ಮಂಗಳೂರು, ಫೆಬ್ರವರಿ. 04: ನಗರದ ವಿವಿಧ ಎಟಿಎಂಗಳಿಗೆ ಅನಧಿಕೃತ ವಸ್ತು ಅಳವಡಿಸಿ ಲಕ್ಷಾಂತರ ರೂ. ಡ್ರಾ ಮಾಡಿ ವಂಚಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದ್ದು,ಈ ಬಗ್ಗೆ ಬ್ಯಾಂಕ್ ಮ್ಯಾನೇಜರ್‌ವೊಬ್ಬರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅಪರಿಚಿತ ವ್ಯಕ್ತಿಯೋರ್ವ ನಗರದ ವಿವಿಧೆಡೆ ಇರುವ ಎಟಿಎಂಗಳಿಂದ 2.24 ಲಕ್ಷ ರೂ. ಡ್ರಾ ಮಾಡಿ ವಂಚಿಸಿದ್ದು, ಈ ವ್ಯಕ್ತಿ ಹಣ ಮೆಷಿನ್‌ನಿಂದ ಬರುವ ಸಮಯ ಯಾವುದೋ ಅನಧಿಕೃತ ವಸ್ತುವನ್ನು ಕ್ಯಾಷ್ ಡಿಸ್ಪೆನ್ಸರಿಗೆ ಹಾಕಿ ‘ಟ್ರಾನ್ಸಾಕ್ಷನ್ ಫೇಲ್ಡ್’ ಎಂದು ಬರುವಂತೆ ಮಾಡಿ ಬ್ಯಾಂಕ್‌ಗೆ ವಂಚನೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ವಿಪರ್ಯಾಸವೆಂದರೆ ಈ ಎಲ್ಲಾ ಎಟಿಎಂ ಗಳು ಕೂಡ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಸಂಬಂಧಪಟ್ಟದಾಗಿದೆ.
ಮೋರ್ಗನ್ಸ್‌ಗೇಟ್, ಮಂಗಳಾದೇವಿ, ಕೊಟ್ಟಾರ, ಬಂಟ್ಸ್ ಹಾಸ್ಟೇಲ್, ಕಾರ್ ಸ್ಟ್ರೀಟ್, ಲಾಲ್‌ಭಾಗ್, ಎಂಪೈರ್ ಮಾಲ್, ಮಂಗಳಾದೇವಿ ಕಡೆಗಳಲ್ಲಿರುವ ಎಟಿಎಂನಿಂದ ವಂಚಿಸಿ ಹಣ ಡ್ರಾ ಮಾಡಲಾಗಿದೆ.
ಈ ಎಲ್ಲಾ ಎಟಿಎಂ ಗಳಲ್ಲಿ ಹಣ ಡ್ರಾ ಮಾಡುವಾಗ ಹಣ ಬಂದಿರಲಿಲ್ಲ ಎಂಬ ಕಾರಣದಿಂದ ಆನ್‌ಲೈನ್ ಕ್ಲೇಮು ಬಗ್ಗೆ ವ್ಯಕ್ತಿಯೋರ್ವ ದೂರು ನೀಡಿದ್ದ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಮ್ಯಾನೇಜರ್ ಎಟಿಎಂಗಳ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಎಲ್ಲ ಎಟಿಎಂ ಗಳಲ್ಲಿ ಹಣ ಡ್ರಾ ಮಾಡಿದ್ದು, ಹಣವನ್ನು ಸ್ವೀಕರಿಸಿರುವುದು ಕಂಡು ಬಂದಿದೆ.
ವ್ಯಕ್ತಿಯು ಹಣ ಮೆಷಿನ್‌ನಿಂದ ಬರುವ ಸಮಯ ಯಾವುದೋ ಅನಧಿಕೃತ ವಸ್ತುವನ್ನು ಕ್ಯಾಷ್ ಡಿಸ್ಪೆನ್ಸರಿಗೆ ಹಾಕಿ ‘ಟ್ರಾನ್ಸಾಕ್ಷನ್ ಫೇಲ್ಡ್’ ಎಂದು ಬರುವಂತೆ ಮಾಡಿ ಬ್ಯಾಂಕ್‌ಗೆ ವಂಚನೆ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Comments are closed.