ಪ್ರೊಫೆಸರ್ ಒಬ್ಬರು ಮಹಿಳೆಯರು ಮದುವೆ ಬಳಿಕ ಧರಿಸುವ ಮಂಗಳಸೂತ್ರವನ್ನು ನಾಯಿ ಚೈನಿಗೆ ಹೋಲಿಕೆ ಮಾಡಿ ವಿವಾದಕ್ಕೀಡಾದ ಘಟನೆ ಗೋವಾದಲ್ಲಿ ನಡೆದಿದೆ. ವಿವಾದಾತ್ಮಕವಾಗಿ ಪೋಸ್ಟ್ ಮಾಡಿದ ಶಿಲ್ಪಾ ಸಿಂಗ್ ಪ್ರೊಫೆಸರ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

(ಸಾಂದರ್ಭಕ ಚಿತ್ರ)

ರಾಷ್ಟ್ರೀಯ ಹಿಂದೂ ಯುವ ವಾಹಿನಿ ಗೋವಾ ಘಟಕದ ರಾಜೀವ್ ಝಾ ಎಂಬವರು ಪ್ರೊಫೆಸರ್ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಪ್ರೊಫೆಸರ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಝಾ ಅವರು ತಮ್ಮ ದೂರಿನಲ್ಲಿ ಸಿಂಗ್ ಅವರ ಫೇಸ್ ಬುಕ್ ಪೋಸ್ಟ್ ಅನ್ನು ಉಲ್ಲೇಖಿಸಿದ್ದಾರೆ. ಇದರಲ್ಲಿ ಅವರು ಹಿಂದೂ ಧರ್ಮ ಹಾಗೂ ಇಸ್ಲಾಂ ಧರ್ಮದ ಸಂಪ್ರದಾಯಗಳನ್ನು ಟೀಕಿಸಿದ್ದರು. ಕ್ರಮವಾಗಿ ಮಂಗಳಸೂತ್ರವನ್ನು ಧರಿಸುವ ಮತ್ತು ಬುರ್ಖಾ ಧರಿಸುವ ಅಭ್ಯಾಸವನ್ನು ಕೂಡ ಉಲ್ಲೇಖಿಸಿದ್ದಾರೆ. ಇದೇ ವೇಳೆ ಮಹಿಳೆಯರು ಧರಿಸುವ ಮಂಗಳಸೂತ್ರವನ್ನು ನಾಯಿ ಚೈನಿಗೆ ಹೋಲಿಕೆ ಮಾಡಿದ್ದಾರೆ.

ಶಿಲ್ಪಾ ಸುರೇಂದ್ರ ಪ್ರತಾಪ್ ಸಿಂಗ್ ಎಂಬ ಫೇಸ್ ಬುಕ್ ಅಕೌಂಟಿನಿಂದ ಭಾರತೀಯರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವ ಪೋಸ್ಟ್ ಹಾಕಲಾಗಿತ್ತು. ಲ ಈ ಹಿನ್ನೆಲೆಯಲ್ಲಿ ಸಿಂಗ್ ವಿರುದ್ಧ ಐಪಿಸಿ ಸೆಕ್ಷನ್ 295 ಎ ಅಡಿಯಲ್ಲಿ ಪಣಜಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ಇನ್ನು ಪ್ರೊಫೆಸರ್ ಈ ಬಗ್ಗೆ ಸಮರ್ಥಿಸಿಕೊಂಡಿದ್ದು, ತನ್ನ ವಿರುದ್ಧ ದೂರಿಗೆ ಪ್ರತಿಯಾಗಿ ತಾವೂ ಝಾ ವಿರುದ್ಧ ದೂರು ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.

 

 

Comments are closed.