ರಾಷ್ಟ್ರೀಯ

ಪಂಜಾಬ್ ನಲ್ಲಿ ಮತ್ತೆ ಖಾಲಿಸ್ತಾನ್ ಚಳವಳಿಗೆ ಸಂಚು: ಐಎಸ್ ಐಗೆ ಭಿಂದ್ರನ್ ವಾಲೆ ಸೋದರಳಿಯನ ಸಾಥ್!

Pinterest LinkedIn Tumblr


ನವದೆಹಲಿ: ಪಂಜಾಬ್ ನಲ್ಲಿ ಮತ್ತೆ ಖಾಲಿಸ್ತಾನ್ ಚಳವಳಿಯನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಪಾಕಿಸ್ತಾನದ ನಟೋರಿಯಸ್ ಗುಪ್ತಚರ ಇಲಾಖೆ ಐಎಸ್ ಐ(ಇಂಟರ್ ಸರ್ವಿಸ್ ಇಂಟೆಲಿಜೆನ್ಸ್) ಖಲಿಸ್ತಾನ ಭಯೋತ್ಪಾದಕ ಜರ್ನೈಲ್ ಸಿಂಗ್ ಭಿಂದ್ರನ್ ವಾಲೆ ಸೋದರಳಿಯ ಲಖ್ಬೀರ್ ಸಿಂಗ್ ನನ್ನು ದಾಳವಾಗಿ ಉಪಯೋಗಿಸಿಕೊಳ್ಳುತ್ತಿದೆ ಎಂಬ ಮಹತ್ತರ ಮಾಹಿತಿಯನ್ನು ಭಾರತೀಯ ಗುಪ್ತಚರ ಏಜೆನ್ಸಿ ಕಲೆ ಹಾಕಿದೆ ಎಂದು ವರದಿ ವಿವರಿಸಿದೆ.

ವರದಿಯ ಪ್ರಕಾರ, ಲಖ್ಬೀರ್ ಸಿಂಗ್ ರೋಡೆ ಹತ್ಯಗೀಡಾದ ಖಾಲಿಸ್ತಾನ್ ಉಗ್ರ ಜರ್ನೈಲ್ ಸಿಂಗ್ ಭಿಂದ್ರನ್ ವಾಲೆ ಸೋದರಳಿಯ ಮತ್ತು ಅಕಲ್ ತಖ್ತ್ ಜಾತೇದಾರ್ ಮಾಜಿ ಮುಖಂಡ ಜಸ್ಬೀರ್ ಸಿಂಗ್ ರೋಡೆಯ ಸಹೋದರ ಎಂದು ವರದಿ ತಿಳಿಸಿದೆ.

ಖಾಲಿಸ್ತಾನ್ ಪರವಾಗಿರುವ ಹಲವಾರು ಮುಖಂಡರ ಸಂಘಟನೆಗಳು ಪಾಕಿಸ್ತಾನ ಮತ್ತು ವಿದೇಶಗಳಲ್ಲಿ ಸಕ್ರಿಯವಾಗಿವೆ. ಆದರೆ ಖಾಲಿಸ್ತಾನ್ ಸಂಘಟನೆ ಹಾಗೂ ಮುಖಂಡರ ಚಟುವಟಿಕೆ ಮೇಎ ಭಾರತೀಯ ಭದ್ರತಾ ಏಜೆನ್ಸಿ ಸೂಕ್ಷ್ಮವಾಗಿ ಮಾಹಿತಿಯನ್ನು ಕಲೆಹಾಕಿವೆ.

ಖಾಲಿಸ್ತಾನ್ ಪರ ಸಂಘಟನೆಯನ್ನು ಪಾಕಿಸ್ತಾನ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದ್ದಿರುವುದಾಗಿ ಭಾರತ ಈ ಮೊದಲು ಎಚ್ಚರಿಸಿದ್ದು, ಪಾಕ್ ಈ ಸಂಘಟನೆ ಮೂಲಕ ಪಂಜಾಬ್ ನಲ್ಲಿ ಉಗ್ರ ಚಟುವಟಿಕೆ ಪುನರುಜ್ಜೀವನಗೊಳಿಸಲು ಸಂಚು ರೂಪಿಸಿರುವುದಾಗಿ ವಿವರಿಸಿದೆ.

