ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆಯು ಇಂದು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ರಿಸಲ್ಟ್ ಅನ್ನು ಪ್ರಕಟಿಸಿದೆ. ದ್ವಿತೀಯ ಪಿಯು ವಿದ್ಯಾರ್ಥಿಗಳು ಇಲಾಖೆಯ ಅಫೀಶಿಯಲ್ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಫಲಿತಾಂಶ ಚೆಕ್ ಮಾಡಬಹುದು. ಅಥವಾ ಈ ಕೆಳಗೆ ನೀಡಲಾದ ಡೈರೆಕ್ಟ್ ಲಿಂಕ್ ಅನ್ನು ಕ್ಲಿಕ್ ಮಾಡಿ ಫಲಿತಾಂಶ ಚೆಕ್ ಮಾಡಬಹುದು. ಫಲಿತಾಂಶ ಚೆಕ್ ಮಾಡುವ ವಿಧಾನವನ್ನು ಈ ಕೆಳಗೆ ನೀಡಲಾಗಿದೆ.
Karnataka II PUC Result 2021: ಚೆಕ್ ಮಾಡುವುದು ಹೇಗೆ?
– ಪದವಿ ಪೂರ್ವ ಶಿಕ್ಷಣ ಇಲಾಖೆ ವೆಬ್ಸೈಟ್ http://pue.kar.nic.in/ ಅಥವಾ https://karresults.nic.in/ ಗೆ ಭೇಟಿ ನೀಡಿ.
– ದ್ವಿತೀಯ ಪಿಯು ಫಲಿತಾಂಶಕ್ಕೆ ಸಂಬಂಧಿಸಿದ ಲಿಂಕ್ ಕ್ಲಿಕ್ ಮಾಡಿ.
– ನಂತರ ಓಪನ್ ಆದ ಪೇಜ್ನಲ್ಲಿ ಪಿಯುಸಿ ರಿಜಿಸ್ಟ್ರೇಷನ್ ನಂಬರ್ ಮತ್ತು ಇತರೆ ಅಗತ್ಯ ಮಾಹಿತಿ ಟೈಪಿಸಿ ಎಂಟರ್ ಮಾಡಿ.
– ರಿಸಲ್ಟ್ ಪ್ರದರ್ಶಿತವಾಗುತ್ತದೆ. ಚೆಕ್ ಮಾಡಿಕೊಳ್ಳಿ
– ಮುಂದಿನ ರೆಫರೆನ್ಸ್ಗಾಗಿ ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.
ದ್ವಿತೀಯ ಪಿಯು ವಿದ್ಯಾರ್ಥಿಗಳ ಫಲಿತಾಂಶ ಅವರ ರಿಜಿಸ್ಟರ್ ಮೊಬೈಲ್ ಸಂಖ್ಯೆಗೆ ಬರಲಿದೆ. ವಿದ್ಯಾರ್ಥಿಗಳು ಚೆಕ್ ಮಾಡಬಹುದು. ಈ ಫಲಿತಾಂಶದಿಂದ ವಿದ್ಯಾರ್ಥಿಗಳು ಅಸಮಾಧಾನಗೊಂಡಲ್ಲಿ ಆಗಸ್ಟ್ನಲ್ಲಿ ನಡೆಸುವ ವಾರ್ಷಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಹಾಜರಾಗಿ ಪರೀಕ್ಷೆ ಬರೆಯಬಹುದು. ಹೊಸ ವಿದ್ಯಾರ್ಥಿಗಳು ಮತ್ತು ಪುನರಾವರ್ತಿತ ವಿದ್ಯಾರ್ಥಿಗಳು ಇಬ್ಬರು ಸಹ ಫಲಿತಾಂಶವನ್ನು ತಿರಸ್ಕರ ಮಾಡಬಹುದು.
ವಿದ್ಯಾರ್ಥಿಗಳು ಮತ್ತೊಮ್ಮೆ ಪರೀಕ್ಷೆ ಬರೆಯಲು ರಿಜಿಸ್ಟ್ರೇಷನ್ ಪಡೆಯಲು ಜುಲೈ 30 ಕೊನೆ ದಿನ. ಪ್ರಸ್ತುತದ ಫಲಿತಾಂಶ ಅಸಮಾಧಾನಗೊಂಡ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಆಗಸ್ಟ್ 19 ರಿಂದ ಪರೀಕ್ಷೆ ಆರಂಭವಾಗಲಿದೆ.
ಈ ಬಾರಿ ದ್ವಿತೀಯ ಪಿಯು ಫಲಿತಾಂಶವನ್ನು ವಿದ್ಯಾರ್ಥಿಗಳಿಗೆ ಶ್ರೇಣಿ ಮಾದರಿಯಲ್ಲಿ ನೀಡಲಾಗಿದೆ. ಹೊಸ ವಿದ್ಯಾರ್ಥಿಗಳ ಪೈಕಿ 5,90, 153 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 3,53,538 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 1,34,846 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ, 6181 ವಿದ್ಯಾರ್ಥಿಗಳು ಜಸ್ಟ್ ಪಾಸ್ ಆಗಿದ್ದಾರೆ.
