ಅಂತರಾಷ್ಟ್ರೀಯ

ಹೃದಯ ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಪತನ: ಶಸ್ತ್ರ ಚಿಕಿತ್ಸೆ ಯಶಸ್ವಿ

Pinterest LinkedIn Tumblr


ಲಾಸ್ ಏಂಜಲೀಸ್: ಶಸ್ತ್ರಚಿಕಿತ್ಸೆಗಾಗಿ ವ್ಯಕ್ತಿಯೊಬ್ಬರ ಹೃದಯವನ್ನು ಹೆಲಿಕಾಪ್ಟರ್ ನಲ್ಲಿ ತೆಗೆದುಕೊಂಡು ಹೋಗುತ್ತಿದ್ದಾಗ ಅದು ಪತನಗೊಂಡ ಘಟನೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.

ವ್ಯಕ್ತಿ ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರಿಗೆ ಬಹುಬೇಗನೆ ಶಸ್ತ್ರಚಿಕಿತ್ಸೆ ನೆರವೇರಿಸಬೇಕಿತ್ತು. ಹೀಗಾಗಿ ಅವರಿಗೆ ಬೇಕಾದ ಹೃದಯವನ್ನು ಹೆಲಿಕಾಪ್ಟರ್ ಮೂಲಕ ಸಾಗಿಸಲಾಗುತ್ತಿತ್ತು. ಲಾಸ್ ಏಂಜಲೀಸ್ ನ ಕೆಕ್ ಆಸ್ಪತ್ರೆಯ ಮೇಲ್ಭಾಗದಲ್ಲಿ ಹೆಲಿಕಾಪ್ಟರ್ ಅನ್ನು ಇಳಿಸಲು ಸಿದ್ಧತೆ ನಡೆಸಲಾಗಿತ್ತು.

ಇತ್ತ ದಾನಿಯೊಬ್ಬರಿಂದ ಪಡೆದ ಹೃದಯವನ್ನು ಹೊತ್ತು ಬಂದಿದ್ದ ಹೆಲಿಕಾಪ್ಟರ್ ಇನ್ನೇನು ಕೆಲವೇ ಕ್ಷಣಗಳಲ್ಲಿ ಆಸ್ಪತ್ರೆಗಳಲ್ಲಿ ಆಸ್ಪತ್ರೆಯ ಮೇಲ್ಭಾಗದಲ್ಲಿ ಇಳಿಯಬೇಕಿತ್ತು. ಆದರೆ ಈ ವೇಳೆ ಹೆಲಿಕಾಪ್ಟರ್ ಏಕಾಏಕಿ ತಿರುಗಲಾರಂಭಿಸಿತ್ತು. ಅಲ್ಲದೆ ತಿರುಗುತ್ತಲೇ ಇಳಿದ ಹೆಲಿಕಾಪ್ಟರ್ ಕ್ಷಣಾರ್ಧದಲ್ಲಿ ಪತನಗೊಂಡಿದೆ.

ಹೆಲಿಕಾಪ್ಟರ್ ಗಮನಿಸುತ್ತಿದ್ದ ರಕ್ಷಣಾ ಸಿಬ್ಬಂದಿ ತಕ್ಷಣವೇ ಅದರ ಬಳಿ ಹೋಗಿ ಹೃದಯವನ್ನು ಸುರಕ್ಷಿತವಾಗಿ ಹೊರಕ್ಕೆ ತೆಗೆದಿದ್ದಾರೆ. ಅಲ್ಲದೆ ಆ ಕೂಡಲೇ ವೈದ್ಯಕೀಯ ಸಿಬ್ಬಂದಿಗೆ ಹಸ್ತಾಂತರಿಸಿದ್ದು, ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಘಟನೆಯಿಂದ ಪೈಲಟ್ ಗೆ ಸಣ್ಣಪುಣ್ಣ ಗಾಯಗಳಾಗಿದೆ. ಉಳಿದ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂಬುದಾಗಿ ಅಲ್ಲಿನ ಮಾಧ್ಯಗಳು ವರದಿ ಮಾಡಿವೆ.

Comments are closed.