ಕರಾವಳಿ

ಆಲ್-ಇಂಡಿಯಾ ಮುಸ್ಲಿಂ ಡೆವೆಲಪ್‌ಮೆಂಟ್ ಫೋರಂನ ಸಮಾಜಮುಖಿ ಕಾರ್ಯ ಶ್ಲಾಘನೀಯ :ಎಸ್ ಮಹಮ್ಮದ್ ಶಾಫಿ

Pinterest LinkedIn Tumblr

ಮಂಗಳೂರು/ ಬಂಟ್ವಾಳ : ಆಲ್ ಇಂಡಿಯಾ ಮುಸ್ಲಿಂ ಡೆವೆಲಪ್‌ಮೆಂಟ್ ಫೋರಂ ಇದರ ಬಂಟ್ವಾಳ ತಾಲೂಕು ಸಮಿತಿಯ ರಚನೆಯು ಬಂಟ್ವಾಳ ತಾಲ್ಲೂಕು ಎನ್ ಆರ್ ಸಿ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷರಾದ ಎಸ್ ಮಹಮ್ಮದ್ ಶಾಫಿ ಅವರ ಘನ ಅಧ್ಯಕ್ಷತೆಯಲ್ಲಿ ಜರಗಿತು.

ರಾಜ್ಯ ಕಾರ್ಯಾಧ್ಯಕ್ಷರಾದ ಎಸ್ ಅಬೂಬಕ್ಕರ್ ಸಜೀಪ ಇವರು ಸಂಸ್ಥೆಯ ಧ್ಯೇಯೋದ್ದೇಶಗಳನ್ನು ವಿವರ ನೀಡಿದರು. ರಾಜ್ಯ ಸಲಹಾ ಸಮಿತಿಯ ಪ್ರಧಾನ ಸಲಹೆಗಾರರಾದ ಜ. ರಫೀಕ್ ಮಾಸ್ಟರ್ ಅವರು ದಿಕ್ಸೂಚಿ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಎಸ್. ಮಹಮ್ಮದ್ ಶಾಫಿ ಅವರು ಮಾತನಾಡಿ ಆಲ್ ಇಂಡಿಯ ಮುಸ್ಲಿಂ ಡೆವಲಪ್ಮೆಂಟ್ ಫೋರಂ ಇಂದು ದೇಶಾದ್ಯಂತ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಮಾಡುತ್ತಿರುವ ಸಮಾಜಮುಖಿ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಜಿಲ್ಲಾಧ್ಯಕ್ಷರಾದ ಆಸೀಫ್ ಚೊಕ್ಕಬೆಟ್ಟು, ಬಂಟ್ವಾಳ ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಅಬ್ಬಾಸ್ ಅಲಿ ಬೋಳಂತೂರು, ಯೂತ್ ವಿಂಗ್ ಅಧ್ಯಕ್ಷರಾದ ಹಾಶೀರ್ ಪೇರಿಮಾರ್, ಕರಾವಳಿ ವಲಯದ ವೈದ್ಯಕೀಯ ಉಸ್ತುವಾರಿಯಾದ ಸಿದ್ದಿಕ್ ಕೊಳಕೆ, ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ನೂತನ ಸಮಿತಿಯ ಪದಾಧಿಕಾರಿಗಳ ವಿವರ :

ನೂತನ ಸಮಿತಿಯಲ್ಲಿ ಅಧ್ಯಕ್ಷರಾಗಿ ಎಂ.ಎಂ ಮಹಮ್ಮದ್ (ಮೋನು) ನಂದಾವರ, ಉಪಾಧ್ಯಕ್ಷರಾಗಿ ಅಬ್ದುಲ್ ಸಲಾಂ, ಅಬೂಬಕ್ಕರ್ ಫರಂಗಿಪೇಟೆ, ಇಬ್ರಾಹಿಂ ಕೈಲಾರ್, ಪ್ರಧಾನ ಕಾರ್ಯದರ್ಶಿಯಾಗಿ ಮನ್ಸೂರು ಬಿ.ಸಿ ರೋಡ್, ಕಾರ್ಯದರ್ಶಿಯಾಗಿ ಹಾರೂನ್ ರಶೀದ್ ಬಂಟ್ವಾಳ, ಖಜಾಂಜಿಯಾಗಿ ಅಲ್ತಾಫ್ ಮೇಲ್ಮನೆ ಫರಂಗಿಪೇಟೆ, ಸಂಘಟನಾ ಕಾರ್ಯದರ್ಶಿಯಾಗಿ ನವಾಜ್ ಬಡಕಬೈಲ್, ರಮ್ಲಾನ್ ಕಲಾಯಿ, ಬಂಟ್ವಾಳ ತಾಲೂಕು ಸಮಿತಿಯ ವೈದ್ಯಕೀಯ ಉಸ್ತುವಾರಿಯಾಗಿ ಇಶಾಕ್ ತುಂಬೆ, ಮುಖ್ತಾರ್ ಅಮ್ಮೆಮಾರ್, ಬಂಟ್ವಾಳ ತಾಲೂಕು ಘಟಕದ ಐಟಿ ಸೆಲ್ ಉಸ್ತುವಾರಿಯಾಗಿ ಇಶ್ರಾರ್ ಗೂಡಿನಬಳಿ, ಸವಾಝ್ ಬಂಟ್ವಾಳ ರವರನ್ನು ನೇಮಕ ಮಾಡಲಾಯಿತು.

Comments are closed.