ಪುನರಾವರ್ತಿತ ವಿದ್ಯಾರ್ಥಿಗಳ ಪೈಕಿ 47 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 1540 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 12209 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ, 62548 ವಿದ್ಯಾರ್ಥಿಗಳು ಜಸ್ಟ್ ಪಾಸ್ ಆಗಿದ್ದಾರೆ.
ದ್ವಿತೀಯ ಪಿಯು ಒಟ್ಟು ವಿದ್ಯಾರ್ಥಿಗಳ ಪೈಕಿ ಬಾಲಕರು 35543 ಉನ್ನತ ಶ್ರೇಣಿಯಲ್ಲಿ, 1,63,107 ಪ್ರಥಮ ಶ್ರೇಣಿಯಲ್ಲಿ, 89,382 ದ್ವಿತೀಯ ಶ್ರೇಣಿಯಲ್ಲಿ, 47,100 ಜಸ್ಟ್ ಪಾಸ್ ಆಗಿದ್ದಾರೆ. ಬಾಲಕಿಯರ ಪೈಕಿ 60,085 ಉನ್ನತ ಶ್ರೇಣಿಯಲ್ಲಿ, 1,91,971 ಪ್ರಥಮ ಶ್ರೇಣಿಯಲ್ಲಿ, 57,673 ದ್ವಿತೀಯ ಶ್ರೇಣಿಯಲ್ಲಿ, 21629 ಜಸ್ಟ್ ಪಾಸ್ ಆಗಿದ್ದಾರೆ.
ಪಿಯುಸಿ ರಿಸಲ್ಟ್ ಚೆಕ್ ಮಾಡಲು ರಿಜಿಸ್ಟ್ರೇಷನ್ ನಂಬರ್ ಪಡೆಯುವುದು ಹೇಗೆ?
– ವೆಬ್ಸೈಟ್ http://pue.kar.nic.in/ ಗೆ ಅಥವಾ ‘Know my Registration Number’ ಎಂಬಲ್ಲಿ ಕ್ಲಿಕ್ ಮಾಡಿ.
– ಅಥವಾ ಡೈರೆಕ್ಟ್ ಲಿಂಕ್ https://dpue-exam.karnataka.gov.in/iipu2021_registrationnumber/regnumber ಗೆ ಭೇಟಿ ನೀಡಿ.
– ಓಪನ್ ಆದ ಪೇಜ್ನಲ್ಲಿ ವಿದ್ಯಾರ್ಥಿ ಅಧ್ಯಯನ ಮಾಡುತ್ತಿರುವ ಜಿಲ್ಲೆ, ಕಾಲೇಜನ್ನು ಆಯ್ಕೆ ಮಾಡಬೇಕು.
– ನಂತರ ವಿದ್ಯಾರ್ಥಿ ಹೆಸರು, ನೋಂದಣಿ ಸಂಖ್ಯೆ, ತಂದೆ ಹೆಸರು, ತಾಯಿ ಹೆಸರು, ವಿದ್ಯಾರ್ಥಿ ಸಂಖ್ಯೆ, ವಿದ್ಯಾರ್ಥಿಯ ವಿಧ ಎಲ್ಲ ಮಾಹಿತಿಗಳು ಲಭ್ಯವಾಗುತ್ತವೆ.
– ಈ ವಿಧಾನದ ಮೂಲಕ ಮೊದಲು ರಿಜಿಸ್ಟ್ರೇಷನ್ (ನೋಂದಣಿ) ಸಂಖ್ಯೆ ತಿಳಿದುಕೊಳ್ಳಬೇಕು.
ಕೋವಿಡ್ ಎರಡನೇ ಅಲೆ ಕಾರಣ, ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಪರೀಕ್ಷೆ ರದ್ದುಗೊಳಿಸಿ, ಪರ್ಯಾಯ ಮೌಲ್ಯಮಾಪನ ಮಾನದಂಡಗಳ ಆಧಾರದಲ್ಲಿ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ ಎಂದು ಶಿಕ್ಷಣ ಸಚಿವರು ಹೇಳಿದ್ದರು. ಪರ್ಯಾಯ ಮೌಲ್ಯಮಾಪನ ಮಾನದಂಡಗಳಿಗೆ 12 ತಜ್ಞರ ಸಮಿತಿಯನ್ನು ರಚಿಸಿ, ಅವರ ಸಲಹೆ ಆಧಾರದಲ್ಲಿ ಫಲಿತಾಂಶ ಸಿದ್ಧತೆ ಮಾಡಲಾಗಿದೆ.
ವಿದ್ಯಾರ್ಥಿಗಳ 10ನೇ ತರಗತಿ ಅಂಕಗಳು, ಪಿಯುಸಿ ಅಂಕಗಳು, ದ್ವಿತೀಯ ಪಿಯು ಇಂಟರ್ನಲ್ ಅಸೆಸ್ಮೆಂಟ್ ಅಂಕಗಳ ಆಧಾರದಲ್ಲಿ ಫಲಿತಾಂಶ ನೀಡಲಾಗಿದೆ.
Comments are closed.