ಕರಾವಳಿ

ಎಸ್ಸೆಸ್ಸೆಲ್ಸಿ ಪರೀಕ್ಷಾ ವೇಳಾ ಪಟ್ಟಿ ಪ್ರಕಟ : ವಿದ್ಯಾರ್ಥಿಗಳು ಹಾಗು ಪೋಷಕರಿಗೆ ಆಕ್ಷೇಪಗಳಿದ್ದರೇ ಕೂಡಲೇ ತಿಳಿಸಿ!

Pinterest LinkedIn Tumblr

ಬೆಂಗಳೂರು,ಜನವರಿ.28: ಈ ಬಾರಿಯ 10ನೇ ತರಗತಿ ಪರೀಕ್ಷೆಗೆ ದಿನಾಂಕ ನಿಗದಿಯಾಗಿದ್ದು, ರಾಜ್ಯ ಸರ್ಕಾರ ಎಸ್ಸೆಸ್ಸೆಲ್ಸಿ ಪರೀಕ್ಷಾ ವೇಳಾ ಪಟ್ಟಿ ದಿನಾಂಕವನ್ನು ಪ್ರಕಟಿಸಿದೆ.

ಕೊರೊನಾ ಭೀತಿ ನಡುವೆಯೇ 9 ಮತ್ತು 10ನೇ ತರಗತಿ ಆರಂಭಿಸಿರುವ ರಾಜ್ಯ ಸರ್ಕಾರ ಈಗ ಜೂನ್14 ರಿಂದ 25ರವರೆಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸಲು ತೀರ್ಮಾನ ಕೈಗೊಂಡಿದೆ.

ಶಾಲೆಗಳ ಪ್ರಾರಂಭ ಹಾಗೂ ವಿದ್ಯಾಗಮ ವಿಸ್ತರಣೆ, ಎಸ್‌ಎಸ್‌ಎಲ್ಸಿ ಪರೀಕ್ಷೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಇಂದು ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಜಂಟಿ ಸಭೆ ನಡೆಸಲಾಯಿತು. ಸಭೆ ಬಳಿಕ ಎಸ್‌ಎಸ್‌ಎಲ್ಸಿ ಪರೀಕ್ಷೆ ದಿನಾಂಕವನ್ನು ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರಕಟಿಸಿದರು.

ಕರ್ನಾಟಕ ಪ್ರಾಥಮಿಕ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವರುಗಳಾದ ಸುರೇಶ್ ಕುಮಾರ್ ಮತ್ತು ಡಾ. ಕೆ. ಸುಧಾಕರ್ ಅವರು ಎರಡೂ ಇಲಾಖೆ ಹಿರಿಯ ಅಧಿಕಾರಿಗಳು, ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಜತೆ ಗುರುವಾರ ಉನ್ನತ ಮಟ್ಟದ ಸಭೆ ನಡೆಸಿದರು.

ಬಳಿಕ ಈ ಬಗ್ಗೆ ಮಾಹಿತಿ ನೀಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಅವರು, ಜೂ.14ರಂದು ಪ್ರಥಮ ಭಾಷೆ, ಜೂ.16 ಗಣಿತ , ಜೂ.18ರಂದು ಇಂಗ್ಲೀಷ್ ಹಾಗೂ ಕನ್ನಡ, ಜೂ.21ರಂದು ವಿಜ್ಞಾನ , ಜೂ. 23ರಂದು ಹಿಂದಿ ಹಾಗೂ ಜೂ.25ರಂದು ಸಮಾಜ ವಿಜ್ಞಾನ ಪರೀಕ್ಷೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದಿದ್ದಾರೆ.

ಇದು ತಾತ್ಕಾಲಿಕ ಪರೀಕ್ಷಾ ವೇಳಾ ಪಟ್ಟಿಯಾಗಿದ್ದು, ಯಾವುದೇ ವಿದ್ಯಾರ್ಥಿ, ಪೋಷಕರಿಗೆ ಆಕ್ಷೇಪಗಳಿದ್ದರೇ ಫೆ.26ರೊಳಗೆ ಅರ್ಜಿ ಸಲ್ಲಿಸುವಂತೆ ಸಚಿವರು ಕೋರಿದ್ದಾರೆ. ಈ ಹಿಂದೆ ಪರೀಕ್ಷಾ ಅವದಿ 3 ಗಂಟೆ ಇದ್ದು, ಈಗ ಹೆಚ್ಚುವರಿಯಾಗಿ 15 ನಿಮಿಷ ನೀಡಲಾಗಿದೆ. ಈ ಕುರಿತಂತೆ ವಿಸ್ತೃತ ವೇಳಾಪಟ್ಟಿ ನಂತರ ಪ್ರಕಟಿಸಲಾಗುತ್ತದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

ಫೆ.1ರಿಂದ 9ನೆ ತರಗತಿ ಹಾಗೂ ಪಿಯುಸಿ ತರಗತಿಗಳು ಪೂರ್ಣ ಪ್ರಮಾಣದಲ್ಲಿ ಆರಂಭಗೊಳ್ಳಲಿವೆ. 6-8 ನೇ ತರಗತಿಗಳಿಗೆ ಸಂಬಂಧಿಸಿದಂತೆ ವಿದ್ಯಾಗಮ ಮುಂದುವರೆಯಲಿವೆ ಎಂದು ಇದೇ ವೇಳೆ ಸಚಿವರು ತಿಳಿಸಿದ್ದಾರೆ.

Comments are closed.