ಮಂಗಳೂೠ/ ಸುರತ್ಕಲ್,ಮೇ.05 : ಕೋವಿಡ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಹಗಲು ರಾತ್ರಿ ಎನ್ನದೆ ದುಡಿಯುತ್ತಿರುವ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಆರೋಗ್ಯ ಇಲಾಖೆ ಕಾರ್ಯಕರ್ತರಿಗೆ ಮಾಜಿ ಶಾಸಕ ಮೊಯಿದೀನ್ ಬಾವಾ ಅವರು ಇಮ್ಯುನಿಟಿ ಬೂಸ್ಟರ್ ಕಿಟ್ ಗಳನ್ನು ಬುಧವಾರ ವಿತರಿಸಿದರು.
ತಮ್ಮ ಕ್ಷೇತ್ರ ವ್ಯಾಪ್ತಿಯ ಸುರತ್ಕಲ್ ಪೊಲೀಸ್ ಠಾಣೆ, ಸಂಚಾರಿ ಠಾಣೆ, ಕೂಳೂರು ಚೆಕ್ ಪೋಸ್ಟ್, ಕಾವೂರು ಪೊಲೀಸ್ ಠಾಣೆ, ಬಜ್ಪೆ ಪೊಲೀಸ್ ಠಾಣೆ, ಕೈಕಂಬ ಪೊಲೀಸ್ ಚೆಕ್ ಪೋಸ್ಟ್ ಗಳಿಗೆ ಭೇಟಿ ಕೊಟ್ಟು ಸಿಬ್ಬಂದಿಯ ಆರೋಗ್ಯ ವಿಚಾರಿಸಿದ ಮೊಯಿದೀನ್ ಬಾವಾ ಅವರು ಕಿಟ್ ವಿತರಿಸಿದರು.
ಈ ವೇಳೆ ಮಾತಾಡಿದ ಬಾವಾ ಅವರು, ಕೋವಿಡ್ ಎರಡನೇ ಅಲೆಯನ್ನು ಎದುರಿಸಲು ರಾಜ್ಯಾದ್ಯಂತ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಜನಸಾಮಾನ್ಯರು ಮನೆಯಲ್ಲಿದ್ದರೆ ಪೊಲೀಸರು, ಆರೋಗ್ಯ ಕಾರ್ಯಕರ್ತರು, ಪತ್ರಕರ್ತರು ಹೊರಗಡೆ ಇದ್ದು ಸೇವೆ ಸಲ್ಲಿಸುತ್ತಿದ್ದಾರೆ.
ಅವರು ಕೋವಿಡ್ ಸೋಂಕಿಗೆ ಸುಲಭವಾಗಿ ತುತ್ತಾಗುವ ಸಾಧ್ಯತೆಯಿದ್ದು ಅವರನ್ನು ರಕ್ಷಣೆ ಮಾಡಲು ಇಮ್ಯುನಿಟಿ ಬೂಸ್ಟರ್ ಗಳು ಸಹಕಾರಿ. ಈ ನಿಟ್ಟಿನಲ್ಲಿ ಈಗಾಗಲೇ ನೂರಾರು ಮಂದಿ ಸೇವಿಸಿ ಪರಿಣಾಮಕಾರಿ ಯಾದಂತಹ ಇಮ್ಯೂನೋ ಹೆಸರಿನ ಆಯುರ್ವೇದ ಕಷಾಯ ಹುಡಿಯನ್ನು ವಿತರಿಸಲಾಗುತ್ತಿದೆ. ಪ್ರಸ್ತುತ ಸನ್ನಿವೇಶದಲ್ಲಿ ಲಾಕ್ ಡೌನ್ ಅನಿವಾರ್ಯವಾಗಿದ್ದು ನಾವೆಲ್ಲರೂ ಸಹಕಾರ ನೀಡಬೇಕಿದೆ ಎಂದರು.
ಈ ವೇಳೆ ಕಾಂಗ್ರೆಸ್ ಮುಖಂಡರಾದ ಸದಾಶಿವ ಶೆಟ್ಟಿ, ರಾಜೇಶ್, ಬಸೀರ್ ಬೈಕಂಪಾಡಿ, ಹ್ಯಾರಿಸ್ ಬೈಕಂಪಾಡಿ ಮತ್ತಿತರರು ಉಪಸ್ಥಿತರಿದ್ದರು.
Comments are closed.