ರಾಷ್ಟ್ರೀಯ

ಬ್ಯಾಂಕಿನಲ್ಲಿ ಏನೇ ಕೆಲಸ ಇದ್ದರೂ ಇಂದೇ ಮುಗಿಸಿಬಿಡಿ ! ನಾಳೆಯಿಂದ 4 ದಿನ ಬ್ಯಾಂಕ್ ಬಂದ್…

Pinterest LinkedIn Tumblr

ನವದೆಹಲಿ: ಬ್ಯಾಂಕ್​ನಲ್ಲಿ ಎಷ್ಟೋ ಮಂದಿಗೆ ಪ್ರತಿದಿನವೂ ಕೆಲಸ ಇರುತ್ತದೆ. ಇನ್ನು ಕೆಲವರು ತುರ್ತು ಕೆಲಸ ಇದ್ದರೂ ನಾಳೆ ಹೋದರಾಯಿತು ಎಂದುಕೊಂಡು ಸುಮ್ಮನಾಗಿ ಬಿಡುತ್ತಾರೆ. ಆದರೆ ಇಂದು ಆ ರೀತಿ ತಪ್ಪು ಮಾಡಬೇಡಿ. ಏಕೆಂದರೆ ನಾಳೆಯಿಂದ ನಾಲ್ಕು ದಿನ ಬ್ಯಾಂಕ್​ ಸೇವೆ ನಿಮಗೆ ಸಿಗಲ್ಲ!

ಸಾರ್ವಜನಿಕ ವಲಯದ ಬ್ಯಾಂಕ್​ಗಳ ಖಾಸಗೀಕರಣ ವಿರೋಧಿಸಿ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ನೇತೃತ್ವದ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ಇದೇ 15 ಮತ್ತು 16 ಅಂದರೆ ಸೋಮವಾರ ಮತ್ತು ಮಂಗಳವಾರ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ.

ಬ್ಯಾಂಕ್​ ನೌಕರರ ಈ ಬೇಡಿಕೆ ಈಡೇರಿಸುವ ಭರವಸೆ ಸಿಕ್ಕಿದ್ದರೂ ಅದು ಇನ್ನೂ ನೆರವೇರಿಲ್ಲ ಎಂಬ ಕಾರಣಕ್ಕೆ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ನೌಕರರು ಮುಂದಾಗಿದ್ದಾರೆ. ಆದ ಕಾರಣ, ಅವೆರಡು ದಿನಗಳು ಬ್ಯಾಂಕ್​ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ನಾಳೆ ಮಾರ್ಚ್​ 13 ಶನಿವಾರ. ಇದು ಎರಡನೆಯ ಶನಿವಾರ ಆಗಿರುವ ಕಾರಣ ಸಹಜವಾಗಿ ಬ್ಯಾಂಕ್​ಗೆ ರಜೆ ಇದೆ. ನಂತರ ಭಾನುವಾರ. ಅದಾದ ಮೇಲೆ ಸೋಮವಾರ ಮತ್ತು ಮಂಗಳವಾರ ಮುಷ್ಕರ. ಆದ್ದರಿಂದ ನಾಳೆಯಿಂದ ನಾಲ್ಕು ದಿನ ನೀವು ಬ್ಯಾಂಕ್​ ಕಡೆಗೆ ಹೋಗುವಂತಿಲ್ಲ. ಆದ್ದರಿಂದ ಏನೇ ಕೆಲಸ ಇದ್ದರೂ ಇಂದು ಮುಗಿಸಿಬಿಡಿ. ಇಲ್ಲದಿದ್ದರೆ ಪರದಾಡುವ ಸ್ಥಿತಿ ನಿರ್ಮಾಣ ಆಗಬಹುದು.

ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವ ನಿರ್ಧಾರ ಮರುಪರಿಶೀಲಿಸಲು ಒಂದು ವೇಳೆ ಸರ್ಕಾರವು ಒಪ್ಪಿದರೆ ಮುಷ್ಕರವನ್ನು ಮರುಪರಿಶೀಲಿಸುವುದಾಗಿ ಬ್ಯಾಂಕ್ ನೌಕರರ ಸಂಘಟನೆಗಳು ಹೇಳಿವೆ. ಅಂದರೆ ಇನ್ನೊಂದೆರಡು ದಿನಗಳಲ್ಲಿ ಅವರ ಬೇಡಿಕೆ ಈಡೇರಿಸಿದರೆ ಮುಷ್ಕರ ನಡೆಯುವುದಿಲ್ಲ. ಹಾಗೆ ಆಗದಿದ್ದರೆ ಗ್ರಾಹಕರು ಪರದಾಡಬೇಕಾಗುತ್ತದೆ.

Comments are closed.