ಕ್ರೀಡೆ

ಬಾಂಗ್ಲಾದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಶಾಜಿಬ್ ಆತ್ಮಹತ್ಯೆ

Pinterest LinkedIn Tumblr


ಢಾಕಾ: ಬಾಂಗ್ಲಾದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಶಾಜಿಬ್ ದುರ್ಗಾಪುರದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದ ಸ್ಥಳೀಯ ಪೊಲೀಸರು ಖಚಿತಪಡಿಸಿದ್ದಾರೆ.

21 ವರ್ಷದ ಶೋಜಿಬ್ 19 ವರ್ಷದೊಳಗಿನ ಬಲಗೈ ಬ್ಯಾಟ್ಸ್‌ಮನ್ ಆಗಿದ್ದು, ಕೊನೆಯ ಬಾರಿಗೆ 2017-18ರಲ್ಲಿ ಢಾಕಾ ಪ್ರೀಮಿಯರ್ ಲೀಗ್‌ನಲ್ಲಿ ಶೈನ್‌ಪುಕೂರ್ ಕ್ರಿಕೆಟ್ ಕ್ಲಬ್ ಪರ ಆಡಿದ್ದರು. ಅವರು 2017ರಲ್ಲಿ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ವಿರುದ್ಧ ಮೂರು ಯುವ ಏಕದಿನ ಪಂದ್ಯಗಳನ್ನು ಆಡಿದ್ದಾರೆ.

2018 ರ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶದ 19 ವರ್ಷದೊಳಗಿನವರ ತಂಡದಲ್ಲೂ ಅವರನ್ನು ಸೇರಿಸಿಕೊಳ್ಳಲಾಯಿತು. ಆದರೆ, ಅವರು ಮಾರ್ಚ್ 2018 ರಿಂದ ಪಂದ್ಯವನ್ನು ಆಡಿರಲಿಲ್ಲ. ಆದರೆ ಯಾವ ಕಾರಣಕ್ಕೆ ಶಾಜಿಬ್ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿಲ್ಲ.

Comments are closed.