ಕರ್ನಾಟಕ

ವಿಶ್ವ ಪ್ರಸಿದ್ಧ ಜೋಗ ಜಲಪಾತ ವೀಕ್ಷಣೆಗೆ ಇಂದಿನಿಂದ ಮುಕ್ತ ಅವಕಾಶ: ಕೋವಿಡ್ ನಿಯಮ ಪಾಲನೆ ಕಡ್ಡಾಯ

Pinterest LinkedIn Tumblr

ಶಿವಮೊಗ್ಗ: ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ಕಳೆದ ಕೆಲ ತಿಂಗಳಿನಿಂದ ಶಿವಮೊಗ್ಗ ಜಿಲ್ಲೆಯ ವಿಶ್ವ ಪ್ರಸಿದ್ಧ ಜೋಗ ಜಲಪಾತಕ್ಕೆ ಸಾರ್ವಜನಿಕ ಪ್ರವೇಶಕ್ಕೆ ಅವಕಾಶವಿರಲಿಲ್ಲ. ಜೂನ್.28 ಸೋಮವಾರದಿಂದ ಮತ್ತೆ ಜೋಗ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಲಿದೆ.

(File Photo-2020)

ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಜಲಪಾತ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಕೊರೋನಾ ಸೋಂಕಿನ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ಪ್ರವಾಸಿಗರು ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಸ್ಯಾನಿಟೈಸರ್‌ ಬಳಸುವುದು ಕಡ್ಡಾಯವಾಗಿದೆ.

ಕಳೆದ ಒಂದು ವಾರದಿಂದ ಮಲೆನಾಡು ಪ್ರದೇಶಗಳಲ್ಲಿ ಸುರಿಯುತ್ತಿರುವ ಮುಂಗಾರು ಮಳೆಯಿಂದಾಗಿ ಶರಾವತಿ ನದಿಗೆ ನೀರು ಯಥೇಚ್ಛವಾಗಿ ಹರಿದುಬಂದಿದ್ದು ಜೋಗ ಜಲಪಾತದ ಸೊಬಗು ಹೆಚ್ಚಿಸಿದೆ.

ಲಾಕ್‌ಡೌನ್‌ ಕಾರಣದಿಂದ ಪ್ರವಾಸಿಗರಿಲ್ಲದೇ ಸ್ಥಳೀಯ ವ್ಯಾಪಾರ-ವಹಿವಾಟು, ಬಾಡಿಗೆ ವಾಹನದವರು, ಛಾಯಾಗ್ರಾಹಕರು, ಹೋಟೆಲ್ ಉದ್ಯಮಗಳು ನಿಂತಿತ್ತು. ಇದೀಗ ಪ್ರವಾಸಿಗರ ಭೇಟಿಗೆ ಅವಕಾಶ ಕಲ್ಪಿಸಲಾಗಿದ್ದು ಆರ್ಥಿಕ ವಹಿವಾಟಿಗೆ ಪೂರಕ ಅವಕಾಶ ಸಿಗಲಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.