ಕುಂದಾಪುರ: ಹಿಂದು ಜಾಗರಣ ವೇದಿಕೆ ಕೋಟೇಶ್ವರ ವಲಯ ಇದರ ವತಿಯಿಂದ ನಡೆದ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮ ಸೋಮವಾರ ಅಸೋಡು ಕಾಮಧೇನು ಗೋಶಾಲೆಯಲ್ಲಿ ನಡೆಯಿತು.
ನಿವೃತ್ತ ಸೈನಿಕ ಕರ್ನಲ್ ಕೃಷ್ಣ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿಂದು ಜಾಗರಣ ವೇದಿಕೆ ಉಡುಪಿ ಜಿಲ್ಲೆ ಉಪಾಧ್ಯಕ್ಷ ಶ್ರೀಕಾಂತ್ ಶೆಟ್ಟಿ ಕಾರ್ಕಳ ಪ್ರಮುಖ ಭಾಷಣ ಮಾಡಿದರು.
ಮುಖ್ಯ ಅತಿಥಿಯಾಗಿ ಹೆಲ್ಪಿಂಗ್ ಹ್ಯಾಂಡ್ ಸಂಸ್ಥೆಯ ಪ್ರದೀಪ್ ಮೊಗವೀರ, ಕುಂದಾಪುರ ಸಂಘ ಸಂಚಾಲಕ ಗುರುರಾಜ ಬಿ. ಎಂ, ಹಿಂ.ಜಾ.ವೇ ಜಿಲ್ಲಾ ಸಂಪರ್ಕ ಪ್ರಮುಖ್ ಚಂದ್ರ ಶಿರಿಯಾರ, ತಾಲೂಕು ಕಾರ್ಯದರ್ಶಿ ಕಿರಣ್ ಕೋಟೇಶ್ವರ, ವಲಯ ಸಹಕಾರ್ಯದರ್ಶಿ, ಪ್ರಮುಖರಾದ ಅರವಿಂದ ಕೋಟೇಶ್ವರ, ಶಂಕರ್ ಅಂಕದಕಟ್ಟೆ ಇದ್ದರು.
ಸುರೇಂದ್ರ ಸಂಗಮ್ ಕಾರ್ಯಕ್ರಮ ನಿರೂಪಿಸಿದರು. ಅಭಿಷೇಕ್ ಸ್ವಾಗತಿಸಿ, ಸುಶನ್ ಪ್ರತಿಜ್ಞೆ ನೆರವೇರಿಸಿ, ಶಂಕರ ಅಂಕದಕಟ್ಟೆ ವಂದೇ ಮಾತರಂ ಹಾಡಿದರು. ಪುನೀತ್ ಹೊದ್ರಳ್ಳಿ ವಂದಿಸಿದರು.
Comments are closed.