ಮಂಗಳೂರು, ಮಾರ್ಚ್ 25 : ಕೊರೋನಾ ವೈರಾಣುವಿನಿಂದ ಹರಡುವ ಕೋವಿಡ್-19 ರೋಗ ಸಮುದಾಯದಲ್ಲಿ ಹೆಚ್ಚುತ್ತಲೇ ಇದೆ. ಎರಡನೇ ಅಲೆ ಮತ್ತಷ್ಟು ರೋಗಿಗಳನ್ನು ಕಾಡುತ್ತಿದೆ. ಲಸಿಕೆ ಬಂದಿದೆ ಎಂದು ಇನ್ನು ರೋಗ ಬರುವುದಿಲ್ಲ ಎಂದು ಮೈ ಮರೆಯಬಾರದು.
ಪ್ರತಿಯೊಬ್ಬರು ಸಾಮಾಜಿಕ ಅಂತರ, ಮುಖ ಕವಚ ಧರಿಸುವಿಕೆ, ಸ್ಯಾನಿಟೈಸರ್ ಮತ್ತು ಸಾಬೂನಿನ ಬಳಕೆಯನ್ನು ಇನ್ನಷ್ಟು ದಿನಗಳ ಕಾಲ ಬಳಸುವುದು ಸೂಕ್ತವಾಗಿದೆ. ಇದರ ಮುಖಾಂತರವೇ ರೋಗವನ್ನು ನಿಯಂತ್ರಿಸಲು ಸಾಧ್ಯ ಈ ನಿಟ್ಟಿನಲ್ಲಿ ನಾವೆಲ್ಲರೂ ಇನ್ನಷ್ಟು ಜಾಗೃತರಾಗಿ ವ್ಯವಹರಿಸಬೇಕಾಗಿದೆ ಎಂದು ಎಂದು ಜಿಲ್ಲಾ ಸಮಾದೇಷ್ಟರಾದ ಡಾ. ಮುರಲೀ ಮೋಹನ್ ಚೂಂತಾರು ತಿಳಿಸಿದರು.
ಜಿಲ್ಲಾ ಗೃಹರಕ್ಷಕ ದಳ ಮತ್ತು ಪೌರರಕ್ಷಣಾ ತಂಡದ ವತಿಯಿಂದ ಕೋವಿಡ್ ಜಾಗೃತಿ ಜಾಥಾ ಮತ್ತು ಅಭಿಯಾನವನ್ನು ನಗರದ ಪದವಿನಂಗಡಿಯಲ್ಲಿ ನಡೆಸಲಾಯಿತು.
ಪದವಿನಂಗಡಿಯ ಎಲ್ಲಾ ಅಂಗಡಿಗಳಿಗೆ ತೆರಳಿ ಕೋವಿಡ್ ರೋಗದ ಲಕ್ಷಣಗಳು ಮತ್ತು ಕೋವಿಡ್ ರೋಗ ತಡೆಯುವಿಕೆ ಬಗ್ಗೆ ಮಾಹಿತಿ ಇರುವ ಕರಪತ್ರವನ್ನು ಎಲ್ಲರಿಗೂ ಹಂಚುವುದರೊಂದಿಗೆ ಎಲ್ಲರಿಗೂ ಮುಖ ಕವಚವನ್ನು ಕಡ್ಡಾಯವಾಗಿ ಧರಿಸುವಂತೆ ಆದೇಶ ನೀಡಲಾಯಿತು.
ಈ ಸಂಧರ್ಭದಲ್ಲಿ ಉಪ ಸಮಾದೇಷ್ಟರಾದ ರಮೇಶ್, ಹಾಗೂ ಕಚೇರಿಯ ಅಧೀಕ್ಷಕರಾದ ರತ್ನಾಕರ್ ಹಾಗೂ ವಿವಿಧ ಘಟಕಗಳ ಘಟಕಾಧಿಕಾರಿಗಳು ಇನ್ನಿತರರರು ಉಪಸ್ಥಿತರಿದ್ದರು.
Comments are closed.