ಜಮ್ಮು-ಕಾಶ್ಮೀರ: ಭದ್ರತಾ ಪಡೆ ಯೋಧರ ಜೊತೆ ಗುರುವಾರ ಬೆಳಗ್ಗೆ ನಡೆದ ಎನ್ ಕೌಂಟರ್ ನಲ್ಲಿ ಇಬ್ಬರು ಉಗ್ರರು ಹತ್ಯೆಗೊಂಡಿದ್ದಾರೆ.
ಇಂದಿನ ಎನ್ ಕೌಂಟರ್ ನಲ್ಲಿ ಹತ್ಯೆಗೊಂಡ ಉಗ್ರರ ಸಂಖ್ಯೆ ಎರಡಕ್ಕೇರಿದ್ದು ಕಾರ್ಯಾಚರಣೆ ಮುಂದುವರಿದಿದೆ. ಹೆಚ್ಚಿನ ವಿವರ ಲಭ್ಯವಾಗಲಿದೆ ಎಂದು ಕಾಶ್ಮೀರ ವಲಯ ಪೊಲೀಸ್ ಐಜಿ ವಿಜಯ್ ಕುಮಾರ್ ತಿಳಿಸಿದ್ದಾರೆ.
ಈ ವಾರದ ಆರಂಭದಲ್ಲಿ ಅಲ್-ಬದ್ರ್ ಮುಖ್ಯಸ್ಥ ಗಾನಿ ಖ್ವಾಜ ನನ್ನು ಭದ್ರತಾ ಪಡೆ ಪೊಲೀಸರು ಕೊಂದು ಹಾಕಿದ್ದರು. ಮತ್ತೊಬ್ಬರು ಉಗ್ರರು ಸೊಪೊರೆ ಎಂಬಲ್ಲಿ ನಡೆದ ಎನ್ ಕೌಂಟರ್ ನಲ್ಲಿ ತಪ್ಪಿಸಿಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾರೆ.
ಸಿಆರ್ ಪಿಎಫ್ ಯೋಧ ಆತ್ಮಹತ್ಯೆ: ಇನ್ನು ಜಮ್ಮು-ಕಾಶ್ಮೀರದ ಬದ್ಗಮ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಸಿಆರ್ ಪಿಎಫ್ ಯೋಧ ಆತ್ಮಹತ್ಯೆ ಮಾಡಿಕೊಂಡು ಹುತಾತ್ಮರಾಗಿದ್ದಾರೆ. ಮಾನಸಿಕ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಯಾವುದೇ ಶಸ್ತ್ರಾಸ್ತ್ರವನ್ನು ನೀಡಿರಲಿಲ್ಲ. ಇಂದು ಬೇರೆ ಯೋಧರು ತಮ್ಮ ಕೆಲಸಗಳಲ್ಲಿ ಮಗ್ನವಾಗಿದ್ದ ಸಮಯದಲ್ಲಿ ಮತ್ತೊಬ್ಬರ ಪಿಸ್ತೂಲ್ ನ್ನು ತೆಗೆದುಕೊಂಡು ತಮ್ಮ ಮೇಲೆ ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೇರಳ ಮೂಲದ ಯೋಧರಾದ ಇವರು ಕಳೆದ ವಾರವಷ್ಟೇ ರಜೆ ಮುಗಿಸಿಕೊಂಡು ಬಂದು ಕೆಲಸಕ್ಕೆ ಮರಳಿದ್ದರು ಎಂದು ಸಿಆರ್ ಪಿಎಫ್ ತಿಳಿಸಿದೆ.
Comments are closed.