ಕೊರೋನಾ ಲಾಕ್ಡೌನ್ ನಂತರ ಜನಸಾಮಾನ್ಯರ ಡೈಲಿ ಲೈಫ್ ದುಬಾರಿ ಆಗ್ತಿದೆ. ಇದೀಗ ಅಡುಗೆ ಎಣ್ಣೆಗಳ ರೇಟ್ ಶೇಕಡಾ 30ರಷ್ಟು ಏರಿಕೆ ಆಗಿದೆ. ಕಳೆದ ವರ್ಷಕ್ಕೆ ಸೋಲಿಸಿದರೆ ಕುಕ್ಕಿಂಗ್ ಆಯಿಲ್ ಜನರ ಜೇಬು ಸುಡ್ತಿದೆ. ಕಡಲೆಕಾಯಿ ಎಣ್ಣೆ, ಸಾಸಿವೆ ಎಣ್ಣೆ, ವನಸ್ಪತಿ ಎಣ್ಣೆ, ಸೋಯಾಬಿನ್, ಸೂರ್ಯಕಾಂತಿ ಎಣ್ಣೆ, ಪಾಮ್ ಆಯಿಲ್ ದರ ಏರುತ್ತಲೇ ಇದೆ. ದರ ಏರುತ್ತಿದ್ದಂತೆ ಗೃಹ ಸಚಿವ ಅಮಿತ್ ಶಾ ಉನ್ನತ ಸಚಿವರ ಜತೆ ಸರಣಿ ಮೀಟಿಂಗ್ ನಡೆಸಿದ್ದಾರೆ. ಅಡುಗೆ ಎಣ್ಣೆ ರೇಟ್ ಹೆಚ್ಚಾದ್ರೆ ಸರ್ಕಾರದ ಮೇಲೆ ಎಫೆಕ್ಟ್ ಆಗೋ ಭೀತಿ ಶಾ ಅವರನ್ನು ಕಾಡಿದೆ. ಈರುಳ್ಳಿ ಜೊತೆಗೆ ಅಡುಗೆ ಎಣ್ಣೆ ದರ ಏರಿಕೆಯೂ ವಿಪಕ್ಷಗಳ ಹೋರಾಟಕ್ಕೆ ಅಸ್ತ್ರವಾಗೋ ಆತಂಕ ಮನೆ ಮಾಡಿದೆ. ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ಅಮಿತ್ ಶಾ ಮಾಹಿತಿ ಪಡೆದುಕೊಂಡಿದ್ದಾರೆ. ವಿದೇಶದಿಂದ ಆಮದಾಗುವ ಎಣ್ಣೆ ಮೇಲೆ ಭಾರತ ಹೆಚ್ಚು ಅವಲಂಬಿಸಿರೋದೆ ಇದಕ್ಕೆ ಕಾರಣ.
ಯಾವ ಎಣ್ಣೆ, ಎಷ್ಟು ರೇಟ್..!
ಎಣ್ಣೆ 2019
ಕಡಲೆಕಾಯಿ ಎಣ್ಣೆ- 140 ರೂ.
ಸಾಸಿವೆ ಎಣ್ಣೆ – 105 ರೂ.
ವನಸ್ಪತಿ ಎಣ್ಣೆ-90 ರೂ.
ಸೋಯಾಬಿನ್ ಎಣ್ಣೆ- 95 ರೂ.
ಸೂರ್ಯಕಾಂತಿ ಎಣ್ಣೆ- 105 ರೂ.
ಪಾಮ್ ಆಯಿಲ್- 75 ರೂ.
……………….
2020
ಕಡಲೆಕಾಯಿ ಎಣ್ಣೆ- 170 ರೂ.
ಸಾಸಿವೆ ಎಣ್ಣೆ – 130 ರೂ.
ವನಸ್ಪತಿ ಎಣ್ಣೆ-115 ರೂ.
ಸೋಯಾಬಿನ್ ಎಣ್ಣೆ- 116 ರೂ.
ಸೂರ್ಯಕಾಂತಿ ಎಣ್ಣೆ – 180 ರೂ.
ಪಾಮ್ ಆಯಿಲ್ – 110 ರೂ.
Comments are closed.