ಕಾಂತಿ(ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದಲ್ಲಿರುವ ಯಾವ ಭಾರತೀಯನೂ ಹೊರಗಿನವರಲ್ಲ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಈ ಮಣ್ಣಿನ ಮಗನೇ ಮುಖ್ಯಮಂತ್ರಿಯಾಗುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಘೋಷಿಸಿದ್ದಾರೆ.
ಪುರ್ಬ ಮೇದಿನಿಪುರ ಜಿಲ್ಲೆಯ ಕಾಂತಿಯಲ್ಲಿ ಇಂದು ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಬಂಗಾಳವು ‘ವಂದೇ ಮಾತರಂ’ ಮೂಲಕ ಇಡೀ ರಾಷ್ಟ್ರವನ್ನು ಒಟ್ಟುಗೂಡಿಸಿದೆ. ಆದರೆ ಸಿಎಂ ಮಮತಾ ಬ್ಯಾನರ್ಜಿ ಇಲ್ಲಿನ ಜನರನ್ನು “ಬೋಹಿರಗೋಟೊ(ಹೊರಗಿನವರು)” ಎಂದು ಕರೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬಂಗಾಳವು ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ, ರವೀಂದ್ರನಾಥ ಟ್ಯಾಗೋರ್ ಮತ್ತು ಸುಭಾಸ್ ಚಂದ್ರ ಬೋಸ್ ಅವರಂತಹ ಮಹಾನ್ ವ್ಯಕ್ತಿಗಳ ಭೂಮಿಯಾಗಿತ್ತು ಮತ್ತು ಈ ಭೂಮಿಯಲ್ಲಿರುವ ಯಾವುದೇ ಭಾರತೀಯನು ಹೊರಗಿನವರಾಗಿರಲಿಲ್ಲ ಎಂದರು.
ಬಂಗಾಳವು ವಂದೇ ಮಾತರಂ ಮೂಲಕ ಭಾರತದ ಜನರನ್ನು ಒಟ್ಟುಗೂಡಿಸಿದೆ ಮತ್ತು ಈ ಭೂಮಿಯಲ್ಲಿ, ಮಮತಾ-ದೀದಿ ‘ಬೋಹಿರಗೋಟೊ’ ಬಗ್ಗೆ ಮಾತನಾಡುತ್ತಿದ್ದಾರೆ. ಇಲ್ಲಿರುವ ಒಬ್ಬ ಭಾರತೀಯನೂ ಹೊರಗಿನವರಲ್ಲ, ಅವರು ಭಾರತ್ ಮಾತೆಯ ಮಕ್ಕಳು” ಎಂದು ಪ್ರಧಾನಿ ಮೋದಿ ತಿರುಗೇಟು ನೀಡಿದರು.
ನಮ್ಮನ್ನು ‘ಪ್ರವಾಸಿಗರು’ ಎಂದು ಕರೆಯಲಾಗುತ್ತಿದೆ, ನಮ್ಮ ಬಗ್ಗೆ ತಮಾಷೆ ಮಾಡಲಾಗುತ್ತಿದೆ, ನಮ್ಮನ್ನು ಅವಮಾನಿಸಲಾಗುತ್ತಿದೆ. ಆದರೆ ರವೀಂದ್ರನಾಥ್ ಬಂಗಾಳದ ಜನರು ಯಾರನ್ನೂ ಹೊರಗಿನವರೆಂದು ಪರಿಗಣಿಸುವುದಿಲ್ಲ ಎಂದು ಮೋದಿ ಹೇಳಿದರು.
Comments are closed.