ಅಂತರಾಷ್ಟ್ರೀಯ

ಹಳೆಯ ಲವ್ವರ್ ಹೆಸರನ್ನು ಟ್ಯಾಟೂ ಹಾಕಿಸಿಕೊಳ್ಳಲು ಹೊರಟ ಭಾವಿ ಪತ್ನಿ; ಸಾಮಾಜಿಕ ಜಾಲತಾಣದಲ್ಲಿ ಸಲಹೆ ಕೇಳಿದ ಭಾವಿ ಪತಿ

Pinterest LinkedIn Tumblr


ಇಲ್ಲೊಬ್ಬಳು ಮದುವೆಗೆ ಮುನ್ನವೇ ಮಾಜಿ ಪ್ರಿಯಕರ ಹೆಸರನ್ನು ಹಚ್ಚೆ ಹಾಕಿಸಿಕೊಳ್ಳಲು ಹೊರಟಿದ್ದಾಳೆ. ಇದರಿಂದ ಬೇಸತ್ತ ಭಾವಿ ಪತಿ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಸಲಹೆ ನೀಡಿ ಎಂದು ಕೇಳಿಕೊಂಡಿದ್ದಾನೆ.

ಅಮೆರಿಕ ಮೂಲಕ ವ್ಯಕ್ತಿಯೊಬ್ಬನಿಗೆ ಹುಡುಗಿಯೊಬ್ಬಳ ಜೊತೆ ವಿವಾಹ ನಿಶ್ಚಯವಾಗಿದೆ. ಆದರೆ ವಿವಾಹಕ್ಕೂ ಮೊದಲೇ ಹಳೆಯ ಲವರ್​ ಹೆಸರನ್ನು ಟ್ಯಾಟ್ಯೂ ಹಾಕಿಸಿಕೊಳ್ಳಲು ಮುಂದಾಗಿದ್ದಾಳೆ. ಇದರಿಂದ ಗೊಂದಲಗೊಂಡ ಭಾವಿ ಪತಿ ಸಾಮಾಜಿಕ ಜಾಲತಾಣದಲ್ಲಿ ಘಟನೆಯನ್ನು ಬರೆದುಕೊಂಡಿದ್ದಾನೆ.

ಆತನ ಪತ್ನಿ ಮದುವೆಗೂ ಮುನ್ನ ಪ್ರಿಯಕರನನ್ನು ಪ್ರೀತಿಸುತ್ತಿದ್ದಳು. ಆದರೆ ಆತ ಸಾವನ್ನಪ್ಪುತ್ತಾನೆ . ಈ ವಿಚಾರ ತಿಳಿದ ಆಕೆ ವಿಚಲಿತಗೊಂಡಿದ್ದಳು.ಪ್ರಿಯಕರ ಸತ್ತ ನೋವಿನಿಂದ ಹೊರಬಾರಲು ಪ್ರಯತ್ನಿಸುತ್ತಿದ್ದಳು. ಹಾಗಾಗಿ ಪತಿಯಿಂದ ಕೊಂಚ ದೂರವಿದ್ದಳು, ಪ್ರತಿದಿನ ಅಳುತ್ತಾ ಇದ್ದ ಆಕೆ ಏಕಾಂಗಿಯಾಗಿರಲು ಬಯಸಿದಳು. ನಂತರ ಸಹೋದರೊಂದಿಗೆ ಸ್ವಲ್ಪ ದಿನಗಳ ಕಾಲ ಉಳಿದುಕೊಳ್ಳಲು ಮುಂದಾಗುತ್ತಾಳೆ.

