ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪೊಗರು ಸಿನಿಮಾಗಾಗಿ ಉದ್ದ ಕೂದಲು ಬಿಟ್ಟಿದ್ದು ನಿಮಗೆಲ್ಲ ಗೊತ್ತೇ ಇದೆ. ಈಗ ಧ್ರುವ ಸರ್ಜಾ ಒಂದೊಳ್ಳೆ ಕಾರಣಕ್ಕಾಗಿ ಅವ್ರ ಉದ್ದದ ಕೂದಲಿಗೆ ಕತ್ತರಿ ಹಾಕಿಸಿದ್ದಾರೆ. ಹೌದು, ಪೊಗರು ಸಿನಿಮಾದ ಚಿತ್ರೀಕರಣ ಸಂಪೂರ್ಣಗೊಂಡಿದ್ದು, ಧ್ರುವ ಈ ನಿರ್ಧಾರ ಕೈಗೊಂಡಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿರೋ 15 ವರ್ಷದ ಒಳಗಿನ ಮಕ್ಕಳಿಗೆ, ಕೀಮೋಥೆರಪಿ ಸಮಯದಲ್ಲಿ ಕೂದಲು ಉದುರುತ್ತಿರುತ್ತದೆ. ಅಂತಹ ಮಕ್ಕಳಿಗೆ ವಿಗ್ ಮಾಡಲು ಧ್ರುವ ಸರ್ಜಾ ತಮ್ಮ ಕೂದಲನ್ನು ದಾನ ಮಾಡಿದ್ದಾರೆ. 10 ಇಂಚಿಗಿಂತ ಹೆಚ್ಚು ಉದ್ದವಿರೋ ಕೂದಲಿಂದ ವಿಗ್ ತಯಾರಿಸಬಹುದಾಗಿದೆ. ಆ ವಿಗ್ ಅನ್ನು ಕ್ಯಾನ್ಸರ್ ನಿಂದಾಗಿ ಕೀಮೋಥೆರಪಿಗೆ ಒಳಗಾಗುವ ಮಕ್ಕಳಿಗೆ ನೀಡಲಾಗುತ್ತೆ. ಈ ಕುರಿತು ವಿಡಿಯೋ ಮಾಡಿರುವ ಧ್ರುವ, ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಹಾಗೆ ತಮ್ಮ ಹೊಚ್ಚ ಹೊಸ ಲುಕ್ ಅನ್ನೂ ರಿವೀಲ್ ಮಾಡಿದ್ದಾರೆ.
ಇನ್ನು, ಪೊಗರು ಸಿನಿಮಾ ವಿಷಯಕ್ಕೆ ಬಂದರೆ, ಬಾಸು ಕರಾಬು ಅನ್ನೋ ಸಾಂಗ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಪಡ್ಡೆಗಳ ಬಾಯಲ್ಲಿ ಗುನುಗಾಡ್ತಿದೆ. ನಂದಕಿಶೋರ್ ಬರೆದು ನಿರ್ದೇಶಿಸಿರೋ ಈ ಸಿನಿಮಾದ ಡೈಲಾಗ್ ಟೀಸರ್ ಸಖತ್ ಸದ್ದು ಮಾಡಿತ್ತು. ಧ್ರುವ ಸರ್ಜಾರ ಖಡಕ್ ಲುಕ್ ಅಭಿಮಾನಿಗಳಲ್ಲಿ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದೆ.
ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ, ಪೊಗರು ಚಿತ್ರದಲ್ಲೂ ಚಷ್ಮಾ ಸುಂದರಿಯಾಗಿ ಕಾಣಿಸಿಕೊಂಡಿದ್ದು, ಕಿರಿಕ್ ಪಾರ್ಟಿ ಚಿತ್ರದ ಕ್ಯೂಟ್ ಸಾನ್ವಿ ಪಾತ್ರವನ್ನೇ ನೆನಪಿಸುವಂತಿದ್ದಾರೆ.
ಚಿತ್ರದ ಟ್ರೇಲರ್ ರಿಲೀಸ್‌ಗೂ ಮೊದಲೇ ಡೈಲಾಗ್ ಟ್ರೇಲರ್ ಧೂಳೆಬ್ಬಿಸಿದ್ದೂ ಯೂಟ್ಯೂಬ್‌ನಲ್ಲಿ ಎರಡೂವರೆ ಕೋಟಿಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಆ್ಯಕ್ಷನ್ ಫ್ರಿನ್ಸ್ ಧ್ರುವ ಸರ್ಜಾ ವಿಭಿನ್ನವಾಗಿ ಡೈಲಾಗ್ ಹೇಳಿ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಫೇವರಿಟ್ ಆಗಿದ್ದಾರೆ. ಇನ್ನು, ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ನೀಡಿದ್ದು, ನಟಿ ಮಯೂರಿ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪೊಗರು ಚಿತ್ರಕ್ಕೆ ಬಿ.ಕೆ.ಗಂಗಾಧರ್ ಬಂಡವಾಳ ಹೂಡಿದ್ದು ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ.
Comments are closed.