ಮನೋರಂಜನೆ

ಕನ್ನಡ ಹಾಡೊಂದನ್ನು ಹಾಡಿ ಎಲ್ಲರ ಗಮನ ಸೆಳೆದ ಬಾಲಿವುಡ್ ನಟ; ವೀಡಿಯೊ ವೈರಲ್

Pinterest LinkedIn Tumblr

ಬೆಂಗಳೂರು: ಬಾಲಿವುಡ್ ನಟ ಗೋವಿಂದ್ ಅವರು ಕನ್ನಡ ಹಾಡೊಂದನ್ನು ಹಾಡಿದ್ದಾರೆ. ಈ ವೀಡಿಯೋವನ್ನು ಹರ್ಷಿಕಾ ಪೂಣಚ್ಚ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಡಾ.ರಾಜ್‍ಕುಮಾರ್ ಅಭಿನಯದ ಎರಡು ಕನಸು ಸಿನಿಮಾದ ‘ಎಂದೆಂದೂ ನಿನ್ನನೂ ಮರೆತೂ ನಾನಿರಲಾರೇ..’ ಎಂದು ಕನ್ನಡ ಸಾಂಗ್‍ನ ಎರಡು ಲೈನ್ ಹಾಡಿದ್ದಾರೆ. ಈ ವೀಡಿಯೋವನ್ನು ಹರ್ಷಿಕಾ ನನ್ನ ಜೀವನದ ಅತ್ಯುತ್ತಮ ದಿನ ಇಂದಾಗಿದೆ. ಎವರ್‍ಗ್ರೀನ್ ಸೂಪರ್‍ಸ್ಟಾರ್ ಗೋವಿಂದ ಸರ್ ಅವರನ್ನು ಭೇಟಿ ಮಾಡಿದೆ. ಅವರು ನನ್ನೊಂದಿಗೆ ಒಂದು ಕನ್ನಡ ಹಾಡನ್ನು ಹಾಡಿದ್ದಾರೆ. ಅವರು ಡಾ.ರಾಜ್‍ಕುಮಾರ್ ಸರ್ ಮತ್ತು ಅವರ ಹಾಡುಗಳನ್ನು ಪ್ರೀತಿಸುತ್ತಾರೆ ಎಂದು ಬರೆದುಕೊಂಡು ವೀಡಿಯೋ ಹಂಚಿಕೊಂಡಿದ್ದಾರೆ. ಈ ವೀಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.

https://www.instagram.com/tv/CMv4PvGnZvj/?utm_source=ig_embed

ಬಾಲಿವುಡ್ ನಟನ ಕನ್ನಡ ಪ್ರೀತಿಯನ್ನು ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಕರ್ನಾಟಕದಲ್ಲೇ ಕನ್ನಡ ಹಾಡನ್ನು ಕಡೆಗಣಿಸಲಾಗುತ್ತದೆ ಎಂಬ ಬೇಸರ ಆಗಾಗ ಕೇಳಿ ಬರುತ್ತದೆ. ಆದರೆ ಪರಭಾಷೆಯವರು ನಮ್ಮ ಕನ್ನಡ ಸಿನಿಮಾ ಗೀತೆಯನ್ನು ಹಾಡುವುದಕ್ಕೆ ನೆಟ್ಟೆಗರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಗೋವಿಂದ್ ಅವರಿಗೆ ಹರ್ಷಿಕಾ ಪೂಣಚ್ಚ ಕನ್ನಡ ಹಾಡನ್ನು ಹಾಡುವಂತೆ ಹೇಳ್ತಿದ್ದಂತೆಯೇ ನಟ ಎಷ್ಟೊಂದು ಪ್ರೀತಿಯಿಂದ ಹಾಡಿದ್ದಾರೆ ಎಂಬುದನ್ನು ನಾವು ಈ ವೀಡಿಯೋದಲ್ಲಿ ನೋಡಬಹುದಾಗಿದೆ.

Comments are closed.