ವಿಶ್ವದೆಲ್ಲೆಡೆ ಕೊರೋನಾ ವಾಕ್ಸಿನ್ ದೇ ಮಾತು. ಪ್ರಥಮ ಹಂತದ ಪರೀಕ್ಷೆ ಮುಗಿಸಿದ ವಾಕ್ಸಿನ್ ಗಳು ಕೆಲವಾದರೆ ಎರಡನೇ ಹಂತ ಮುಗಿಸಿ ಮೂರನೇ ಹಂತಕ್ಕೆ ಲಗ್ಗೆ ಇಟ್ಟ ವಾಕ್ಸಿನ್ ಗಳು ಕೆಲವೇ ಮಾತ್ರ. ಅವುಗಳಲ್ಲಿ ನಮ್ಮ ದೇಶದ್ದೇ ಆದ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೋವಾಕ್ಸಿನ್ ಲಸಿಕೆ ಮುಂಚೂಣಿಯಲ್ಲಿದೆ. ಇದು ಮೊದಲೆರಡು ಹಂತಗಳಲ್ಲಿ ಪಾಸಾಗಿ ಈಗ ಮೂರನೇ ಹಂತದ ಪರೀಕ್ಷೆ ನಡೀತಾ ಇದೆ. ಈ ಹಂತದಲ್ಲಿ ಈ ಲಸಿಕೆಯನ್ನು ಸ್ವಯಂ ಪ್ರೇರಿತವಾಗಿ ಬಂದ ಸ್ವಯಂಸೇವಕರಿಗೆ ನೀಡಲಾಗುತ್ತದೆ. ಆದರೆ ಮೂರನೇ ಹಂತದ ಲಸಿಕೆಯನ್ನು ಹರಿಯಾಣಾದ ಆರೋಗ್ಯ ಸಚಿವ ಶ್ರೀ ಅನಿಲ ವಿಜ್ ಕೋವಾಕ್ಸಿನ್ ತೆಗೆದುಕೊಳ್ಳುವ ಮೂಲಕ ದಿಟ್ಟತನ ತೋರಿದ್ದಾರೆ.
ಲಸಿಕೆಯನ್ನು ಮನುಷ್ಯರಿಗೆ ಚುಚ್ಚಿ ಅದರಿಂದ ಕೊರೋನಾ ವಾಸಿಯಾಗುವುದಲ್ಲದೆ ತಿಂಗಳುಗಳು ಕಳೆದರೂ ಬೇರೆ ಯಾವುದೇ ಅಡ್ಡ ಪರಿಣಾಮಗಳಿಲ್ಲ ಅಂತ ಖಾತ್ರಿಯಾದ ಬಳಿಕವಷ್ಟೇ ಅದನ್ನು ಜನಸಾಮಾನ್ಯರಿಗೆ ನೀಡಲಾಗುತ್ತದೆ. ಈಗ 3ನೆ ಹಂತದ ಈ ಪರೀಕ್ಷೆಯನ್ನು ಸ್ವತಃ ವೈದ್ಯಕೀಯ ಸಚಿವರೇ ತೆಗೆದೊಕೊಳ್ಳುವ ಮೂಲಕ ಮೂರನೇ ಹಂತದ ಪರೀಕ್ಷೆಗೆ ಚಾಲನೆ ನೀಡಿದ್ದಾರೆ.
Comments are closed.