ಮುಂಬೈ : ಅತ್ಯಾ#ಚಾರದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಮುಂಬೈನಲ್ಲಿ 22 ವರ್ಷದ ಯುವತಿಯನ್ನು ಎಂಗೇಜ್ಮೆಂಟ್ ಪಾರ್ಟಿಗೆ ಕರೆಸಿ ಸಾಮೂಹಿಕ ಅತ್ಯಾ#ಚಾರ ನಡೆಸಲಾಗಿದೆ.
ಈ ಘಟನೆ ನಡೆದಿರುವುದು ನವೆಂಬರ್ 8ರಂದು, ಪೊಲೀಸ್ ಠಾಣೆಗೆ ಸಂತ್ರಸ್ತ ಯುವತಿ ದೂರು ನೀಡಿದ ಹಿನ್ನೆಲೆಯಲ್ಲಿ ಈಗ ಘಟನೆ ಬೆಳಕಿಗೆ ಬಂದಿದೆ.
ಮುಂಬೈನ ಅಂಧೇರಿ- ಕುರ್ಲ ರಸ್ತೆಯಲ್ಲಿರುವ ಹೋಟೆಲ್ನಲ್ಲಿ ನವೆಂಬರ್ 8ರಂದು ಎಂಗೇಜ್ಮೆಂಟ್ ಪಾರ್ಟಿ ಇತ್ತು. ಅದಕ್ಕೆ ನಾನು ಮತ್ತು ಇನ್ನೂ ಇಬ್ಬರು ಯುವತಿಯರು ಹೋಗಿದ್ದೆವು. ಪಾರ್ಟಿ ಮುಗಿಸಿಕೊಂಡು ಹೊರಡುವಾಗ ನಾನೇ ಕೊನೆಯವಳಾಗಿದ್ದೆ. ಆಗ ನನ್ನ ಮೇಲೆ ಮೂವರು ಯುವಕರು ಅತ್ಯಾ#ಚಾರ ನಡೆಸಿದ್ದಾರೆ ಎಂದು ಸಂತ್ರಸ್ತ ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
28 ವರ್ಷದ ಅವಿನಾಶ್ ಪಂಗೇಕರ್, 27 ವರ್ಷದ ಶಿಶಿರ, 25 ವರ್ಷದ ತೇಜಸ್ ಎಂಬ ಮೂವರು ಸೇರಿ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಮುಂಬೈ ನಿವಾಸಿಯಾಗಿರುವ ಪಂಗೇಕರ್ ತನ್ನ ಎಂಗೇಜ್ಮೆಂಟ್ ಪಾರ್ಟಿಗೆ ಗೆಳೆಯರನ್ನು ಆಹ್ವಾನಿಸಿದ್ದ. ತನ್ನದೇ ಎಂಗೇಜ್ಮೆಂಟ್ ಪಾರ್ಟಿಯಲ್ಲಿ ಗೆಳೆತಿಯ ಮೇಲೆ ಆತ ಅತ್ಯಾ#ಚಾರ ಎಸಗಿದ್ದಾನೆ.
ನನ್ನ ಗೆಳೆಯನಾದ ಪಂಗೇಕರ್ನ ಎಂಗೇಜ್ಮೆಂಟ್ ಪಾರ್ಟಿಗೆ ಹೋಗಿದ್ದಾಗ ಆತ ನನಗೆ ಬಲವಂತವಾಗಿ ಆಲ್ಕೋಹಾಲ್ ಕುಡಿಸಿದ್ದ. ನನ್ನ ಜೊತೆಗೆ ಬಂದಿದ್ದ ಇನ್ನಿಬ್ಬರು ಯುವತಿಯರು ಹೋದ ಬಳಿಕ ನನ್ನ ಮೇಲೆ ಲೈಂ#ಗಿಕ ದೌರ್ಜನ್ಯ ನಡೆಸಿದ್ದ. ಆತನ ಜೊತೆಗೆ ಇನ್ನಿಬ್ಬರು ಕೂಡ ಅತ್ಯಾ#ಚಾರ ನಡೆಸಿದ್ದಾರೆ ಎಂದು ದೂರಿನಲ್ಲಿ ಯುವತಿ ವಿವರಿಸಿದ್ದಾಳೆ.
ಆ ಸಂತ್ರಸ್ತ ಯುವತಿ ಈ ವಿಷಯವನ್ನು ಯಾರಿಗೂ ಹೇಳಿರಲಿಲ್ಲ. ಆದರೆ, ಮೂರ್ನಾಲ್ಕು ದಿನಗಳಾದ ಮೇಲೆ ಆಕೆ ತನ್ನ ಮನೆಯವರಿಗೆ ಈ ವಿಷಯ ಹೇಳಿದಳು. ಅವರು ಆಕೆಯನ್ನು ಕರೆದುಕೊಂಡು ಪೊಲೀಸ್ ಠಾಣೆಗೆ ಹೋಗಿ, ದೂರು ಕೊಡಿಸಿದರು.
Comments are closed.