ಬೆಳಗಾವಿ: ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿವಂಗತ ಸುರೇಶ್ ಅಂಗಡಿ ಅವರ ತಾಯಿ ಸೋಮವ್ವ ಅಂಗಡಿ (90) ವಿಧಿವಶರಾದರು
ಸೋಮವ್ವ ಅಂಗಡಿ ಕೆ.ಕೆ.ಕೊಪ್ಪ (ನಾಗೇರಹಾಳ)ದ ಸ್ವಗೃಹದಲ್ಲಿ ನಿಧನರಾಗಿದ್ದು ಮೃತರ ಅಂತಿಮ ಸಂಸ್ಕಾರವು ಗುರುವಾರ ಸಂಜೆ 5 ಗಂಟೆಗೆ ಕೆ.ಕೆ.ಕೊಪ್ಪದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿದೆ.
ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಸಂಸದರಾಗಿದ್ದ ಸುರೇಶ್ ಅಂಗಡಿ ಕೊರೋನಾ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಫಲಿಸದೆ ದೆಹಲಿಯಲ್ಲಿ ಮೃತಪಟ್ಟಿದ್ದರು. ಈ ಘಟನೆ ಬಳಿಕ ಅವರ ತಾಯಿಯೂ ಆಘಾತಕ್ಕೀಡಾಗಿದ್ದು ನಿಧನವಾಗಿದ್ದಾರೆ.
ಸದ್ಯ ಅಂಗಡಿ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ.
Comments are closed.