ಭಾರತೀಯ ಗುಪ್ತಚರ ಇಲಾಖೆ ಏಜೆನ್ಸಿ ವರದಿ ಪ್ರಕಾರ, ಖಾಲಿಸ್ತಾನ್ ಪರ ಮುಖಂಡರಾದ ಗೋಪಾಲ್ ಸಿಂಗ್ ಚಾವ್ಲಾ, ಭಿಂದ್ರನ್ ವಾಲೆ ಸೋದರಳಿಯ ಲಖ್ಬೀರ್ ಸಿಂಗ್ ರೋಡೆ, ಗುರುರ್ಜಿತ್ ಸಿಂಗ್ ಚೀಮಾ ಖಾಲಿಸ್ತಾನ್ ಉಗ್ರ ಸಂಘಟನೆಯ ಸಕ್ರಿಯ ಸದಸ್ಯರಾಗಿದ್ದಾರೆ. ಇದರಲ್ಲಿ ಹಲವು ಸದಸ್ಯರು ಮತ್ತೆ ಖಾಲಿಸ್ತಾನ್ ಚಳವಳಿಯನ್ನು ಭಾರತದಲ್ಲಿ ಮತ್ತೆ ಪುನರುಜ್ಜೀವನಗೊಳಿಸುವುದಾಗಿ ಬೆದರಿಕೆ ಹಾಕುತ್ತಿರುವುದಾಗಿ ವರದಿ ತಿಳಿಸಿದೆ.

ಪಂಜಾಬ್ ನಲ್ಲಿ ಮತ್ತೆ ಭಯೋತ್ಪಾದಕ ಚಟುವಟಿಕೆ ನಡೆಸಲು ಸಂಚು ರೂಪಿಸಿರುವ ಪಾಕಿಸ್ತಾನದ ಐಎಸ್ ಐ, ತನ್ನ ಯೋಜನೆಯಂತೆ ಪಂಜಾಬ್ ನ ವಿವಿಧೆಡೆ ಹಿಂದೂ ಮುಖಂಡರನ್ನು ಹತ್ಯೆಗೈಯುವ ಗುರಿ ಹೊಂದಿದೆ ಎಂದು ವರದಿ ವಿವರಿಸಿದೆ. ಪಂಜಾಬ್ ನಲ್ಲಿ ಖಾಲಿಸ್ತಾನ್ ಚಳವಳಿ ಮತ್ತೆ ಆರಂಭಗೊಳ್ಳಲು ಐಎಸ್ ಐ ರೋಡೆ ಮತ್ತು ದುಬೈ ಮೂಲದ ಗ್ಯಾಂಗ್ ಸ್ಟರ್ ಸುಖ್ ಬಿಖ್ರಿವಾಲ್ ನ ನೆರವು ಪಡೆದಿದ್ದು, ಬಿಖ್ರಿವಾಲ್ ಐಎಸ್ ಐ ಮತ್ತು ಖಾಲಿಸ್ತಾನ್ ಪರ ಉಗ್ರರ ನಡುವಿನ ಮಾಹಿತಿ ಸಂಪರ್ಕದ ಮುಖ್ಯ ವ್ಯಕ್ತಿಯಾಗಿದ್ದಾನೆ ಎಂದು ವರದಿ ತಿಳಿಸಿದೆ.

ಯಾರೀತ ಭಿಂದ್ರನ್ ವಾಲೆ:

1984ರ ಜೂನ್‌ 1ರಿಂದ 8ರ ತನಕದ ಅವಧಿಯಲ್ಲಿ, ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಆದೇಶದ ಮೇರೆಗೆ, ಪಂಜಾಬಿನ ವಿಶ್ವವಿಖ್ಯಾತ ಅಮೃತಸರದ ಸ್ವರ್ಣ ಮಂದಿರದ ಮೇಲೆ ನಡೆದಿದ್ದ ಆಪರೇಶನ್‌ ಬ್ಲೂ ಸ್ಟಾರ್‌ ನಲ್ಲಿ ಖಾಲಿಸ್ಥಾನ್‌ ಪ್ರತಿಪಾದಕ ಉಗ್ರ ನಾಯಕ ಭಿಂದ್ರನ್‌ವಾಲೆ ಹತನಾಗಿದ್ದ.

Comments are closed.