ಕುಂದಾಪುರ: ಕುಂದಾಪುರ ತಾಲೂಕು ಕುಂದಾಪುರ ಹೋಬಳಿಗೆ ಸಂಬಂಧಪಟ್ಟಂತೆ ಕಂದಾಯ ಅದಾಲತ್, ಪೌತಿ, ಪಿಂಚಣಿ ಅದಾಲತ್ ಫೆ.9 ರಂದು ಹಾಲಾಡಿ ಶಾಲಿನಿ ಜಿ.ಶಂಕರ್ ಕನ್ವೆಷನ್ ಸೆಂಟರ್‌ನಲ್ಲಿ ನಡೆಯಿತು.
ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆದಿದ್ದು ಜಿಲ್ಲಾಧಿಕಾರಿ ಜಿ.ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಅಪರ ಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು, ಸಹಾಯಕ ಕಮೀಷನರ್ ಕೆ.ರಾಜು, ತಹಶೀಲ್ದಾರರಾದ ಆನಂದಪ್ಪ ನಾಯಕ್, ಅಧಿಕಾರಿಗಳು ಹಾಜರಿದ್ದರು.
ಕಂದಾಯ ಇಲಾಖೆಯ 94ಸಿ ಯೋಜನೆಯಡಿ 42 ಫಲಾನುಭವಿಗಳಿಗೆ ಹಕ್ಕುಪತ್ರ ಹಾಗೂ ಸಾಮಾಜಿಕ ಭದ್ರತೆ ಯೋಜನೆಯಡಿ 108 ಫಲಾನುಭವಿಗಳಿಗೆ ಪಿಂಚಣಿ ಮಂಜೂರಾತಿ ಆದೇಶವನ್ನು ವಿತರಿಸಲಾಯಿತು. ಹಾಗೂ 67 ಪ್ರಕರಣಗಳಲ್ಲಿ ಪಿಂಚಣಿ ಅದಾಲತ್ ನಡೆಸಿ ಸ್ಥಳದಲ್ಲಿ ಪಿಂಚಣಿ ಮಂಜೂರಾತಿ ಮಾಡಲಾಯಿತು. ಹಾಗೂ 2268 ಪ್ರಕರಣಗಳಲ್ಲಿ ಪಹಣಿ ತಿದ್ದುಪಡಿಗೆ ಕ್ರಮ ವಹಿಸಲಾಯಿತು, 191 ಜಮೀನಿಗೆ ಸಂಬಂಧಪಟ್ಟಂತೆ ಪೌತಿ ಅದಾಲತ್ ಕಾರ್ಯಕ್ರಮದಲ್ಲಿ ಪೌತಿ ಖಾತಾ ಬದಲಾವಣೆಗೆ ಅರ್ಜಿ ಸ್ವೀಕರಿಸಲಾಯಿತು. 63 11ಇ ಪ್ರಕರಣಗಳ ಆಕಾರಬಂದ್ ಆರ್.ಟಿ.ಸಿ ಹೊಂದಾಣಿಕೆ ಮಾಡಿ ತಿದ್ದುಪಡಿಗೆ ಕ್ರಮವಹಿಸಲಾಯಿತು.
Comments are closed.