ಕರಾವಳಿ

ಲಾಕ್ಡೌನ್‌ನಿಂದ ಸಂಕಷ್ಟದಲ್ಲಿರುವವರಿಗೆ ಜ್ಯೋತಿಷ್ಯ ವಿದ್ವಾನ್ ದೈವಜ್ಞ ಶ್ರೀ ಕರಣ್ ಜ್ಯೋತಿಷಿಯವರಿಂದ ಅಹಾರ ಕಿಟ್ ವಿತರಣೆ

Pinterest LinkedIn Tumblr

ಮಂಗಳೂರು : ಶ್ರೀ ದೇವಿ ಪ್ರತ್ಯಂಗಿರಾ ವಿಪರೀತ ಮಹಾಭದ್ರಕಾಳ್ಯೈ ಅಮ್ಮನವರ ಕ್ಷೇತ್ರ ಮಾರ್ನಮಿಕಟ್ಟಾ ಮಂಗಳೂರು ಇಲ್ಲಿ ಜ್ಯೋತಿಷ್ಯ ವಿದ್ವಾನ್ ದೈವಜ್ಞ ಶ್ರೀ ಕರಣ್ ಜ್ಯೋತಿಷಿ ಯವರು ಲಾಕ್ಡೌನ್ ನಿಂದ ಸಂಕಷ್ಟದಲ್ಲಿರುವ ಹಲವು ಬಡ ಕುಟುಂಬಗಳಿಗೆ ಫುಡ್ ಕಿಟ್ ನ್ನು ( ಅಕ್ಕಿ ದವಸ ಧಾನ್ಯ, ತರಕಾರಿ ) ವಿತರಿಸಿರುತ್ತಾರೆ.

ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಕೋವಿಡ್ ಬಂದೋಬಸ್ತ್ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಸಿಬ್ಬಂದಿರವರಿಗೆ ಇತ್ತೀಚಿಗೆ ನಗರದ ಸಿಎಆರ್ ಕಛೇರಿ ಅಂಗಣದಲ್ಲಿ ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ಒದಗಿಸಿಕೊಟ್ಟಿರುತ್ತಾರೆ.

ಅದಲ್ಲದೇ ಕಳೆದ ವರ್ಷವೂ ಕೂಡ ಕೊರೊನ ಲಾಕ್ಡೌನ್ ಸಂದರ್ಬದಲ್ಲಿ ವೈಯಕ್ತಿಕವಾಗಿ ತನ್ನ ಸ್ವಂತ ಖರ್ಚಿನಲ್ಲಿ ಯಾವುದೇ ಡೋನೇಶನ್ ಸ್ವೀಕರಿಸದೆ ಕರೋನದಿಂದ ಕೆಲಸವಿಲ್ಲದೆ ,ಕಷ್ಟದಲ್ಲಿದ್ದವರಿಗೆ ಮಂಗಳೂರಿನ ಸುಮಾರು 120 ಕ್ಕೂ ಮಿಕ್ಕಿ ಕಡು ಬಡ ಕುಟುಂಬಗಳಿಗೆ ತಲಾ 1500 /- ಮೌಲ್ಯದ 10 ಕೆಜಿ ಅಕ್ಕಿ ಸಮೇತ 15 ಬಗೆಯ ಉಪಯುಕ್ತ ದಿನಸಿ ಸಾಮಗ್ರಿಗಳನ್ನು ಒಳಗೊಂಡ ಫುಡ್ ಕಿಟ್ ನ್ನು ನೀಡಿರುತ್ತಾರೆ.

ಹಾಗೂ ಅಗತ್ಯವಿರುವ ಲೆಕ್ಕದ ಕೆಲವು ಕುಟುಂಬಕ್ಕೆ ಧನಸಹಾಯ ಕೂಡ ಮಾಡಿರುತ್ತಾರೆ. ಹಾಗೂ ಲೋಕ ಕಲ್ಯಾಣಾರ್ಥವಾಗಿ ಶ್ರೀವಿಷ್ಣು ಸಹಸ್ರನಾಮಾರ್ಚನೆ, ಮ್ರತ್ಯುಂಜಯ ಜಪ ಇತ್ಯಾದಿ ನೆರೆವೇರಿಸಿರುತ್ತಾರೆ.

ಅಲ್ಲದೆ ಆಸ್ಪತ್ರೆಯಲ್ಲಿದ್ದ ಕೊರೊನ ಸಂತ್ರಸ್ತರಿಗೆ ತಿಂಡಿ ತಿನಿಸು ಹಾಗೂ ಹಣ್ಣು ಹಂಪಲುಗಳನ್ನು ವಿತರಿಸಿರುತ್ತಾರೆ. ಇದಲ್ಲದೇ ಈ ಹಿಂದೆಯೂ ಕೂಡ ಅನಾಥಾಶ್ರಮಕ್ಕೆ ಭೇಟಿ, ಅನ್ನದಾನ , ಬಡ ಮಕ್ಕಳಿಗೆ ದಿನನಿತ್ಯ ವಸ್ತುಗಳನ್ನು ವಿತರಿಸಿರುತ್ತಾರೆ. ಹಾಗೂ ಅನಾರೋಗ್ಯದಲ್ಲಿದ್ದಂತಹ ಬಡ ಜನರಿಗೆ ತನ್ನಿಂದಾದ ಧನಸಹಾಯವನ್ನು ಮಾಡಿರುತ್ತಾರೆ.ಇವರ ಈ ನಿಸ್ವಾರ್ಥ ಸೇವೆಯು ಪ್ರಶಂಸನೀಯವಾಗಿದೆ.
ಜೋತಿಷ್ಯ ಶಾಸ್ತ್ರದಲ್ಲಿ ಪಾರಾಂಗತರಾಗಿರುವ ಇವರು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

Comments are closed.