ಬೆಂಗಳೂರು: ಸ್ಯಾಂಡಲ್‌ವುಡ್ ನಟ ಪುನೀತ್ ರಾಜ್‌ಕುಮಾರ್ ವ್ಯಾಕ್ಸಿನ್ ಪಡೆದಿದ್ದಾರೆ. ಕೊರೋನಾ ವ್ಯಾಕ್ಸಿನ್‌ನ ಫಸ್ಟ್ ಡೋಸ್ ಪಡೆದ ನಟ ಪುನೀತ್ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ.
‘ನಾನು ಕೊರೋನಾ ವ್ಯಾಕ್ಸಿನ್ ಮೊದಲ ಡೋಸ್ ಪಡೆದಿದ್ದೇನೆ. ನೀವೂ 45 ವರ್ಷ ಮೇಲ್ಪಟ್ಟವರಾಗಿದ್ದರೆ ವ್ಯಾಕ್ಸಿನೇಷನ್ ಪಡೆದುಕೊಳ್ಳಿ’ ಎಂದು ಫೋಟೋ ಸಹಿತ ಟ್ವೀಟ್ ಮೂಲಕ ಫವರ್ ಸ್ಟಾರ್ ಕೇಳಿಕೊಂಡಿದ್ದಾರೆ.
ಯುವರತ್ನ ಸಿನಿಮಾ ಬಿಡುಗಡೆ ವೇಳೆಯೇ ಕೊರೋನಾ ಪ್ರಕರಣಗಳು ಕೂಡಾ ಹೆಚ್ಚಾಗಿದ್ದು, ಸಿನಿಮಾ ಪ್ರದರ್ಶನಕ್ಕೂ ತೊಂದರೆಯಾಗಿತ್ತು. ಬಳಿಕ ಚಿತ್ರತಂಡ ಸಿಎಂ ಅವರನ್ನು ಭೇಟಿಯಾಗಿ ಕಾಲಾವಕಾಶ ನೀಡುವಂತೆ ಕೇಳಿಕೊಂಡಿದ್ದರು. ಮಾತ್ರವಲ್ಲದೆ ಮಾಸ್ಕ್ ಧಾರಣೆ, ಕೋವಿಡ್ ನಿಯಮ ಪಾಲನೆ ಜೊತೆಗೆ 45 ವರ್ಷ ಮೇಲ್ಪಟ್ಟವರು ವಾಕ್ಸಿನ್ ಪಡೆಯುವ ಬಗ್ಗೆ ಜಾಗೃತಿ ಮೂಡಿಸಿದ್ದರು.
ಇದೀಗಾ ತಾನು ಕೂಡ ಆರೋಗ್ಯ ಕೇಂದ್ರಕ್ಕೆ ತೆರಳಿ ವಾಕ್ಸಿನ್ ಪಡೆಯುವ ಮೂಲಕ ಮಾದರಿಯಾಗಿದ್ದಾರೆ.
Comments are closed.