ಮಂಗಳೂರು : ವಿಶ್ವ ಹಿಂದು ಪರಿಷದ್ ಅತ್ಯಂತ ಹಿರಿಯ ಪ್ರಚಾರಕರಾದ ಮಾನನೀಯ ಬಾಬು ರಾವ್ ದೇಸಾಯಿಯವರಿಗೆ ಶೃದ್ಧಾಂಜಲಿ ಸಭೆ ಮಂಗಳೂರಿನ ಕದ್ರಿಯಲ್ಲಿರುವ ವಿಶ್ವ ಹಿಂದು ಪರಿಷದ್ ಕಚೇರಿ ವಿಶ್ವಶ್ರೀಯಲ್ಲಿ ನಡೆಯಿತು.
80 ವರ್ಷಗಳು ಪೂರ್ಣಾವಧಿ ಪ್ರಚಾರಕರಾಗಿ ಸೇವೆ ಸಲ್ಲಿಸಿ, “ಲಕ್ಷಾಂತರ ಕಾರ್ಯಕರ್ತರಿಗೆ ಪ್ರೇರಣೆಯಾದ ಮಾನನೀಯ ಬಾಬು ರಾವ್ ದೇಸಾಯಿಯವರು ಕರ್ನಾಟಕದಲ್ಲಿ ವಿಶ್ವ ಹಿಂದು ಪರಿಷತ್ ಬೆಳವಣಿಗೆಗೆ ಶ್ರಮಿಸಿದವರು, ಯಾವಾಗಲು ಹಸನ್ಮುಖಿಯಾಗಿದ್ದು, ಅವರು ತಮ್ಮ ಸಮಯೋಚಿತ ಬುದ್ಧಿ ಮತ್ತು ಹಾಸ್ಯದ ಮೂಲಕ ಅತ್ಯಂತ ಸವಾಲಿನ ಸಂದರ್ಭಗಳನ್ನು ಹಗುರಗೊಳಿಸುತ್ತಿದ್ದರು ಎಂದು ವಿಶ್ವ ಹಿಂದು ಪರಿಷತ್ತಿನ ಪ್ರಾಂತ ಕಾರ್ಯಾಧ್ಯಕ್ಷರು ಪ್ರೊ ಎಂ ಬಿ ಪುರಾಣಿಕ್ ಶೃದ್ಧಾಂಜಲಿ ತಿಳಿಸಿದರು.
ಈ ಶೃದ್ಧಾಂಜಲಿ ಸಭೆಯಲ್ಲಿ ಪ್ರಾಂತ ಕಾರ್ಯದರ್ಶಿ ಕೃಷಣ್ ಮೂರ್ತಿ ಜೀ, ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್, ಜಿಲ್ಲಾಧ್ಯಕ್ಷರು ಗೋಪಾಲ್ ಕುತ್ತಾರ್, ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಮೆಂಡನ್, ನಿಕಟಪೂರ್ವ ಪ್ರಾಂತ ಗೋರಕ್ಷ ಪ್ರಮುಖ್ ಜಗದೀಶ್ ಶೇಣವ ಹಾಗು ಹಿರಿಯ ಕಾರ್ಯಕರ್ತರಾದ ಎಂ ಏನ್ ಪ್ರಭು ಉಪಸ್ಥಿತರಿದ್ದರು.
Comments are closed.