ಕರಾವಳಿ

1,250 ಕುಟುಂಬಕ್ಕೆ ಆಹಾರ ಕಿಟ್ ವಿತರಿಸಿದ ಉಡುಪಿ ಸ್ಪೀಡ್ ಡೆವಿಲ್ಸ್ ಯುವಕರ ತಂಡ

Pinterest LinkedIn Tumblr

ಉಡುಪಿ: ಲಾಕ್ ಡೌನ್ ನಲ್ಲಿ ಉದ್ಯೋಗವಿಲ್ಲದೇ ಸಂಕಷ್ಟ ದಲ್ಲಿದ್ದ ಬಡ ಕುಟುಂಬಗಳಿಗೆ ಉಡುಪಿಯ ಸ್ಪೀಡ್ ಡೆವಿಲ್ಸ್ ಯುವಕರ ತಂಡ ಅಹಾರ ಕಿಟ್ ನೀಡುವುದರ ಮೂಲಕ ಹಸಿವು ನೀಗಿಸುವಂತಹ ಕಾರ್ಯವನ್ನು ಮಾಡಿದ್ದಾರೆ. ಉಡುಪಿ ತಾಲೂಕಿನ ಸುಮಾರು 1,250 ಅರ್ಹ ಕುಟುಂಬಗಳನ್ನು ಗುರುತಿಸಿ ಉತ್ತಮ ಗುಣ ಮಟ್ಟದ ಆಹಾರ ಕಿಟ್ ನ್ನು ಮನೆ ಮನೆಗೆ ತೆರಳಿ ಮುಟ್ಟಿಸಲಾಗಿದೆ.

ಲಾಕ್ ಡೌನ್ ನಲ್ಲಿ ಬಡವರ ಸಂಕಷ್ಟಗಳನ್ನು ಕಂಡ ಯುವಕರ ತಂಡ ತಾವೇ ದುಡಿದ ಹಣವನ್ನು ಸಂಗ್ರಹಿಸಿ ಅರ್ಹ ಕುಟುಂಬಗಳಿಗೆ ಆಹಾರ ಕಿಟ್ ನೀಡುತ್ತಿದ್ದರು.ದಿನೇ ದಿನೇ ಆಹಾರದ ಕಿಟ್ ಗಳ ಬೇಡಿಕೆ ಜಾಸ್ತಿಯಾಗುತ್ತಿದ್ದಂತೆ ದಾನಿಗಳ ಸಹಾಯದ ಮೂಲಕ‌ ಕಿಟ್ ಗಳನ್ನು ಹಂಚಲಾಗಿದೆ. ಬಡ ಕುಟುಂಬಗಳಿಗೆ ಅಷ್ಟೇ ಅಲ್ಲದೇ ಉಡುಪಿ ಹಾಗೂ ಕಾರ್ಕಳ ಅಶ್ರಮಗಳಿಗೂ ಆಹಾರ ಧಾನ್ಯಗಳನ್ನು ಹಂಚಲಾಗಿದೆ.

ರೋವಿನ್ ವಿನೂತ್, ಸುಶಾನ್ ಡಿ , ಲತೇಶ್ ಶೆಟ್ಟಿ, ಅಶುತೋಷ್ ಶೆಟ್ಟಿ , ಶರಣ್ ಶೆಟ್ಟಿ, ಸುಖಿಲ್ ಪೂಜಾರಿ, ಜಾವೆದ್, ರಾಕೇಶ್ , ರಕ್ಷಾ ಸೋನ್ಸ್ , ಗುರುಚರಣ್ ಇಂದ್ರಾಳಿ, ಪೂರ್ಣಚಂದ್ರ , ಸ್ವಾತಿ ಲತೇಶ್ ಶೆಟ್ಟಿ, ನವ್ಯಾ ಶರಣ್ ಶೆಟ್ಟಿ , ನಿಶಾ ಡಿಸೋಜಾ ಮತ್ತಿತರರು ಕಿಟ್ ವಿತರಣೆಯಲ್ಲಿ ಇದ್ದರು.

Comments are closed.