ಮನೋರಂಜನೆ

ಫಿನಾಲೆ ಹತ್ತಿರವಾಗುತ್ತಿದ್ದಂತೆ ಬಿಗ್ ಬಾಸ್ ಮನೆಯಿಂದ ಹೊರಬಂದ ಶಮಂತ್ ! ಬಿಗ್ ಬಾಸ್​’ನಲ್ಲಿ ಈ ಬಾರಿ ಯಾರು ಗೆಲ್ಲುತ್ತಾರೆ…?

Pinterest LinkedIn Tumblr

ಬಿಗ್ ಬಾಸ್​ ಸೀ ಸನ್​ 8ರಲ್ಲಿ 113 ದಿನ ಇದ್ದು ಸುದೀಪ್ ಅವರೊಂದಿಗೆ ಸೂಪರ್ ಸಂಡೆ ವಿಥ್​ ಸುದೀಪ ಸಂಚಿಕೆಯಲ್ಲಿ ಭಾಗಿಯಾಗಿರುವ ಏಳು ಮಂದಿಯಲ್ಲಿ ಇಂದು ಒಬ್ಬ ಸ್ಪರ್ಧಿ ಮನೆಯಿಂದ ಹೊರಗೆ ಬಂದಿದ್ದಾರೆ. ಬಿಗ್ ಬಾಸ್​ ಮನೆಯಲ್ಲಿ ಫಿನಾಲೆ ಕನಸು ಕಂಡ ಸ್ಪರ್ಧಿಗಳಲ್ಲಿ ಸದ್ಯ ಉಳಿದಿರುವ 7 ಮಂದಿ. ಇವರಲ್ಲಿ ಒಬ್ಬರ ಜರ್ನಿ ಫಿನಾಲೆ ವಾರಕ್ಕೆ ಕಾಲಿಡುವ ಮುನ್ನವೇ ಮುಗಿದೆ. ಫಿನಾಲೆಗೆ ಇನ್ನು ಒಂದೇ ಒಂದು ವಾರ ಬಾಕಿ ಇದೆ. ಈಗಾಗಲೇ ಮನೆಯಲ್ಲಿ ಸಿಕ್ಕಾಪಟ್ಟೆ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸ್ಪರ್ಧಿಗಳು ಈ ಮನೆಯಲ್ಲಿ ಕಳೆಯುತ್ತಿರುವ ಪ್ರತಿಕ್ಷಣವೂ ಮುಂದೇನಾಗಲಿದೆ ಅಂತ ಆತಂಕದಲ್ಲೇ ಕಳೆಯುತ್ತಿದ್ದಾರೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿರುವಂತೆ ಬಿಗ್ ಬಾಸ್​ ಮನೆಯಲ್ಲಿ ಸ್ಪರ್ಧಿಗಳು ಫಿನಾಲೆಗಾಗಿ ಕಾಯುತ್ತಿದ್ದಾರೆ.

ಸೂಪರ್ ಸಂಡೆ ವಿಥ್ ಸುದೀಪ್ ಸಂಚಿಕೆಯಲ್ಲಿ ಶುಭಾ ಪೂಂಜಾ ಅವರನ್ನು ಮನೆಗೆ ಕಳುಹಿಸಿಕೊಟ್ಟ ನಂತರ ಮನೆಯಲ್ಲಿರುವ ಸ್ಪರ್ಧಿಗಳ ಜತೆ ಆ ವಾರದಲ್ಲಿ ನಡೆದ ಕೆಲವು ತಮಾಷೆ ಸಂಗತಿಗಳನ್ನು ಕೆದಕಿ ಮನೆಯಲ್ಲಿ ನಗುವಿನ ಹೊಳೆ ಹರಿಸಿದರು ಕಿಚ್ಚ. ಎಲ್ಲ ಮುಗಿದು ಕಡೆಯದಾಗಿ ಎಲಿಮಿನೇಷನ್​ ಪ್ರಕ್ರಿಯೆ ಆರಂಭವಾಯಿತು.

ಎಲಿಮಿನೇಷನ್​ ಪ್ರಕ್ರಿಯೆಯಲ್ಲಿ ಮೊದಲಿಗೆ ವೈಷ್ಣವಿ ಗೌಡ ಸೇಫ್​ ಆದರೆ, ನಂತರ ಮಂಜು ಪಾವಗಡ, ಅರವಿಂದ್ ಕೆ.ಪಿ, ಪ್ರಶಾಂತ್ ಸಂಬರಗಿ ಎಲಿಮಿನೇಷನ್​ನಿಂದ ಪಾರಾದರು. ಪ್ರಶಾಂತ್ ಸಂಬರಗಿ ಸೇಫ್ ಎಂದು ಪ್ರಕಟಿಸುವ ಮೊದಲು ಮನೆಯಲ್ಲಿದ್ದ ಸ್ಪರ್ಧಿಗಳಿಗೆ ಯಾರು ಈ ವಾರ ಮನೆಯಿಂದ ಎಲಿಮಿನೇಟ್ ಆಗಲಿದ್ದಾರೆ ಎಂದು ಕೇಳಲಾಗಿತ್ತು. ಅದಕ್ಕೆ ಸಿಕ್ಕ ಉತ್ತರ ಪ್ರಶಾಂತ್ ಸಂಬರಗಿ ಅನ್ನೋದು. ಆದರೆ ಈ ಸಲವೂ ಪ್ರಶಾಂತ್ ಅವರು ಹೆಚ್ಚಿನ ಮತಗಳನ್ನು ಪಡೆದು ಬಚಾವ್ ಆಗಿದ್ದಾರೆ. ಕೊನೆಯಲ್ಲಿ ದಿವ್ಯಾ ಸುರೇಶ್​ ಹಾಗೂ ಬ್ರೋ ಗೌಡ ಅವರಲ್ಲಿ ಕೊನೆಗೆ ಕಡಿಮೆ ಮತಗಳನ್ನು ಪಡೆಯುವ ಮೂಲಕ ಎಲಿಮಿನೇಟ್ ಆಗಿದ್ದಾರೆ.

