ಕ್ರೀಡೆ

ಆರ್‌ಸಿಬಿಯನ್ನು ಹೀನಾಯವಾಗಿ ಸೋಲಿಸಿದ ಪಂಜಾಬ್‌

Pinterest LinkedIn Tumblr

ಅಹ್ಮದಾಬಾದ್: ಆರ್‌ಸಿಬಿ ತಂಡದ ಮಾಜಿ ಆಟಗಾರರಾದ ಕೆಎಲ್‌ ರಾಹುಲ್‌ (91*) ಮತ್ತು ಕ್ರಿಸ್‌ ಗೇಲ್ (46) ಅವರ ಸ್ಫೋಟಕ ಬ್ಯಾಟಿಂಗ್‌ ಬಲದಿಂದ ಪಂಜಾಬ್‌ ಕಿಂಗ್ಸ್‌ ತಂಡ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ಬೃಹತ್ ಮೊತ್ತ ದಾಖಲಿಸಿದೆ.

ಮೊಟೆರಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಪಂಜಾಬ್ ಕಿಂಗ್ಸ್‌, ಉತ್ತಮ ಆರಂಭ ಪಡೆದರೂ ಇನಿಂಗ್ಸ್ ಮಧ್ಯದಲ್ಲಿ ಅಪಾಯಕ್ಕೆ ಸಿಲುಕಿತ್ತು. ಆದರೆ, ಕೊನೇ ಓವರ್‌ಗಳಲ್ಲಿ ಬಿರುಸಿನ ಆಟವಾಡಿದ ಪರಿಣಾಮ 20 ಓವರ್‌ಗಳಲ್ಲಿ 179/5 ರನ್‌ಗಳ ಬೃಹತ್‌ ಮೊತ್ತ ಗಳಿಸಿತು.

ನಾಯಕನ ಆಟವಾಡಿದ ಕೆಎಲ್‌ ರಾಹುಲ್‌, ಆರ್‌ಸಿಬಿ ವಿರುದ್ಧದ ತಮ್ಮ ಬ್ಯಾಟಿಂಗ್‌ ದಾಖಲೆಯನ್ನು ಕಾಯ್ದುಕೊಂಡಿದ್ದಾರೆ. 2019ರ ಬಳಿಕ ಆರ್‌ಸಿಬಿ ಎದುರು ಈವರೆಗೆ ತಮ್ಮ ವಿಕೆಟ್‌ ಕೈಚೆಲ್ಲದೇ ಉಳಿದಿರುವ ರಾಹುಲ್‌ ಶುಕ್ರವಾರದ ಪಂದ್ಯದಲ್ಲಿ 57 ಎಸೆತಗಳಲ್ಲಿ 7 ಫೋರ್ ಮತ್ತು 5 ಸಿಕ್ಸರ್‌ನೊಂದಿಗೆ ಅಜೇಯ 91 ರನ್‌ ಬಾರಿಸಿ ತಂಡದ ದೊಡ್ಡ ಮೊತ್ತಕ್ಕೆ ಕಾರಣರಾದರು.

ಕ್ರಿಸ್‌ ಗೇಲ್ ಓಪನಿಂಗ್ ಅವಕಾಶ ಇಲ್ಲ
ಮತ್ತೊಂದೆಡೆ ಪಂಜಾಬ್‌ ತಂಡ ಬರೋಬ್ಬರಿ ಮೂರು ಬದಲಾವಣೆ ತಂದುಕೊಂಡಿದೆ. ಮಯಾಂಕ್ ಅಗರ್ವಾಲ್‌, ಮೊಯ್ಸೆಸ್‌ ಹೆನ್ರಿಕ್ಸ್‌ ಮತ್ತು ಅರ್ಷದೀಪ್‌ ಸಿಂಗ್‌ ಅವರಿಗೆ ವಿಶ್ರಾಂತಿ ಕೊಟ್ಟು, ಪ್ರಭಸಿಮ್ರನ್ ಸಿಂಗ್, ಹರಪ್ರೀತ್‌ ಸಿಂಗ್ ಮತ್ತು ರೈಲಿ ಮೆರಿಡಿತ್‌ ಅವರನ್ನು ಆಡಿಸಲು ಮುಂದಾಗಿದೆ. ಮಯಾಂಕ್ ಹೊರಬಿದ್ದಿರುವ ಹಿನ್ನೆಲೆಯಲ್ಲಿ ಕ್ರಿಸ್‌ ಗೇಲ್ ಮತ್ತು ಕೆಎಲ್‌ ರಾಹುಲ್ ಪಂಜಾಬ್ ಪರ ಇನಿಂಗ್ಸ್‌ ಆರಂಭಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ರಾಹುಲ್‌ ಯುವ ಪ್ರತಿಭೆ ಪ್ರಭಸಿಮ್ರನ್ ಸಿಂಗ್‌ ಅವರನ್ನು ಆರಂಭಿಕ ಜೊತೆಗಾರನನ್ನಾಗಿ ಆಯ್ಕೆ ಮಾಡಿಕೊಂಡರು. ಗಾಯದ ಸಮಸ್ಯೆ ಕಾರಣ ಮಯಾಂಕ್ ಅಲಭ್ಯರಾಗಿದ್ದಾರೆ.

ಆರ್‌ಸಿಬಿ ಪ್ಲೇಯಿಂಗ್ ಇಲೆವೆನ್
ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿ’ವಿಲಿಯರ್ಸ್ (ವಿಕೆಟ್‌ಕೀಪರ್‌), ಶಹಬಾಝ್ ಅಹ್ಮದ್, ಡೇನಿಯೆಲ್ ಸ್ಯಾಮ್ಸ್, ಕೈಲ್ ಜೇಮಿಸನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಲ್.

ಪಿಬಿಕೆಎಸ್‌ ಪ್ಲೇಯಿಂಗ್ ಇಲೆವೆನ್
ಕೆ.ಎಲ್ ರಾಹುಲ್ (ವಿಕೆಟ್‌ಕೀಪರ್‌ / ನಾಯಕ), ಕ್ರಿಸ್ ಗೇಲ್, ದೀಪಕ್ ಹೂಡ, ನಿಕೋಲಸ್ ಪೂರನ್, ಪ್ರಭಸಿಮ್ರನ್ ಸಿಂಗ್, ಶಾರುಖ್ ಖಾನ್, ಕ್ರಿಸ್ ಜಾರ್ಡನ್, ಹರಪ್ರೀತ್ ಬ್ರಾರ್, ರವಿ ಬಿಷ್ಣೋಯ್, ಮೊಹಮ್ಮದ್ ಶಮಿ, ರೈಲಿ ಮೆರೆಡಿತ್.

Comments are closed.