ಕರ್ನಾಟಕ

ಭಾರತ್ ಬಂದ್ ಗೆ ಕರುನಾಡು ಸ್ತಬ್ಧ

Pinterest LinkedIn Tumblr


ಬೆಂಗಳೂರು: ಕೇಂದ್ರದ ರೈತ ವಿರೋಧಿ ಕೃಷಿ ವಸೂದೆಯನ್ನು ವಿರೋಧಿಸಿ ರೈತರು ನೀಡಿದ್ದ ಬಂದ್ ಯಶಸ್ವಿಯಾಗಿದೆ. ಇಡೀ ಕರುನಾಡು ಸ್ಥಬ್ದವಾಗಿದೆ. ಇತ್ತ ಬೆಂಗಳೂರು ಅನ್ನದಾತರ ಆಕ್ರೋಶಕ್ಕೆ ಅಲ್ಲೋಲ ಕಲ್ಲೋಲವಾಗಿತ್ತು. ರೈತ ಪರ ಸಂಘಟನೆಗಳ ಹೋರಾಟದ ಕಿಚ್ಚಿಗೆ ಕಾರ್ಮಿಕ ಸಂಘಟನೆಗಳು ಬೇರೆ ಬೇರೆ ಪಕ್ಷಗಳು ಬೆಂಬಲ ವ್ಯಕ್ತಪಡಿಸಿದ್ದು ಬೃಹತ್ ರ್ಯಾಲಿ ನಡೆಸುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು.

ಎಪಿಎಂಸಿ, ಭೂ ಸುಧಾರಣೆ ಕಾಯ್ದೆ ವಿದ್ಯುತ್ ಖಾಸಗೀಕರಣ ವಿರೋಧಿಸಿ ಅಖಿಲಭಾರತ ಕಿಸಾನ್ ಸಂಘರ್ಷ ಸಮಿತಿ ಕರೆಕೊಟ್ಟಿದ್ದ ಬಂದ್​ಗೆ ಕರ್ನಾಟಕ ಸ್ಥಭ್ದವಾಗಿತ್ತು. ಬೆಂಗಳೂರಿನಲ್ಲಿ ವಾಹನ ಸಂಚಾರ ಪ್ರತಿನಿತ್ಯದಂತೆ ಇದ್ರೂ ಕೂಡ ಪ್ರತಿಭಟನೆಯ ಬಿಸಿ ಮಾತ್ರ ಜೋರಾಗಿತ್ತು.

ಬೆಂಗಳೂರಿನ ಟೌನ್​ಹಾಲ್, ಮೈಸೂರು ಬ್ಯಾಂಕ್ ಸರ್ಕಲ್, ಫ್ರಿಡಂ ಪಾರ್ಕ್, ಮೌರ್ಯ ಸರ್ಕಲ್​ನಲ್ಲಿ ಬೆಳ್ಳಗೆಯಿಂದಲೇ ಪ್ರತಿಭಟನೆಯ ಕಿಚ್ಚು ಜೋರಾಗಿತ್ತು. ಮೈಸೂರು ಬ್ಯಾಂಕ್ ಸರ್ಕಲ್ ಮಧ್ಯದಲ್ಲಿ ಬೆಳ್ಳಂಬೆಳಗ್ಗೆ ಮಳೆಯಲ್ಲಿಯೇ ಕುರುಬೂರು ಶಾಂತಕುಮಾರ್ ಹಾಗೂ ಬೆಂಬಲಿಗರು ಕುಳಿತು ಪ್ರತಿಭಟಿಸಿದರು. ಅನ್ನದ ತಟ್ಟೆ ಹಿಡಿದು ತಿನ್ನಲು ಕೂತವನ ಬಾಯಿ ಮತ್ತು ಕಣ್ಣು ಮುಚ್ಚಿ ಪ್ರತಿಭಟನೆ ನಡೆಸಿದರು. ‘ಅನ್ನ ಕಿತ್ತು ಕೊಳ್ಳುವ ಸರ್ಕಾರಕ್ಕೆ ಧಿಕ್ಕಾರ’ ಎಂದು ಕೂಗಿದರು ಬಳಿಕ ಜಾಥಾ ಮೂಲಕ ಮೌರ್ಯ ಸರ್ಕಲ್​ಗೆ ಆಗಮಿಸಿ ಅಲ್ಲಿ ರೈತರ ಬಂದ್ ಬಗ್ಗೆ ಹಗುರವಾಗಿ ಮಾತಾನಾಡಿದ ಸಿಎಂ ಬಗ್ಗೆ ವಾಗ್ದಾಳಿ ನಡೆಸಿದರು.

ಇನ್ನೂ ಐಕ್ಯ ಹೋರಾಟ ಸಮಿತಿ ಪ್ರತಿಭೆಗೆ ಆಮ್ ಅದ್ಮಿ ಪಕ್ಷ, ದಲಿತ ಸಂಘರ್ಷ ಸಮಿತಿ ಕೂಡ ಸಾಥ್ ಕೊಟ್ಟರು. ಈ ಮಧ್ಯೆ ಮೌರ್ಯ ಸರ್ಕಲ್​ನಲ್ಲಿ ಯೂಥ್ ಕಾಂಗ್ರೆಸ್ ಮನೋಹರ್ ವತಿಯಿಂದ ಹಾಗೂ ಜೆಡಿಎಸ್ ನಗರ ಅಧ್ಯಕ್ಷ ನೇತೃತ್ವದಲ್ಲಿ ಕೂಡ ಪ್ರತಿಭಟನೆ ನಡೆಯಿತು. ಆ ಬಳಿಕ ಐಕ್ಯ ಹೋರಾಟ ಸಮಿತಿಯಿಂದ ಮೌರ್ಯ ಸರ್ಕಲ್​ನಿಂದ ಮೈಸೂರು ಬ್ಯಾಂಕ್​ವರೆಗೂ ಬೃಹತ್ ರ್ಯಾಲಿ ನಡೆಸಲಾಯ್ತು.

ಬೃಹತ್ ರ್ಯಾಲಿ ಹಿನ್ನಲೆ ಶೇಷಾದ್ರಿಪುರಂ ರಸ್ತೆ ಟ್ರಾಪಿಕ್ ಜಾಂ ಆಗಿತ್ತು. ರೈತರು ರಸ್ತೆ ಮಧ್ಯೆದಲ್ಲಿಯೇ ಮಲಗಿ ಬಾಯಿ ಬಡಿದುಕೊಂಡರು. ರಸ್ತೆಯಲ್ಲಿಯೇ ಉರುಳ ಸೇವೆ ಮಾಡಿದರು. ಸ್ಥಳದಲ್ಲಿ ಪೋಲಿಸ್ ಸರ್ಪಗಾವಲು ಇದ್ದು ರೈತರು ವಿಧಾನಸೌಧದತ್ತ ತೆರಳದಂತೆ ಬಂದೋಬಸ್ತ್ ಮಾಡಲಾಗಿತ್ತು. ಹೀಗಾಗಿ ವಿಧಾಮಸೌಧಕ್ಕೆ ಮುತ್ತಿಗೆ ವಿಫಲವಾಗಿದ್ದು ಆ ಬಳಿಕ ಐಕ್ಯ ಹೋರಾಟ ಸಮಿತಿ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಕುಳಿತು ಪ್ರತಿಭಟಿಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

Comments are closed.