ರಾಷ್ಟ್ರೀಯ

ಟ್ವೀಟರ್‌ನಲ್ಲಿ ನಂ.1 ಸ್ಥಾನಕ್ಕೆ ಏರಿದ ಭಾರತ ಪ್ರಧಾನಿ ನರೇಂದ್ರ ಮೋದಿ

Pinterest LinkedIn Tumblr

ನವದೆಹಲಿ: ಟ್ವೀಟರ್‌ನಲ್ಲಿ ನಂ.1 ಸ್ಥಾನಕ್ಕೆ ಭಾರತ ಪ್ರಧಾನಿ ನರೇಂದ್ರ ಮೋದಿ ಪಾದಾರ್ಪಣೆ ಮಾಡಿದ್ದಾರೆ. ಇದಕ್ಕೆ ಕಾರಣ ಟ್ವಿಟ್ಟರ್‌‌ ಸಂಸ್ಥೆ ಅಮೆರಿಕ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಖಾತೆಗೆ ನಿರ್ಬಂಧ ಹೇರಿರುವುದು.

ಅಮೆರಿಕಸ ಸಂಸತ್‌ ಭವನಕ್ಕೆ ದಾಳಿ ಮಾಡಲು ಕುಮ್ಮಕ್ಕು ನೀಡಿದ ಆರೋಪದ ಮೇಲೆ ಟ್ವಿಟ್ಟರ್‌‌ ಸಂಸ್ಥೆ ಅಮೆರಿಕ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಖಾತೆಗೆ ನಿರ್ಬಂಧ ಹೇರಿದ ಬಳಿಕ, ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟರ್‌ನಲ್ಲಿ ನಂ.1 ಸ್ಥಾನ ಅಲಂಕರಿಸಿದ್ದಾರೆ.

ಅತೀ ಹೆಚ್ಚು ಹಿಂಬಾಲಕರಿರುವ ಜಗತ್ತಿನ ಸಕ್ರೀಯ ರಾಜಕಾರಣಿಗಳ ಪೈಕಿ ಮೋದಿ ಅವರಿಗೆ ಮೊದಲ ಸ್ಥಾನ ಪ್ರಾಪ್ತವಾಗಿದೆ. ಮೋದಿಯವರ ಖಾತೆಗೆ ಈಗ 6.47 ಕೋಟಿ ಮಂದಿ ಹಿಂಬಾಲಕರಿದ್ದಾರೆ.

8.87 ಕೋಟಿ ಹಿಂಬಾಲಕರನ್ನು ಹೊಂದುವ ಮೂಲಕ ಮೊದಲ ಸ್ಥಾನದಲ್ಲಿದ್ದ ಡೊನಾಲ್ಡ್‌ ಟ್ರಂಪ್‌ ಅವರ ಖಾತೆಯನ್ನು ಟ್ವಿಟ್ಟರ್‌ ನಿಷ್ಕ್ರೀಯಗೊಳಿಸಿದ್ದು, ಎರಡನೇ ಸ್ಥಾನದಲ್ಲಿದ್ದ ನರೇಂದ್ರ ಮೋದಿ ಅವರು ಇದೀಗ ಮೊದಲ ಸ್ಥಾನಕ್ಕೆ ಏರಿದ್ದಾರೆ.

ಒಟ್ಟಾರೆ ವಿಶ್ವ ರಾಜಕಾರಣಿಗಳ ಪೈಕಿ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಮೊದಲನೇ ಸ್ಥಾನದಲ್ಲಿದ್ದು, ಅವರಿಗೆ ಒಟ್ಟು 12.79 ಮಂದಿ ಫಾಲೋವರ್ಸ್‌ ಇದ್ದಾರೆ. ಅಮೆರಿಕದ ಚುನಾಯಿತ ಅಧ್ಯಕ್ಷ ಜೋ ಬಿಡೆನ್‌ ಅವರಿಗೆ 2.33 ಕೋಟಿ ಮಂದಿ ಹಿಂಬಾಲಕರಿದ್ದಾರೆ.

ಭಾರತದಲ್ಲಿ ಮೋದಿ ಬಳಿಕ ಅತೀ ಹೆಚ್ಚು ಫಾಲೋವರ್ಸ್‌ ಹೊಂದಿರುವ ರಾಜಕಾರಣಿಗಳ ಪೈಕಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ, 2.42 ಕೋಟಿ ಹಿಂಬಾಲಕರನ್ನು ಹೊಂದುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. 2.12 ಕೋಟಿ ಫಾಲೋವರ್ಸ್‌ ಇರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಎರಡನೇ ಸ್ಥಾನದಲ್ಲಿದ್ದಾರೆ.

ಅಮೆರಿಕ ಸಂಸತ್‌ ಭವನದ ಮೇಲೆ ದಾಳಿಯಾದ ಎರಡು ದಿನಗಳ ಬಳಿಕ, ಭವಿಷ್ಯದಲ್ಲಿ ಹೆಚ್ಚಿನ ಹಾನಿ ಸಂಭವಿಸುವುದನ್ನು ತಡೆಯಲು ಡೊನಾಲ್ಡ್‌ ಟ್ರಂಪ್‌ ಅವರ ಖಾತೆಯನ್ನು ಟ್ವಿಟ್ಟರ್‌ ಶಾಶ್ವತವಾಗಿ ಸ್ಥಗಿತಗೊಳಿಸಿತ್ತು.

Comments are closed.