ಮಂಗಳೂರು : “ಮಕ್ಕಳಿಗಾಗಿ ಆಸ್ತಿ ಮಾಡಬೇಡಿ ಮಕ್ಕಳನ್ನೇ ಆಸ್ತಿ ಮಾಡಿ, ಮಕ್ಕಳ ರಕ್ಷಣೆ ನಮ್ಮೆಲ್ಲರ ಜವಾಬ್ಬಾರಿ ಮಕ್ಕಳಿಗೆ ಯಾವುದೇ ರೀತಿಯ ಸಮಸ್ಯೆಯಾದರೂ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಬಹುದು. ಪೊಲೀಸ್ ಇಲಾಖೆಯಲ್ಲಿ ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ಪಡೆಯಬಹುದು. ಮಕ್ಕಳು ಸಂಕಷ್ಟದಲ್ಲಿದ್ದಾಗ 1098ಕರೆ ಮಾಡಿ ಎಂದು ಎಸೈ ಶ್ರೀಮತಿ ಮಂಜುಳಾ ಅವರು ಹೇಳಿದರು.
ಅವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಂಗಳಜೋತ್ಯಿ ಸಮಗ್ರ ಶಾಲೆಯಲ್ಲಿ ನಡೆದ ಚೈಲ್ಡ್ ಲೈನ್ ಸೆ ದೋಸ್ತಿ ವೀಕ್ನ ಸಮಾರೋಪ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದರು.
ಚೈಲ್ಡ್ ಲೈನ್ ನಿರ್ದೇಶಕರಾದ ಶ್ರೀಯುತ ರೆನ್ನಿ ಡಿ ಸೋಜರವರು ಚೈಲ್ಡ್ ಲೈನ್ ಸೆ ದೋಸ್ತಿ ವೀಕ್ ಸಪ್ತಾಹದ ಮೂಲಕ ವಿವಿಧ ಇಲಾಖೆ,ಮಕ್ಕಳು ಮತ್ತು ಸಮುದಾಯಕ್ಕೆ ಜನ ಜಾಗೃತಿ ಮಾಡಿರುವ ಕಾರ್ಯಕ್ರಮದ ವೀಡಿಯೋ ಚಿತ್ರಣವನ್ನು ಅನಾವರಣಗೊಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಂಗಳ ಜ್ಯೊತಿ ಸಮಗ್ರ ಶಾಲೆ ಆಡಳಿತಾಧಿಕಾರಿ ಗಣೇಶ್ ಭಟ್ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು.
ಮಂಗಳ ಜ್ಯೋತಿ ಸಮಗ್ರ ಶಾಲೆಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಯುತ ರಮೇಶ್ ಆಚಾರ್ಯ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು, ಚೈಲ್ಡ್ ಲೈನ್ ನಗರ ಸಂಯೋಜಕರಾದ ಸಿಸ್ಟರ್ ಹಿಲರಿಯ ,ಸುಳ್ಯ ಶಿಕ್ಷಣ ಸಂಪನೂಲ್ಮ ಕೇಂದ್ರದ ಮಾಧವ ಗೌಡ ,ಪಡಿ ಸಂಸ್ಥೆಯ ಸಿಬ್ಬಂದಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಚೈಲ್ಡ್ ಲೈನ್ ಸದಸ್ಯೆ ರೇವತಿ ಕಾರ್ಯಕ್ರಮವನ್ನು ನಿರೂಪಿಸಿ ,ಮಂಗಳಜ್ಯೋತಿ ಸಮಗ್ರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರು ರಮೇಶ್ ಆಚಾರ್ಯ ಸ್ವಾಗತಿಸಿ,ಚೈಲ್ಡ್ ಲೈನ್ ಸದಸ್ಯೆ ಜಯಂತಿ ವಂದಿಸಿದರು.
Comments are closed.