ಮಂಗಳೂರು.ಡಿಸೆಂಬರ್.09: ಕರಾವಳಿಯ ಹಲವೆಡೆಗಳಲ್ಲಿ ನಿನ್ನೆ ಹಾಗೂ ಇಂದು ಸಂಜೆ ಉತ್ತಮ ಮಳೆಯಾಗಿದೆ. ಬೆಳಗ್ಗಿನಿಂದಲೇ ಮೋಡ ಮತ್ತು ಸೆಕೆಯಿಂದ ಕೂಡಿದ ವಾತಾವರಣವಿದ್ದು ಸಂಜೆಯಾಗುತ್ತಿದ್ದಂತೆ ಗುಡುಗು, ಮಿಂಚು ಸಹಿತಾ ಧಾರಾಕಾರ ಮಳೆಯಾಗಿದೆ.
ಧಿಡೀರ್ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಸಾರ್ವಜನಿಕರು ಪರಾದಾಡುವಂತಾಯಿತು. ಯಾವೂದೇ ಪೂರ್ವ ತಯಾರಿ ಇಲ್ಲದೇ ತಮ್ಮ ಕೆಲಸ ಕಾರ್ಯಗಳಿಗೆ ತೆರಳಿದಂತಹ ದ್ವಿಚಕ್ರ ವಾಹನ ಸವಾರರು ಹೆಚ್ಚು ತೊಂದರೆಗೀಡಾದರು.
ಕರಾವಳಿಯಲ್ಲಿ ಸಾಮಾನ್ಯವಾಗಿ ಡಿಸೆಂಬರ್ನಲ್ಲಿ ಭಾರೀ ಚಳಿ ಇರುತ್ತದೆ. ಆದರೆ ಈ ಬಾರಿ ಚಳಿ ಕಡಿಮೆಯಿದೆ. ಅರಬಿ ಸಮುದ್ರದಲ್ಲಿ ಮೇಲ್ಮೆ ಸುಳಿಗಾಳಿ ಪರಿಣಾಮ ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಮಂಗಳವಾರ ಹಾಗೂ ಬುಧವಾರ ಸಂಜೆ ಗುಡುಗು ಸಿಡಿಲಿನಿಂದ ಕೂಡಿದ ಉತ್ತಮ ಮಳೆಯಾಗಿದೆ.
ಸುಬ್ರಹ್ಮಣ್ಯ, ಬೆಳ್ಳಾರೆ, ಬೆಳ್ತಂಗಡಿ, ಧರ್ಮಸ್ಥಳ, ಮುಂಡಾಜೆ, ಉಜಿರೆ, ಮಡಂತ್ಯಾರು, ಬಳ್ಳಮಂಜ, ಬಿ.ಸಿ.ರೋಡು, ವಿಟ್ಲ, ಪುಣಚ, ಕನ್ಯಾನ, ಪುತ್ತೂರು, ಉಪ್ಪಿನಂಗಡಿ, ಸುರತ್ಕಲ್, ಮುಡಿಪು, ಉಳ್ಳಾಲ ಸೇರಿದಂತೆ ಸುತ್ತಮುತ್ತ ಉತ್ತಮ ಮಳೆಯಾಗಿದೆ.
ಮುಂದಿನ ಎರಡು ದಿನಗಳ ಕಾಲ ಕರಾವಳಿ ಭಾಗದಲ್ಲಿ ಮಳೆಯಾಗಬಹುದು. ಹಿಂಗಾರು ಕ್ಷೀಣಿಸಿ, ಮೋಡದ ಪರಿಣಾಮ ಚಳಿ ವಿಳಂಬವಾಗುತ್ತಿದೆ. ಸದ್ಯದಲ್ಲೇ ಚಳಿ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಬಿಪ್ರಾಯ ಪಟ್ಟಿದ್ದಾರೆ.
Comments are closed.