ಕರಾವಳಿ

ಹಿಂದೂ ದೇವಸ್ಥಾನ, ದೈವಸ್ಥಾನಗಳನ್ನುಅಪವಿತ್ರ ಮಾಡುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹ

Pinterest LinkedIn Tumblr

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಸರಣಿ ಹಿಂದೂ ದೈವ ಸ್ಥಾನಗಳ ಅಪವಿತ್ರಗೊಳಿಸುವ ಷಡ್ಯಂತ್ರ ಮತ್ತು ಕಾಣಿಕೆ ಡಬ್ಬಿಕಳ್ಳತನ ಪ್ರಕರಣಗಳ ಬಗ್ಗೆ ವಿಶೇಷ ತನಿಖೆ ನಡೆಸುವ ಬಗ್ಗೆ ಮಂಗಳೂರಿನ ಪೊಲೀಸ್ ಕಮಿಷನರ್ ಶ್ರೀ.ಶಶಿ ಕುಮಾರ್ ಇವರಿಗೆ ಹಿಂದೂ ಮಹಾಸಭಾ,ಹಿಂದೂ ಜನ ಜಾಗೃತಿ ಸಮಿತಿ ಮತ್ತು ಹಲವುಹಿಂದುತ್ವನಿಷ್ಠಮುಖಂಡರು ಸೇರಿ ಮನವಿ ಸಲ್ಲಿಸಿದರು.

ಈ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯಕರಾದ ಶ್ರೀ. ಚಂದ್ರ ಮೊಗೇರ್,ಹಿಂದೂ ಮಹಾಸಭಾ ದ ಜಿಲ್ಲಾಧ್ಯಕ್ಷರಾದ ಶ್ರೀ.ಲೋಕೇಶ್ ಕುತ್ತಾರ,ಶ್ರೀ ಉಪೇಂದ್ರ ಆಚಾರ್ಯ, ಧರ್ಮಪ್ರೇಮಿಗಳಾದ ಶ್ರೀ.ಮಧುಸೂಧನ ಅಯ್ಯರ್,ಶ್ರೀ.ಸುರೇಶ, ಸೌ.ರೂಪ,ಸೌ. ಪ್ರಮೀಳಾ,ಶ್ರೀ. ರಾಜೇಶ್, ಶ್ರೀ.ಪ್ರಶಾಂತ್ ಕಾಂಚನ್, ಶ್ರೀ.ಪ್ರವೀಣ್,ಶ್ರೀ.ಯೋಗೀಶ್ ಮತ್ತಿತರರು ಉಪಸ್ಥಿತರಿದ್ದರು.

ಕಳೆದ ಕೆಲವು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅವ್ಯಾಹತವಾಗಿ ದೇವಸ್ಥಾನ, ದೈವ ಸ್ಥಾನ, ಭಜನೆ ಮಂದಿರಗಳಂತಹ ಹಿಂದೂ ಧಾರ್ಮಿಕ ಸ್ಥಳಗಳನ್ನು ಅಪವಿತ್ರ ಮಾಡುವ ಷಡ್ಯಂತ್ರ ಮತ್ತು ದೈವ ಸ್ಥಾನದ ಕಾಣಿಕೆ ಡಬ್ಬ ಕಳ್ಳತನ ಮಾಡುವ ಪ್ರಕರಣಗಳು ಅವ್ಯಾಹತವಾಗಿ ನಡೆಯುತ್ತಿದೆ.

1. ಜನವರಿ 20ರಂದು ಮಂಗಳೂರಿನ ಉಲ್ಲಾಳದ ಕೊರಗಜ್ಜ ಮತ್ತು ಗುಳಿಗಜ್ಜನ ಕಟ್ಟೆಯ ಕಾಣಿಕೆಯ ಹುಂಡಿಯಲ್ಲಿ ಶಿಲುಬೆ ಹಾರ ಮತ್ತು ಗರ್ಭನಿರೋಧಕವನ್ನು ಹಾಕಿ ಅಪವಿತ್ರ ಮಾಡಿದ ಘಟನೆಯು ನಡೆದಿದೆ.

