ಕುಂದಾಪುರ: ಅಕ್ರಮ ಕಸಾಯಿಖಾನೆಯೊಂದಕ್ಕೆ ದಾಳಿ ನಡೆಸಿ ವಧೆಗಾಗಿಕಟ್ಟಿಹಾಕಿದ್ದ 23 ಜಾನುವಾರುಗಳನ್ನು ಕುಂದಾಪುರ ಗ್ರಾಮಾಂತರ ಠಾಣೆಯ ಪೊಲೀಸರು ರಕ್ಷಣೆ ಮಾಡಿದ ಘಟನೆ ಗುಲ್ವಾಡಿ ಕುದ್ರು ಎಂಬಲ್ಲಿ ಭಾನುವಾರ ನಡೆದಿದೆ.
ಅಕ್ರಮ ಗೋವಧಾ ಸ್ಥಾನಕ್ಕೆ ಸ್ಥಳೀಯರು, ಹಿಂದೂ ಸಂಘಟನೆ ಕಾರ್ಯಕರ್ತರು ಮತ್ತು ಕುಂದಾಪುರ ಗ್ರಾಮಾಂತರ ಠಾಣೆಯ ಪೊಲೀಸರು ದಾಳಿ ನಡೆಸಿದ್ದಾರೆ. ಗುಲ್ವಾಡಿ ಅಬೂಬಕ್ಕರ್ ಎಂಬಾತನ ಮನೆಗೆ ದಾಳಿ ಮಾಡಿದ ವೇಳೆ ಮನೆಯಲ್ಲಿ ಮಾಂಸಕ್ಕಾಗಿ ದನಗಳನ್ನು ಕೂಡಿ ಹಾಕಿರುವುದು ಕಂಡುಬಂದಿದ್ದು, ಪೊಲೀಸರು ಅವುಗಳನ್ನು ರಕ್ಷಿಸಿದ್ದಾರೆ. ದಾಳಿಯ ವೇಳೆ ಆರೋಪಿ ಅಬೂಬಕ್ಕರ್ ಪರಾರಿಯಾಗಿದ್ದಾರೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.