ಕರಾವಳಿ

ಉಡುಪಿ: ಆಟೋ ರಿಕ್ಷಾದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರ ಬಂಧನ

Pinterest LinkedIn Tumblr

ಉಡುಪಿ: ಇಲ್ಲಿನ ಉದ್ಯಾವರ ಗ್ರಾಮದ ಗುಡ್ಡೆಯಂಗಡಿ ರಾಷ್ಟ್ರೀಯ ಹೆದ್ದಾರಿ ಬಳಿ ಆಟೋ ರಿಕ್ಷಾದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಉಡುಪಿ ಸೆನ್‌‌‌‌‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

 

ಸೋಮೇಶ್ವರ ಗ್ರಾಮದ ಕುಂಪಲ ನಿವಾಸಿ ಕಾರ್ತಿಕ್‌ (24) ಹಾಗೂ ಮತ್ತೋರ್ವ ಆರೋಪಿ ಬಂಧಿತರು.

ಇಬ್ಬರು ಆರೋಪಿಗಳು ಜುಲೈ 31 ರ ರಾತ್ರಿ 7.45 ರ ಸುಮಾರಿಗೆ ಉದ್ಯಾವರದ ಗುಡ್ಡೆಯಂಗಡಿ ರಾಷ್ಟ್ರೀಯ ಹೆದ್ದಾರಿ ಬಳಿಯ ಬಬ್ಬುಸ್ವಾಮಿ ದೈವಸ್ಥಾನದ ಎದುರು ಸಾರ್ವಜನಿಕ ಸ್ಥಳದಲ್ಲಿ ಆಟೋ ರಿಕ್ಷಾದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸೆನ್‌‌‌ ಅಪರಾಧ ಪೊಲೀಸ್‌ ಠಾಣಾ ನಿರೀಕ್ಷಕ ಮಂಜುನಾಥ್‌‌‌ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಿಂದ 1.226 ಕಿಲೋ ಗಾಂಜಾ, ಎರಡು ಮೊಬೈಲ್ ಫೋನ್ ಹಾಗೂ ಆಟೋ ರಿಕ್ಷಾ ಸೇರಿದಂತೆ ಒಟ್ಟು 1.35 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸೆನ್‌‌‌‌ ಪೊಲೀಸ್‌ ಠಾಣಾ ಪಿಎಸ್‌ಐ ಲಕ್ಷ್ಮಣ, ಐಎಸ್‌‌‌ಐ ಕೇಶವ ಗೌ ಹಾಗೂ ಸಿಬ್ಬಂದಿಗಳಾದ ಕೃಷ್ಣಪ್ರಸಾದ್‌‌, ಪ್ರವೀಣ, ರಾಘವೇಂದ್ರ ಉಪ್ಪೂರು ಹಾಗೂ ಪ್ರಸನ್ನ ಸಾಲಿಯಾನ್‌‌ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

 

Comments are closed.