ಇದರಲ್ಲಿ ಪ್ಲೇಕ್ಸ ಹಾಕಲಾಗಿದ್ದು, ಅದರಲ್ಲಿ ಹಿಂದೂ ನಾಯಕರುಗಳ ಚಿತ್ರಗಳನ್ನು ಗೀಚಿ ವಿರೂಪಗೊಳಿಸಿ ಅವರನ್ನು ಕೊಲ್ಲಬೇಕು ಎಂಬ ಪ್ರಚೋದನೆಕಾರಿ ಬರಹ ಬರೆಯಲಾಗಿದೆ. ಹಿಂದೂ ದೇವತೆಗಳ ಅಪಮಾನ ಮಾಡುವ ಬರಹ ಬರೆಯಲಾಗಿತ್ತು.

2. ಪೆಬ್ರವರಿ 1ರಂದು ಕೋಣಾಜೆಯ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಒಳಗೆ ದುಷ್ಕರ್ಮಿಗಳು ಮಲಮೂತ್ರ ವಿಸರ್ಜನೆ ಮಾಡಿ ಅಪವಿತ್ರಗೊಳಿಸಿದರು.

3. ಜನವರಿ 2ರಂದು ಬಬ್ಬುಸ್ವಾಮಿ ದೈವಸ್ಥಾನದ ಕಾಣಿಕೆಯ ಡಬ್ಬಿಯಲ್ಲಿ ಸಹ ಏಸು ಕ್ರಿಸ್ತನ ಬರಹ ಇರುವ ನೋಟ್ ಸಹಿತ, ಗರ್ಭನಿರೋಧಕ ವನ್ನು ಹಾಕಿ ವಿಕೃತಿ ಮರೆಯಲಾಗಿತ್ತು.

4. ಹಲವು ತಿಂಗಳ ಹಿಂದೆ ಕಟಪಾಡಿಯ ಪೇಟಾಬೆಟ್ಟು ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಕೊರಕೊಜ್ಜ ದೈವಸ್ಥಾನದ ಕಾಣಿಕೆ ಹುಂಡಿಗೆ ಗರ್ಭನಿರೋಧಕವನ್ನು ಹಾಕಿ ವಿಕೃತಿ ಮರೆಯಲಾಗಿತ್ತು.

5. ಜನವರಿ 26ರಂದು ದೇರಳಕಟ್ಟೆಯ ಶ್ರೀ ಅಯ್ಯಪ್ಪ ದೇವಸ್ಥಾನದ ಕಾಣಿಕೆ ಡಬ್ಬಿ ಕಳ್ಳತನ ಆಯಿತು.

6. ಜನವರಿ 15ರಂದು ಕೋಣಾಜೆಯ ಮುಲರದ ಅರಸು ಮುಂಡಿತ್ತಾಯ ದೈವ ಸ್ಥಾನ ಕಾಣಿಕೆ ಡಬ್ಬ ಕಳ್ಳತನ ಆಯಿತು.

7. ಜನವರಿ 15ರಂದು ಕುತ್ತಾರಿನ ಆದಿ ಸ್ಥಳ ಕೊರ ಗಜ್ಜನ ದೈವ ಸ್ಥಾನದ ಕಾಣಿಕೆ ಡಬ್ಬ ಕಳ್ಳತನ ಅಗಿದೆ.

ಹೀಗೆ ಕದ್ರಿ, ಕಂಕನಾಡಿ, ಉಳ್ಳಾಲ ಠಾಣ ವ್ಯಾಪ್ತಿಯಲ್ಲಿ ದೇವಸ್ಥಾನಗಳ ಅಪವಿತ್ರಗೊಳಿಸುವ ಅನೇಕ ಘಟನೆಗಳು ನಡೆದಿದೆ.

ಹಾಗೆಯೇ 10ಕ್ಕೂ ಅಧಿಕ ದೈವ ಸ್ಥಾನಗಳ ಕಾಣಿಕೆಯ ಹುಂಡಿ ಕಳ್ಳತನ ಆಗಿದೆ.ಈ ರೀತಿಯಲ್ಲಿ ವ್ಯವಸ್ಥಿತವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂಗಳು ಅನ್ಯ ಮತಿಯರು ಬಹುಸಂಖ್ಯಾತ ಇರುವ ದೇವಸ್ಥಾನ, ದೈವ ಸ್ಥಾನ ಮುರ್ತಿ ಭಂಜನ, ಅಪವಿತ್ರಗೊಳಿಸುವುದು, ಕಾಣಿಕೆ ಡಬ್ಬ ಕಳ್ಳತನ ನಡೆಯಿತ್ತಿದೆ.

