ಕರಾವಳಿ

ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ 25 ಲಕ್ಷ ಮೌಲ್ಯದ ಪರಿಕರ ಕೊಡುಗೆ

Pinterest LinkedIn Tumblr

ಮಂಗಳೂರು: ತುಂಬೆಯ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ‘ವನ್ ಮೋರ್ ಬ್ರೆತ್’ ಯೋಜನೆಗೆ ಭಾನುವಾರ ಚಾಲನೆ ನೀಡಲಾಯಿತು.

41 ಕ್ಲಬ್ಸ್ ಆಫ್ ಇಂಡಿಯಾ ಮತ್ತು ರೌಂಡ್‍ಟೇಬಲ್ ಇಂಡಿಯಾ ಟ್ರಸ್ಟ್ ಸಹಯೋಗದಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿದೆ. ಈ ಯೋಜನೆಯಡಿ 25.84 ಲಕ್ಷ ರೂಪಾಯಿ ಮೌಲ್ಯದ 25 ಬೆಡ್, 25 ಟೇಬರ್, 2 ಕ್ರಾಷ್‍ಕಾರ್ಟ್, 2 ನೆಬ್ಯುಲರ್, 2 ಮಲ್ಟಿಪಾರಾ ಮಾನಿಟ್, 1 ಇನ್‍ಫ್ಯೂಶನ್ ಪಂತ್, 1 ಸಕ್ಷನ್ ಮೆಷಿನ್, 2 ಬಿಐಪಿ ಎಪಿಗಳು, 5 ಸಿಂಗಲ್ ಫ್ಲೋ ಆಮ್ಲಜನಕ ಸಾಂದ್ರಕ, 10 ಅವಳಿ ಹರಿವಿನ ಸಂಆದ್ರಕಗಳು, 25 ಐವಿ ಸ್ಟ್ಯಾಂಡ್, 25 ದಿಂಬು, 74 ಪಿಲ್ಲೊಕೇಸ್, 75 ಬೆಡ್‍ಶಿಟ್, 75 ಟವೆಲ್ ಮತ್ತು 25 ಕುರ್ಚಿಗಳನ್ನು ದೇಣಿಗೆಯಾಗಿ ನೀಡಲಾಯಿತು.

ಫಾದರ್ ಮುಲ್ಲರ್ ಚಾರಿಟಬಲ್ ಸಂಸ್ಥೆಯ ನಿರ್ದೇಶಕ ರೆವರೆಂಡ್ ಫಾದರ್ ರಿಚರ್ಡ್ ಅಲೋಶಿಯಸ್ ಕೊಯೆಲ್ಹೊ ಕಾರ್ಯಕ್ರಮ ಉದ್ಘಾಟಿಸಿದರು.

ಫಾದರ್ ಮುಲ್ಲರ್ ತುಂಬೆ ಆಸ್ಪತ್ರೆಯ ಆಡಳಿತಾಧಿಕಾರಿ ರೆವರೆಂಡ್ ಫಾದರ್ ಸಿಲ್ವೆಸ್ಟರ್ ವಿನ್ಸೆಂಟ್ ಲೋಬೊ, 41ಇಆರ್‍ಎಸ್ ಕ್ಲಬ್ 120 ಅಧ್ಯಕ್ಷ ಡೆನ್ಸಿಲ್ ಕ್ಯಾಸ್ಟಾಲಿನೊ, ಮಂಗಳೂರು ರೌಂಡ್‍ಟೇಬಲ್ 115 ಅಧ್ಯಕ್ಷ ವಿನಯ ಫೆರ್ನಾಂಡಿಸ್, ಮಂಗಳೂರು ಲೇಡಿಸ್ ಸರ್ಕಲ್ 82 ಅಧ್ಯಕ್ಷೆ ಚರಿಷ್ಮಾ ಡಿಸಿಲ್ವ ಮತ್ತಿತರರು ಉಪಸ್ಥಿತರಿದ್ದರು.

