ಕರಾವಳಿ

ಮಂಗಳೂರಿನಲ್ಲಿ 400 ವರ್ಷ ಹಳೆಯ ಸಮಾಧಿ ಕಲ್ಲು ಪತ್ತೆ 

Pinterest LinkedIn Tumblr

ಮಂಗಳೂರು: ಈ ತಿಂಗಳ ಆರಂಭದಲ್ಲಿ ಮಂಗಳೂರಿನ ಬೋಳಾರದಲ್ಲಿ 16ನೇ ಶತಮಾನಕ್ಕೆ ಸೇರಿದ ಪೋರ್ಚುಗೀಸ್ ಶಾಸನವೊಂದು ಪತ್ತೆಯಾಗಿತ್ತು.

ಅಂದಿನ ಕಾಲದಲ್ಲಿ ಈ ಪ್ರದೇಶವು ಪೋರ್ಚುಗೀಸ್ ನೆಲೆಯಾಗಿದು 1568 ರಲ್ಲಿ ಸೈಂಟ್ ಸೆಬಾಸ್ಟಿನ್ ಎಂಬ ಕೋಟೆಯು ಅವರಿಂದ ನಿರ್ಮಿಸಲಾಗಿತ್ತು ಹಾಗೂ ಇಂತಹದೇ ಒಂದು ಸಮಾಧಿ ಕಲ್ಲು 8 ವರ್ಷಗಳ ಹಿಂದೆ ಇದೇ ಪರಿಸರದಲ್ಲಿ ದೊರಕಿದೆ.

ಇದು ಡೊಮಿಂಗೊಸ್ ದೆ ಮೌರಾ ಕುಟಿನ್ಹೊ ಎಂಬ ಪೋರ್ಚುಗೀಸ್ ನಾಯಕನಿಗೆ ಸೇರಿದು, ಈತ ಎಪ್ರಿಲ್ 30, 1629ರಲ್ಲಿ ಮೃತಪಟ್ಟಿರುತ್ತಾನೆ ಎಂಬ ಮಾಹಿತಿಯು ಶಾಸನದಲ್ಲಿ ಉಲ್ಲೇಖಿಸಿದ್ದನ್ನು ತಜ್ಞರು ಅಭಿಪ್ರಾಯ ಪಟ್ಟಿದ್ದರು.

ಈ ಶಾಸನವು 4~ಶತಮಾನಗಳಿಂದ ನಿರ್ಲಕ್ಷಿಸಲ್ಪಟ್ಟಿದ್ದರೂ ಉತ್ತಮ ಸಿತಿಯಲ್ಲಿದ್ದ ಕಾರಣದಿಂದ ಶಾಸನದಲ್ಲಿನ ಬರವಣಿಗೆಯನ್ನು ಅರ್ಥೈಸಲು ಸಾಧ್ಯವಾಯಿತು.

2013ರಲ್ಲಿ ತದ ನಂತರ ಆ ಸಮಾಧಿ ಕಲ್ಲನ್ನು ರೊಸಾರಿಯೋ ಚರ್ಚ್‌ನ ಆವರಣಕ್ಕೆ ಸ್ಥಳಾಂತರಿಸಲಾಯಿತು. ಆದರೆ ಇತ್ತೀಚೆಗೆ ಪತ್ತೆಯಾದ ಸಮಾಧಿ ಕಲ್ಲು ತೀರಾ ಕೆಟ್ಟ ಸ್ಥಿತಿಯಲ್ಲಿದು ಶಾಸನದಲ್ಲಿ ದೋಷಗಳು ಕಂಡಿದು ಲಾಂಛನವು ಹಾನಿಗೊಳಗಾಗಿದೆ.

ಹೀಗಿದ್ದರೂ 400 ವರ್ಷಗಳ ಹಿಂದಿನ ಈ ಶಾಸನವು ಕೆಲವು ಕುತೂಹಲಕಾರಿ ಐತಿಹಾಸಿಕ ಘಟನೆಗಳನ್ನು ಅರ್ಥೈಸಲು ಸುಲಭ ಸಾಧ್ಯವಾಗಿದೆ. ಈ ಶಾಸನವನ್ನು ಓದುವಾಗ ಈ ವಿವರಗಳು ತಿಳಿಯ ಬರುತ್ತದೆ ಎನ್ನುತಾರೆ ತಜ್ಞರು.

Comments are closed.