ಅಂತರಾಷ್ಟ್ರೀಯ

ಏಕಕಾಲದಲ್ಲಿ 9 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ !

Pinterest LinkedIn Tumblr

ಮಾಲಿ: ಸಾಮಾನ್ಯವಾಗಿ ತಾಯಂದಿರು ಅವಳಿ ಅಥವಾ ತ್ರಿವಳಿ ಶಿಶುಗಳಿಗೆ ಜನ್ಮ ನೀಡುವುದು ಸಾಮಾನ್ಯ. ವಿಚಿತ್ರ ಎಂದರೆ ಮಹಿಳೆಯೊಬ್ಬಳು ಮೂರು, ನಾಲ್ಕು ಅಲ್ಲ, ಒಟ್ಟಿಗೆ 9 ಶಿಶುಗಳಿಗೆ ಏಕಕಾಲದಲ್ಲಿ ಜನ್ಮ ನೀಡಿದ್ದಾಳೆ. ಈ ಘಟನೆ ಮಾಲಿಯಲ್ಲಿ ನಡೆದಿದೆ.

ಮಾಲಿ ದೇಶದ ಹಲಿಮಾ ಸಿಸ್ಸಿ (25) ಮಂಗಳವಾರ ಏಕ ಕಾಲದಲ್ಲಿ 9 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅಕೆಗೆ ಹೆರಿಗೆ ಮಾಡಿಸಲು ಇಬ್ಬರು ವೈದ್ಯರು ಭಾರಿ ಶ್ರಮಿಸಬೇಕಾಯಿತು..!. ಒಂದೇ ಹೆರಿಗೆಯಲ್ಲಿ ಒಂಬತ್ತು ಮಕ್ಕಳು ಜನಿಸಿರುವ ಸುದ್ದಿ ಆ ದೇಶದ ನಾಯಕರಿಗೂ ತಲುಪಿದೆ.

ಜನಿಸಿದ 9 ಮಕ್ಕಳಲ್ಲಿ ಐದು ಹೆಣ್ಣು ಹಾಗೂ ನಾಲ್ಕು ಗಂಡು ಶಿಶುಗಳಾಗಿವೆ. ತಾಯಿ ಹಾಗೂ ಒಂಬತ್ತು ಮಕ್ಕಳು ಕ್ಷೇಮವಾಗಿ, ಆರೋಗ್ಯವಾಗಿವೆ ಎಂದು ಆ ದೇಶದ ಆರೋಗ್ಯ ಸಚಿವ ಫಾಂಟಾ ಸಿಬಿ ಹೇಳಿದ್ದಾರೆ. ಸ್ಕ್ಯಾನಿಂಗ್‌ ಸಮಯದಲ್ಲಿ ಹೆಚ್ಚು ಸಂಖ್ಯೆಯ ಮಕ್ಕಳು ಜನಿಸುವ ಸಾಧ್ಯತೆಯಿದೆ ಎಂದು ವೈದ್ಯರು ಹೇಳಿದ್ದರಂತೆ.

ಅಂದಾಜಿನ ಪ್ರಕಾರ ಮಹಿಳೆ ಏಳು ಮಕ್ಕಳಿಗೆ ಜನ್ಮ ನೀಡಬಹುದು ಎಂದು ಭಾವಿಸಿದ್ದಳು. ಆದರೆ, ಒಮ್ಮೆಗೆ ಒಂಬತ್ತು ಮಕ್ಕಳಿಗೆ ಜನ್ಮ ನೀಡಿರುವುದಕ್ಕೆ ತಮಗೆ ಆಶ್ಚರ್ಯ, ಅಘಾತವಾಗಿದೆ ಎಂದು ಹಲೀಮಾ ಹೇಳಿದ್ದಾರೆ. ಸಿಸೇರಿಯನ್ ಮೂಲಕ ಹೆರಿಗೆ ಪ್ರಕ್ರಿಯೆ ನಡೆಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Comments are closed.