ಬೆಂಗಳೂರು: ಕೊರೋನಾ ರಾಜ್ಯದಲ್ಲಿ ಇಳಿಕೆಯಾಗುತ್ತಿದೆ. ಆದರೂ ಇದರ ಎರಡನೇ ಅಲೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಹೆಚ್ಚಾಗಬಹುದೇ ಎಂದು ಕಾದು ನೋಡಬೇಕಿದೆ ಎನ್ನುತ್ತಾರೆ ಕೊರೋನಾ ಪರೀಕ್ಷೆಯ ನೋಡಲ್ ಅಧಿಕಾರಿ ಡಾ ಸಿ ಎನ್ ಮಂಜುನಾಥ್.
ಕೊರೋನಾ ಅಲೆ ಸಮತಟ್ಟಾದ ಹಂತದಲ್ಲಿದೆ. ಕೊರೋನಾ ಪರೀಕ್ಷೆ ಹೆಚ್ಚಾದರೂ ಕೂಡ, ಸಕಾರಾತ್ಮಕತೆ ದರ 1- 1.5%ರಷ್ಟಿದೆ. ರೋಗ ಮಾದರಿಯ ಪ್ರಕಾರ, 2-3 ತಿಂಗಳ ನಂತರ ಎರಡನೇ ಉಲ್ಬಣವು ಸಂಭವಿಸುತ್ತದೆ. ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಅದು ನಮಗೆ ಸಂಭವಿಸುತ್ತದೆಯೇ ಎಂದು ನಾವು ಕಾಯಬೇಕು ಎಂದರು.
ಯುರೋಪಿಯನ್ ರಾಷ್ಟ್ರಗಳಲ್ಲಿ ಈಗ ಕೊರೋನಾ ಎರಡನೇ ಅಲೆ ಸೃಷ್ಟಿಯಾಗಿದ್ದು, ದೆಹಲಿ ಮತ್ತು ಮುಂಬೈಗಳಲ್ಲಿ ಕೂಡ ನಮ್ಮ ದೇಶಗಳಲ್ಲಿ ಮತ್ತೆ ಎರಡನೇ ಅಲೆ ಬಂದಿದೆ. ಇದು ಮೊದಲನೇ ಹಂತ, ಎರಡನೇ ಹಂತ ಎಂದು ಹೇಳಲು ಸಾಧ್ಯವಿಲ್ಲ. ಇದು ವಿದೇಶದಿಂದ ಬಂದಿದ್ದು ಅಥವಾ ಭಾರತದಲ್ಲಿಯೇ ಹುಟ್ಟಿಕೊಂಡ ವೈರಸ್ ಎಂದು ಸಹ ವಿಭಜಿಸಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಸಮುದಾಯ ಹಂತಕ್ಕೆ ತಲುಪಿದೆ ಎಂದಿದ್ದಾರೆ.
ಅಕ್ಟೋಬರ್ 11ರ ನಂತರ ಕೊರೋನಾ ವೈರಸ್ ನ ಪ್ರಭಾವ ಇಳಿಮುಖವಾಗಿದೆ ಎಂದು ನಿಮ್ಹಾನ್ಸ್ ನ ವೈದ್ಯ ಡಾ ಪ್ರದೀಪ್ ಬಣಂದೂರು ಹೇಳುತ್ತಾರೆ. ಆರ್ಥಿಕ ಚಟುವಟಿಕೆಗಳು ಇತ್ತೀಚೆಗಷ್ಟೇ ಪುನಶ್ಚೇತನಗೊಂಡಿದೆ, ಆಗ ಕೊರೋನಾ ಸೋಂಕು ವ್ಯಾಪಕವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಮಣಿಪಾಲ ಆಸ್ಪತ್ರೆಯ ಡಾ ಸತ್ಯನಾರಾಯಣ ಮೈಸೂರು ಹೇಳುತ್ತಾರೆ.
ಮೂರು ತಿಂಗಳ ಚಳಿಗಾಲದಲ್ಲಿ ಜನರ ರೋಗನಿರೋಧಕ ಶಕ್ತಿ ಕುಂದಬಹುದು.ಅದರಿಂದ ಎರಡನೇ ಅಲೆ ಹೆಚ್ಚಾಗುವ ಸಾಧ್ಯತೆಯಿದೆ. ಮುಂದಿನ 3 ತಿಂಗಳು ನಿರ್ಣಾಯಕ.ಜನರು ಎಚ್ಚೆತ್ತುಕೊಳ್ಳದಿದ್ದರೆ ಎರಡನೇ ಅಲೆ ಸೃಷ್ಟಿಯಾಗಬಹುದು ಎಂದು ಡಾ ಸತ್ಯನಾರಾಯಣ ಹೇಳುತ್ತಾರೆ.
Comments are closed.