ಸ್ವಲ್ಪ ದಿನಗಳ ಬಳಿಕ ಆಕೆಯ ಬೇಸರ ಕಡಿಮೆಯಾದಂತೆ ಭಾವಿ ಪತಿ ಬಳಿ ಮನೆಗೆ ಹಿಂತಿರುಗುವುದಾಗಿ ಹೇಳಿಕೊಳ್ಳುತ್ತಿದ್ದಳು. ಆತ ಕೂಡ ಆಕೆ ಯಾವಾಗ ಮನೆಗೆ ಬರುತ್ತೀಯಾ ಎಂದು ಕೇಳುತ್ತಿರಲಿಲ್ಲವಂತೆ. ಮೂರು ವಾರಗಳು ಕಳೆದ ನಂತರ ಆಕೆ ಭಾವಿ ಪತಿ ಮನೆಗೆ ಬರುತ್ತಾಳೆ.

ಸ್ನೇಹಿತರ ಸಂಪರ್ಕದಲ್ಲಿದ್ದ ಆಕೆ ಮಾಜಿ ಪ್ರಿಯಕರಿಗೆ ಗೌರವ ಸೂಚಿಸುವ ಸಲುವಾಗಿ ಪ್ಲಾನ್​ ಹಾಕಿಕೊಳ್ಳುತ್ತಾರೆ. ಆಕೆಯ ಪ್ಲಾನ್​ ಅನ್ನು ಭಾವಿ ಪತಿ ಬಳಿ ಬಂದು ಹೇಳುತ್ತಾಳೆ. ಪ್ರಿಯಕರ ನೆನನಪಿಗಾಗಿ ಆತನ ಹೆಸರನ್ನು ಎಡಗೈಮೇಲೆ ಟ್ಯಾಟೂ ಹಾಕಬೇಕು ಎಂದುಕೊಂಡಿದ್ದೇನೆ ಎನ್ನುತ್ತಾಳೆ.

ಇದನ್ನು ಕೇಳಿದ ಭಾವಿ ಪತಿ ಆಕೆಯನ್ನು ಪ್ರಶ್ನಿಸುತ್ತಾನೆ. ನಿನಗೇಕೆ ಈ ರೀತಿಯ ಆಲೋಚನೆ ಬಂತು ಎಂದು ಹೇಳುತ್ತಾನೆ. ನನಗೆ ತಿಳಿಸದೆ ಈ ನಿರ್ಧಾರಕ್ಕೆ ಏಕೆ ಬಂದೆ. ಇದೊಂದು ರೀತಿ ವಿಚಿತ್ರವಾದ ನಿರ್ಧಾರ ಎಂದು ಹೇಳುತ್ತಾನೆ. ಆತನ ಮಾತು ಕೇಳಿ ಆಕೆ ಹೊಡೆಯಲು ಬರುತ್ತಾಳೆ.

ಇಬ್ಬರ ನಡುವೆ ಜಗಳವಾಗುತ್ತದೆ. ಈ ನಿರ್ಧಾರರ ಬದಲಾಯಿಸುವವರಿಗೆ ಮದುವೆ ಮುಂದೂಡಲು ಮುಂದಾಗುತ್ತಾನೆ ಭಾವಿ ಪತಿ. ಆದರೆ ಆಕೆ ಪುನಃ ಸಹೋದರ ಮನೆಗೆ ತೆರಳುತ್ತಾಳೆ. ಹೀಗೆ ನಡೆದ ಘಟನೆಯನ್ನು ರೆಡಿಟ್​ ಜಾಲತಾಣದಲ್ಲಿ ಬರೆದಿದ್ದಾನೆ.

ಆತ ಬರೆದ ಘಟನೆಯನ್ನು ಓದಿದ ಅನೇಕರು ಕೆಲವು ಸಲಹೆ ನೀಡಿದ್ದಾರೆ. ಕೆಲವರು ಅಂತಹವರನ್ನು ವಿವಾಹವಾಗುವುದು ಬೇಡ ಎಂದರೆ. ಇನ್ನು ಕೆಲವರು ಒಳ್ಳೆಯ ನಿರ್ಧಾರ ಕೈಗೊಂಡಿದ್ದೀರಾ ಎಂದಿದ್ದಾರೆ.

Comments are closed.