ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಗೆ 2019-20ನೆ ಸಾಲಿನ ಹುಡ್ಕೋ ಪ್ರಶಸ್ತಿ ಲಭಿಸಿದೆ.
ಮಂಗಳೂರು ಮಹಾನಗರ ಪಾಲಿಕೆಗೆ ತ್ಯಾಜ್ಯ ನೀರನ್ನು ಸಂಸ್ಕರಿಸಿ ಕಾರ್ಖಾನೆಗಳಿಗೆ ಸಮರ್ಪಕವಾಗಿ ಮರು ಬಳಕೆ ಗೆ ಪೂರೈಕೆ ಮಾಡಿರುವ ಯೋಜನೆಯನ್ನು ಪರಿಗಣಿಸಿ (ಕೇಂದ್ರ ಸರಕಾರದ ಸ್ವಾಮ್ಯದ ವಸತಿ ಮತ್ತು ನಗರಾಭಿವೃದ್ಧಿ ನಿಗಮ ) ಹುಡ್ಕೋ 2019-20ನೆ ಸಾಲಿನ ಉತ್ತಮ ಯೋಜನೆಯೆಂದು ಪ್ರಶಸ್ತಿ ನೀಡಿದೆ.
ನಗರದ ಪ್ರದೇಶದ ಜೈವಿಕ ಪರಿಸರದ ಸುಧಾರಣೆಯ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ತೆಗೆದುಕೊಂಡ ಉತ್ತಮ ನೈರ್ಮಲ್ಯ ಯೋಜನೆಯೆಂದು ಹುಡ್ಕೋ ಸಂಸ್ಥೆ ಪರಿಗಣಿಸಿದೆ. ಮಂಗಳೂರು ಮಹಾನಗರ ಪಾಲಿಕೆಯ ತ್ಯಾಜ್ಯ ನೀರು ಮರುಬಳಕೆಯ ನಿಟ್ಟಿನಲ್ಲಿ ಸಂಘಟಿತವಾಗಿ ಅನುಷ್ಠಾನಗೊಳಿಸಿದ ಯೋಜನೆಯ ಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಪ್ರಶಸ್ತಿ ಪ್ರಮಾಣ ಪತ್ರ ಮತ್ತು ಒಂದು ಲಕ್ಷ ನಗದು ಮೊತ್ತವನ್ನು ಮಂಗಳೂರು ಮಹಾನಗರ ಪಾಲಿಕೆಗೆ ಪ್ರಶಸ್ತಿಯಾಗಿ ನೀಡಲಾಗಿದೆ ಎಂದು ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.