ರಾಷ್ಟ್ರೀಯ

ಆರ್ ಬಿಐ ಪ್ರಕಟಿಸಿದ ವಿತ್ತೀಯ ನೀತಿ ನೋಡಿ….

Pinterest LinkedIn Tumblr

ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರೆಪೊ ದರವನ್ನು ಬದಲಾಯಿಸದೆ ಶೇಕಡಾ 4ರಷ್ಟು ಉಳಿಸಿದೆ. ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಸಂಕಷ್ಟಕ್ಕೀಡಾದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಅಗತ್ಯವಿದ್ದರೆ ಭವಿಷ್ಯದಲ್ಲಿ ದರ ಕಡಿತವನ್ನು ಮಾಡುವ ಸೂಚನೆಯನ್ನು ಕೂಡ ಆರ್ ಬಿಐ ನೀಡಿದೆ.

ಕೇಂದ್ರ ಸರ್ಕಾರದ ವಿತ್ತೀಯ ನೀತಿಯನ್ನು ಇಂದು ಪ್ರಕಟಿಸಿದ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್, ರೆಪೊ ದರ ಯಥಾಪ್ರಕಾರ ಶೇಕಡಾ 4ರಷ್ಟು ಮತ್ತು ರಿವರ್ಸ್ ರೆಪೊ ದರ ಸಹ ಹಿಂದಿನಂತೆ ಶೇಕಡಾ 3.35ರಷ್ಟು ಮುಂದುವರಿಯಲಿದೆ.

ದೇಶದ ಬೆಳವಣಿಗೆಯನ್ನು ಬೆಂಬಲಿಸಲು ಕಳೆದ ಮಾರ್ಚ್ ನಿಂದ ರೆಪೊ ದರವನ್ನು 115 ಬೇಸಿಸ್ ಪಾಯಿಂಟ್ ಗಳಷ್ಟು ಕಡಿತಗೊಳಿಸಿರುವ ಆರ್ ಬಿಐ, ವಿತ್ತೀಯ ದರವನ್ನು ಬದಲಾಯಿಸದೇ ಇರಲು ಆರ್ ಬಿಐ ನಿರ್ಧರಿಸುತ್ತಿರುವುದು ಇದು ನಾಲ್ಕನೇ ಬಾರಿ.

ಕಳೆದ ವರ್ಷ ಮೇ 22ರಂದು ಆರ್ ಬಿಐ ವಿತ್ತೀಯ ದರವನ್ನು ಪರಿಷ್ಕರಿಸಿತ್ತು. ಮೊನ್ನೆ ಕೇಂದ್ರ ಬಜೆಟ್ ಮಂಡನೆಯಾದ ನಂತರ ವಿತ್ತೀಯ ದರ ನಿಗದಿ ಮಾಡುವ ತಂಡ ಇಂದು ಸಭೆ ಸೇರಿ ದೇಶದ ಜಿಡಿಪಿ ಬೆಳವಣಿಗೆಯ ದರವನ್ನು ಶೇಕಡಾ 14.5ರಷ್ಟು ಮತ್ತು ವಿತ್ತೀಯ ಕೊರತೆಯನ್ನು ಶೇಕಡಾ 6.8ರಷ್ಟು ಸೂಚಿಸಿದೆ. ಮುಂದಿನ ಏಪ್ರಿಲ್ 1ರಿಂದ ಹೊಸ ಆರ್ಥಿಕ ವರ್ಷ ಆರಂಭವಾಗಲಿದೆ.
2021 ರ ಮಾರ್ಚ್ 31 ರವರೆಗೆ ವಾರ್ಷಿಕ ಹಣದುಬ್ಬರವನ್ನು ಶೇಕಡ 4 ರಂತೆ ಕಾಯ್ದುಕೊಳ್ಳಲು ವಿತ್ತೀಯ ನೀತಿ ಸಮಿತಿಗೆ ಆದೇಶ ನೀಡಲಾಗಿದೆ.

ರೆಪೊ ದರ: ಬ್ಯಾಂಕುಗಳಲ್ಲಿ ಹಣದ ಕೊರತೆಯಾದರೆ ಅಥವಾ ಹಣದ ಅವಶ್ಯಕತೆಯಿದ್ದರೆ ಆರ್ ಬಿಐ ಬ್ಯಾಂಕುಗಳಿಗೆ ಕೊಡುವ ಸಾಲದ ಹಣದ ಮೇಲೆ ವಿಧಿಸುವ ನಿಶ್ಚಿತ ಬಡ್ಡಿ ದರವಾಗಿದೆ. ಹಣದುಬ್ಬರವನ್ನು ನಿಯಂತ್ರಿಸಲು ವಿತ್ತೀಯ ಅಧಿಕಾರಿಗಳು ರೆಪೊ ದರವನ್ನು ಬಳಸುತ್ತಾರೆ.

ಹಣದುಬ್ಬರದ ಸಂದರ್ಭದಲ್ಲಿ, ಕೇಂದ್ರ ಬ್ಯಾಂಕು ಆರ್ ಬಿಐ ರೆಪೊ ದರವನ್ನು ಹೆಚ್ಚಿಸುತ್ತವೆ, ಸಾಧ್ಯವಾದಷ್ಟು ಬ್ಯಾಂಕುಗಳು ಕೇಂದ್ರ ಬ್ಯಾಂಕಿನಿಂದ ಸಾಲ ಪಡೆಯುವುದನ್ನು ತಡೆಯುತ್ತದೆ. ಇದು ಅಂತಿಮವಾಗಿ ಆರ್ಥಿಕತೆಯಲ್ಲಿ ಹಣ ಪೂರೈಕೆಯನ್ನು ಕಡಿಮೆ ಮಾಡಿ ಹಣದುಬ್ಬರ ನಿಯಂತ್ರಿಸಲು ಸಹಾಯ ಮಾಡುತ್ತದೆ.

ರಿವರ್ಸ್ ರೆಪೊ ದರ: ಇದಕ್ಕೆ ಪ್ರತಿಯಾಗಿ ಆರ್‌ಬಿಐ ಅಲ್ಪಾವಧಿಗೆ ಬ್ಯಾಂಕುಗಳಿಂದ ಹಣವನ್ನು ಸಾಲ ಪಡೆದು ಆ ಹಣದ ಮೇಲೆ ನೀಡುವ ಬಡ್ಡಿದರವನ್ನು ರಿವರ್ಸ್ ರೆಪೊ ದರ ಎಂದು ಕರೆಯುತ್ತಾರೆ.

Comments are closed.