UAE

ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರಿಗೆ 10 ವರ್ಷದ ಯುಎಇ ಗೋಲ್ಡನ್ ವೀಸಾ

Pinterest LinkedIn Tumblr

ದುಬೈ: ದುಬೈನ ಪ್ರತಿಷ್ಠಿತ ಹೋಟೆಲ್ ಗಳಲ್ಲಿ ಒಂದಾದ ಫಾರ್ಚುನ್ ಗ್ರೂಪ್ ಆಫ್ ಹೋಟೆಲ್ಸ್ ಆಡಳಿತ ನಿರ್ದೇಶಕ ಕುಂದಾಪುರ ಮೂಲದ ವಕ್ವಾಡಿ ಪ್ರವೀಣ್ ಶೆಟ್ಟಿ ಅವರಿಗೆ ಯುಎಇ ಸರ್ಕಾರ ಹತ್ತು ವರ್ಷದ ಗೋಲ್ಡನ್ ವೀಸಾ ನೀಡಿ ಗೌರವಿಸಿದೆ.

ದುಬೈನಲ್ಲಿ ಕಳೆದ ನಾಲ್ಕೈದು ದಶಕಗಳಿಂದ ಫಾರ್ಚುನ್ ಗ್ರೂಪ್ ಆಫ್ ಹೋಟೆಲ್ಸ್ ಎಂಬ ಹೆಸರಿನಲ್ಲಿ ಉದ್ಯಮ ಆರಂಭಿಸಿ ಬಹುದೊಡ್ಡ ಯಶಸ್ಸು ಕಂಡು ಯುಎಇ ಪ್ರವಾಸೋದ್ಯಮದಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತಿರುವ ಇವರನ್ನು ಗುರುತಿಸಿ ದುಬಾಯಿ ಸರ್ಕಾರ ಈ ಗೌರವ ಪುರಸ್ಕಾರ ನೀಡಿದೆ. ದುಬೈನ ಯುಎಇಯಲ್ಲಿರುವ ಪ್ರತಿಷ್ಟಿತ ಭಾರತೀಯ ಉದ್ಯಮಿಗಳಿಗೆ ಈ ಹಿಂದೆಯೂ ಗೋಲ್ಡನ್ ವೀಸಾ ನೀಡಿ ಯುಎಇ ಸರಕಾರ ಗೌರವಿಸಿದೆ.

ಫಾರ್ಚುನ್ ಗ್ರೂಪ್ ಆಫ್ ಹೋಟೆಲ್ಸ್ ಈಗಾಗಲೇ ದುಬೈನಾದ್ಯಂತ ಸುಮಾರು ಏಳು ಹೋಟೆಲ್ ಹೊಂದಿದ್ದು, ಇದೀಗ ಹೊಸದಾಗಿ ಆರಂಭವಾದ ಫಾರ್ಚುನ್ ಅಟ್ಟಿಯಮ್ ಹೋಟೆಲಿಗೆ ಆಗಮಿಸಿದ ದುಬೈ ಟೂರಿಸಂ ನ ಜನರಲ್ ಡೈರೆಕ್ಟರ್ (ಡಿಟಿಸಿಎಂ) ಸಯ್ಯದ್ ಅಲ್ ಮರ್ರಿ, ಕೊರೋನಾದಂತಹ ಸಂದರ್ಭದಲ್ಲಿಯೂ ಇಂತಹ ಹೋಟೆಲ್ ಮೂಲಕ ದುಬೈ ಪ್ರವಾಸೋದ್ಯಮಕ್ಕೆ ಮುಖ್ಯ ಕೊಡುಗೆ ನೀಡುತ್ತಿರುವ ಪ್ರವೀಣ್ ಶೆಟ್ಟಿ ವಕ್ವಾಡಿ ಅವರನ್ನು ಗೌರವಿಸಿ ಅಭಿನಂದಿಸಿದ್ದಲ್ಲದೇ ಪ್ರವಾಸೋಧ್ಯಮದ ಹಿನ್ನೆಲೆ ಯಾವುದೇ ಸಹಕಾರ ನೀಡುವ ಭರವಸೆ ಕೊಟ್ಟರು. ಫಾರ್ಚೂನ್ ಗ್ರೂಫಿನ ಪ್ರತಿಯೊಬ್ಬರಿಗೆ ಕೊರೋನಾ ಲಸಿಕೆಯನ್ನು ಉಚಿತವಾಗಿ ನೀಡುವುದಾಗಿ ತಿಳಿಸಿದರು.

Comments are closed.