ಉಡುಪಿ: ಪ್ಲಾಸ್ಟಿಕ್ ಟಬ್‍ನಲ್ಲಿ ಬಟ್ಟೆಯಲ್ಲಿ ಸುತ್ತಿ ಇಟ್ಟಿದ್ದ ಬೆಳೆಬಾಳುವ ಚಿನ್ನಾಭರಣವನ್ನು ಕಳವುಗೈದ ಘಟನೆ ಕಾರ್ಕಳ ತಾಲೂಕಿನ ಅಜೆಕಾರು ಮರ್ಣೆ ಗುಡ್ಡೆಯಂಗಡಿಯಲ್ಲಿ ನಡೆದಿದೆ.
(ಸಾಂದರ್ಭಿಕ ಚಿತ್ರ)
ಸುಧಾಕರ ಮಡಿವಾಳ ಅವರು ಫೆಬ್ರವರಿ 1ರ ಮಧಾಹ್ನ 11ರ ವೇಳೆಗೆ ಮನೆಗೆ ಬೀಗ ಹಾಕಿ ಕಾರ್ಕಳದಲ್ಲಿರುವ ಪತ್ನಿಯ ತವರು ಮನೆಗೆ ಸಂಸಾರ ಸಮೇತವಾಗಿ ಹೋಗಿದ್ದರು. ಮೂರ್ನಾಲ್ಕು ದಿನದ ಬಳಿಕ ಮನೆಗೆ ಹಿಂತಿರುಗಿದ್ದ ಸಂದರ್ಭದಲ್ಲಿ ಮನೆಯ ಎದುರುಗಡೆಯ ಬಾಗಿಲಿನ ಬೀಗವನ್ನು ಯಾರೋ ದುಷ್ಕರ್ಮಿಗಳು ಮುರಿದು ಹಾಕಿದ್ದು ಕೋಣೆಯ ಮಂಚದ ತಳಭಾಗದಲ್ಲಿ ಇರಿಸಲಾಗಿದ್ದ ಪ್ಲಾಸ್ಟಿಕ್ ಟಬ್‍ನೊಳಗೆ ಬಟ್ಟೆಯಲ್ಲಿ ಸುತ್ತಿ ಇಡಲಾಗಿದ್ದ 3.5 ಪವನ್ ಚಿನ್ನದ ನೆಕ್ಲೇಸ್ ಹಾಗೂ 1 ಪವನ್ ಚಿನ್ನದ ಕರಿಮಣಿ ಸರವನ್ನು ಕಳವುಗೈದಿದ್ದಾರೆ.ಕಳವಾಗಿರುವ ಚಿನ್ನದ ಒಟ್ಟು ಮೌಲ್ಯ ರೂ. 1,30,000 ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.