ಇದುವರೆಗೆ ಈ ಪ್ರಕರಣದಲ್ಲಿ ಭಾಗಿಯಾದವರು ಎಲ್ಲರೂ ಅನ್ಯಮತಿಯರೇ ಇದ್ದಾರೆ. ಇದನ್ನು ಗಮನಿಸಿದಾಗ ಇದೊಂದು ರೀತಿಯಲ್ಲಿ ಆಂಧ್ರ ಪ್ರದೇಶದಲ್ಲಿ ನಡೆದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯವಸ್ಥಿತ ಷಡ್ಯಂತ್ರ ರೂಪದಲ್ಲಿ ಹಿಂದೂ ಧಾರ್ಮಿಕ ಭಾವನೆಗೆ ನೊವುಂಟು ಮಾಡುವ ದುರುದ್ದೇಶದಿಂದ ಕೆಲವು ಸಮಾಜ ಘಾತಕ ಶಕ್ತಿಗಳು ಮಾಡುವುದು ಗಮನಕ್ಕೆ ಬರುತ್ತದೆ.

ಇದು ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ತುಂಬಾ ಗಂಬೀರ ಪರಿಣಾಮ ಬೀರುವುದು ಅದಲ್ಲದೇ ದೇಶದ ಭದ್ರತಾ ವ್ಯವಸ್ಥೆಗೆ ಸಹ ಅಪಾಯಕಾರಿ ಆಗಿದೆ.ಅದಕ್ಕಾಗಿ ಎಲ್ಲಾ ದೇವಸ್ಥಾನಗಳ ವಿಶ್ವಸ್ಥರು, ಅಧ್ಯಕ್ಷರು, ಹಿಂದೂ ಜನಜಾಗೃತಿ ಸಮಿತಿ, ಎಲ್ಲಾ ಹಿಂದೂ ಪರ ಸಂಘಟನೆಗಳ ವತಿಯಿಂದ ಈ ಮುಂದಿನ ಬೇಡಿಕೆಗಳನ್ನು ಸಲ್ಲಿಸಲಾಯಿತು.

ಪೋಲಿಸ್ ಇಲಾಖೆ ಮತ್ತು ಜನಪ್ರತಿಗಳು ಈ ಪ್ರಕರಣಗಳನ್ನು ಅತ್ಯಂತ ಗಂಬೀರವಾಗಿ ಪರಿಗಣಿಸಬೇಕು. ಇದನ್ನು ತನಿಖೆ ನಡೆಸಲು ಪ್ರತ್ಯೇಕ ತನಿಕಾ ತಂಡ ನಿಯೋಜನೆ ಮಾಡಬೇಕು. ಇಂತಹ ಕೃತ್ಯ ಮಾಡುವ ಅಪರಾಧಿಗಳ ಮೇಲೆ ಯುಎಪಿಎ ಕಾಯಿದೆ ಮತ್ತು ರಾಷ್ಟ್ರೀಯ ಭದ್ರತಾ ಕಾಯಿದೆಯನ್ನು ಹಾಕಬೇಕು. ಅವರಿಗೆ ಯಾವುದೇ ಕಾರಣಕ್ಕೂ ಜಾಮೀನು ಸಿಗದಂತೆ ನೋಡಬೇಕು.

ಪ್ರತ್ಯೇಕ ಪಾಸ್ಟ ಟ್ರ್ಯಾಕ್ ನ್ಯಾಯಾಲಯದಲ್ಲಿ ಈ ಪ್ರಕರಣಗಳ ವಿಚಾರಣೆ ನಡೆಸಿ, ಅಪರಾಧಿಗಳಿಗೆ ಶೀಘ್ರ ಶಿಕ್ಷೆ ಆಗಬೇಕು. ಎಲ್ಲಾ ಹಿಂದೂ ದೇವಸ್ಥಾನಗಳಿಗೆ ಸಿಸಿ ಟಿವಿ ವ್ಯವಸ್ಥೆ ಮಾಡಬೇಕು ಮತ್ತು ಅನ್ಯ ಮತಿಯರು ಇರುವ ಸ್ಥಳಗಳ ದೇವಸ್ಥಾನಗಳಿಗೆ ವಿಶೇಷ ಭದ್ರತೆಯನ್ನು ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.

Comments are closed.