ಅಖಿಲ ಭಾರತ ಮಟ್ಟದಲ್ಲಿ ಆಸ್ಪತ್ರೆಗಳಿಗೆ 2000ಕ್ಕೂ ಹೆಚ್ಚು ಬೆಡ್‍ಗಳನ್ನು ಮತ್ತು ಸಂಬಂಧಿತ ಸಕಲಕರಣೆಗಳನ್ನು ನೀಡುವ ಮೂಲಕ ಆಸ್ಪತ್ರೆಗಳನ್ನು ಸುಸಜ್ಜಿತಗೊಳಿಸುವ ಯೋಜನೆಯ ಅಂಗವಾಗಿ ಮಂಗಳೂರು ಯೋಜನೆಯನ್ನು ಆರಂಭಿಸಲಾಗಿದೆ. ವನ್ ಮೋರ್ ಬ್ರೆತ್ ಯೋಜನೆಯಡಿ ಈಗಾಗಲೇ ಹುಬ್ಬಳ್ಳಿಯ ಕಿಮ್ಸ್‍ನಲ್ಲಿ 180 ಬೆಡ್ ವ್ಯವಸ್ಥೆ ಮತ್ತು ಕೊಲ್ಲಾಪುರದಲ್ಲಿ 50 ಬೆಡ್ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.

ಇದರ ಜತೆಗೆ 41 ಕ್ಲಬ್ಸ್ ಆಫ್ ಇಂಡಿಯಾ ಏರಿಯಾ 3 ಈಗಾಗಲೇ ಪುತ್ತೂರು, ಬೆಂಗಳೂರು, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ತುಮಕೂರು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬಳ್ಳಾರಿ ಮತ್ತು ಬೆಳಗಾಂನಲ್ಲಿ ಏರಿಯಾ 3 ಅಧ್ಯಕ್ಷ ಅಲೀಮ್ ನೇತೃತ್ವದಲ್ಲಿ 40 ಆಮ್ಲಜನಕ ಸಾಂದ್ರಕಗಳು, 9000 ಮಾಸ್ಕ್, ಹಲವು ಬಿಐಪಿಎಪಿ ಯಂತ್ರಗಳು, ಆಕ್ಸಿಮೀಟರ್ ಮತ್ತು ಥರ್ಮೋಮೀಟರ್‍ಗಳನ್ನು ದೇಣಿಗೆಯಾಗಿ ನೀಡಿದೆ.

ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತಾಧಿಕಾರಿ ರೆವರೆಂಡ್ ಫಾದರ್ ರುಡಾಲ್ಫ್ ರವಿ ಡೇಸಾ, ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯ ಉಪ ಆಡಳಿತಾಧಿಕಾರಿ ಫಾದರ್ ನೆಲ್ಸನ್ ಧೀರಜ್ ಪಯಾಸ್, ಫಾದರ್ ಮುಲ್ಲರ್ ಚಾರಿಟಬಲ್ ಇನ್‍ಸ್ಟಿಟ್ಯೂಷನ್‍ನ ಸರ್ ಜನೆತ್ ನೋ, ವೈದ್ಯಕೀಯ ಅಧೀಕ್ಷಕ ಡಾ.ಕಿರಣ್ ಶೆಟ್ಟಿ, ನೇತ್ರಶಾಸ್ತ್ರ ವಿಭಾಗದ ಸಹ ಪ್ರಧ್ಯಾಪಕ ಎಂಸಿ ಡಾ.ಸರಿತಾ ಲೋಬೊ ಮತ್ತಿತರರು ಭಾಗವಹಿಸಿದ್ದರು.

ದಂತವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಜೋಸಿ ಮೆಂಡೋನ್ಸಾ ವಂದಿಸಿದರು. ರೌಂಡ್‍ಟೇಬಲ್ ಮಾನವೀಯ ಚಟುವಟಿಕೆಗಳ ಬಗ್ಗೆ ರೋಯ್‍ಸ್ಟರ್ ಡಿಸೋಜಾ ವಿವರಿಸಿದರು.

Comments are closed.