ಶಮಂತ್ ಅವರಿಗೆ ಇನ್ನೂ ಮನೆಯಿಂದ ಹೊರ ಹೋಗುತ್ತಿದ್ದೇನೆ ಅಂತ ನಂಬಲು ಸಾಧ್ಯವೇ ಆಗಲಿಲ್ಲ. ಆದರೂ ಇಷ್ಟು ದಿನ ಈ ಮನೆಯಲ್ಲಿರುವ ಅವಕಾಶ ಸಿಕ್ಕಿದ್ದಕ್ಕೆ ತಾನು ಚಿರಋಣಿ ಎನ್ನುತ್ತಾ ಮನೆಯಿಂದ ಹೊರ ಬಂದಿದ್ದಾರೆ. ಇನ್ನು ಶಮಂತ್ ಅವರು ಸೀಸನ್ 8ರ ಮೊದಲ ಇನ್ನಿಂಗ್ಸ್​ನಲ್ಲಿ 42ನೇ ದಿನಕ್ಕೆ ಹೊರಗೆ ಬರಬೇಕಿತ್ತು. ಆದರೆ ವೈಲ್ಡ್​ ಕಾರ್ಡ್​ ಮೂಲಕ ಎಂಟ್ರಿ ಪಡೆದಿದ್ದ ವೈಜಯಂತಿ ಅವರು ಮನೆಯಿಂದ ಹೊರ ಹೋಗುವ ನಿರ್ಧಾರ ತೆಗೆದುಕೊಂಡ ಕಾರಣಕ್ಕೆ ಶಮಂತ್ ಅವರಿಗೆ ಜೀವದಾನ ಸಿಕ್ಕಿತ್ತು.

ಮಂಜು ಪಾವಗಡ ಅವರ ಜತೆ ಶಮಂತ್ ಅವರಿಗೆ ಸರಿಯಾಗಿ ಸ್ನೇಹ ಬೆಳೆಯಲೇ ಇಲ್ಲ. ಮಾತನಾಡಿಸಲು ಹೋದರೂ ಮಂಜು ಬೆರೆಯಲಿಲ್ಲ ಅಂತ ಶಮಂತ್ ಬೇಸರ ವ್ಯಕ್ತಪಡಿಸಿದ್ದಾರೆ.

ಮಂಜು ಪಾವಗಡ ಅವರಿಗೆ ಸಿಕ್ಕಿದೆ 8ನೇ ಸೀಸನ್​ನ ಕೊನೆಯ ಕಿಚ್ಚನ ಚಪ್ಪಾಳೆ
ಮಂಜು ಪಾವಗಡ ಅವರಿಗೆ ಈ ಸೀಸನ್​ನ ಕೊನೆಯ ಕಿಚ್ಚನ ಚಪ್ಪಾಳೆ ಸಿಕ್ಕಿದೆ. ಟಾಸ್ಕ್​, ಮಂಜು ಅವರ ವರ್ತನೆ, ಇಡೀ ವಾರ ಅವರ ಪ್ರದರ್ಶನದ ಆಧಾರದ ಮೇಲೆ ಮಂಜು ಅವರಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ.

ಶಮಂತ್ ಗೌಡ ಮನೆಯಿಂದ ಎಲಿಮಿನೇಟ್ ಆದ ನಂತರ ಬಿಗ್ ಬಾಸ್​ ಮನೆಯಲ್ಲಿ ಈಗ ಉಳಿದಿರುವುದು ಆರು ಮಂದಿ. ದಿವ್ಯಾ ಸುರೇಶ್​, ಪ್ರಶಾಂತ್ ಸಂಬರಗಿ, ಮಂಜು ಪಾವಗಡ, ವೈಷ್ಣವಿ ಗೌಡ, ದಿವ್ಯಾ ಉರುಡುಗ ಹಾಗೂ ಕೆ ಪಿ ಅರವಿಂದ್​ ಅವರು ಫಿನಾಲೆ ವಾರದಲ್ಲಿ ನಾಮಿನೇಟ್ ಆಗಿದ್ದಾರೆ. ಮುಂದಿನ ವಾರಾಂತ್ಯದ ವೇಳೆಗೆ ಮತ್ತೊಬ್ಬರು ಸ್ಪರ್ಧಿ ಮನೆಯಿಂದ ಹೊರ ನಡೆಯಲಿದ್ದಾರೆ. ಈ ಎಲಿಮಿನೇಷನ್​ ವಾರದಲ್ಲಿ ಯಾವಾಗ ಬೇಕಾದರೂ ಆಗಬಹುದು ಎಂದು ಸುದೀಪ್ ಅವರು ಸುಳಿವು ನೀಡಿದ್ದಾರೆ.

Comments are closed.