
ಮಧುರೈ: ಡಿಎಂಕೆ -ಕಾಂಗ್ರೆಸ್ ಕೇವಲ ಕುಟುಂಬದ ರಾಜಕಾರಣದ ಬಗ್ಗೆ ಮಾತ್ರ ಕಾಳಜಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ತಮಿಳುನಾಡು ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಮಧುರೈನಲ್ಲಿ ಪ್ರಚಾರ ಸಮಾವೇಶದಲ್ಲಿ ಭಾಗಿಯಾದ ಅವರು, ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಡಿಎಂಕೆಗೆ ಕುಟುಂಬ ರಾಜಕಾರಣವೇ ಮುಖ್ಯ. ಇದೇ ಹಿನ್ನಲೆ ಇಲ್ಲಿನ ಸ್ಥಳದ ನೀತಿಯನ್ನು ಅರ್ಥಮಾಡಿಕೊಂಡಿಲ್ಲ. ಮಹಿಳಾ ನಾಯಕರನ್ನು ಅವರು ಮತ್ತೆ ಮತ್ತೆ ಅವಮಾನಿಸುತ್ತಿದ್ದಾರೆ ಎಂದು ಹರಿಹಾಯ್ದರು.
ಜಲ್ಲಿಕಟ್ಟು ನಿಷೇಧದ ಬಗ್ಗೆ ಕೂಡ ವಾಗ್ದಾಳಿ ನಡೆಸಿದ ಅವರು, 2016ರಲ್ಲಿ ತಮಿಳುನಾಡು ಕಾಂಗ್ರೆಸ್ ತಮ್ಮ ಪ್ರಣಾಳಿಕೆಯನ್ನು ಜಲ್ಲಿಕಟ್ಟು ನಿಷೇಧ ಮಾಡುವ ಕುರಿತು ತಿಳಿಸಿತು. ಈ ಬಗ್ಗೆ ಡಿಎಂಕೆ ಮತ್ತು ಕಾಂಗ್ರೆಸ್ ನಾಚಿಕೆ ಪಡಬೇಕು. ಜಲ್ಲಿಕಟ್ಟನ್ನು ಮುಂದುವರೆಸು ಕುರಿತು ಜನರು ಬೇಡಿಕೆಯಿಟ್ಟರು. ನಮ್ಮ ಸರ್ಕಾರ ಎಐಎಡಿಎಂಕೆ ಮೂಲಕ ಜಲ್ಲಕಟ್ಟು ಮೇಲೆ ಹೇರಿದ್ದ ನಿಷೇಧವನ್ನು ಸುಗ್ರೀವಾಜ್ಞೆ ಮೂಲಕ ತೆರವುಗೊಳಿಸಿತು ಎಂದರು.
ಡಿಎಂಕೆ ಮತ್ತು ಕಾಂಗ್ರೆಸ್ ತಮಿಳು ಸಂಸ್ಕೃತಿಯನ್ನು ರಕ್ಷಿಸುವರಂತೆ ನಟಿಸುತ್ತಾರೆ. ಆದರೆ, ಅವರು ವಾಸ್ತವ ಬೇರೆ ಇದೆ. ಡಿಎಂಕೆ ಮತ್ತು ಕಾಂಗ್ರೆಸ್ ಮಾತನಾಡಲು ಯಾವುದೇ ಅಜೆಂಡಾ ಇಲ್ಲ. ಆದರೆ, ಅವರು ತಮ್ಮ ಸುಳ್ಳುಗಳ ಮೇಲೆ ನಿಯಂತ್ರಣ ಹೊಂದಬೇಕು. ಇವರ ಸುಳ್ಳುಗಳನ್ನು ನಂಬಲು ಜನರು ಮೂರ್ಖರಲ್ಲ ಎಂದು ತಿಳಿಸಿದರು.
ಇದೇ ವೇಳೆ ಮಧುರೈ-ಕೊಲ್ಲಂ ಆರ್ಥಿಕ ಕಾರಿಡಾರ್ ಯೋಜನೆಗೆ ಪ್ರಧಾನಿ ಭರವಸೆ ನೀಡಿದರು.
ಕಳೆದ ವರ್ಷ ಕೆಂಪು ಕೋಟೆಯಲ್ಲಿ ಮುಂದಿನ ಪೀಳಿಗೆಯ ಮೂಲ ಸೌಕರ್ಯಕ್ಕಾಗಿ ಕೇಂದ್ರವೂ 100 ಲಕ್ಷ ಕೋಟಿ ಖರ್ಚು ಮಾಡಲಿದೆ ಎಂದು ಹೇಳಿದ್ದೇವು. ಅದು ಪ್ರಸ್ತುತ ಮಾತ್ರವಲ್ಲ ಭವಿಷ್ಯದ ಪೀಳಿಗೆಯ ಅಗತ್ಯತೆಗಳನ್ನು ಪೂರೈಸುತ್ತದೆ. ಈ ಬಾರಿಯ ಕೇಂದ್ರದ ಬಜೆಟ್ನಲ್ಲಿ ಆರ್ಥಿಕ ಕಾರಿಡಾರ್ಗಳನ್ನು ಘೋಷಿಸಲಾಗಿದೆ, ಅವುಗಳಲ್ಲಿ ಒಂದು ಈ ಮಧುರೈ-ಕೊಲ್ಲಂ ಕಾರಿಡಾರ್ ಆಗಿದೆ ಎಂದರು.
ಗುರುವಾರವೇ ಮಧುರೈಗೆ ಭೇಟಿನೀಡಿರುವ ಪ್ರಧಾನಿ ಮೋದಿ ಅಲ್ಲಿನ ಪ್ರಸಿದ್ಧ ಮೀನಾಕ್ಷಿ ದೇವಾಸ್ಥಾನಕ್ಕೆ ಭೇಟಿ ನೀಡಿದರು. ಬಳಿಕ ಇಂದು ಸಾರ್ವಜನಿಕರ ಸಭೆ ನಡೆಸಿದ್ದಾರೆ. ಇದಾದ ಬಳಿಕ ಅವರು ಕೇರಳಕ್ಕೆ ಭೇಟಿ ನೀಡಲಿದ್ದು, ಅಲ್ಲಿ ಕೂಡ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
Comments are closed.