ಚಿಕ್ಕಬಳ್ಳಾಪುರ: 1988ರಲ್ಲಿ ನಾನು ಸತ್ಯಸಾಯಿ ಬಾಬಾರನ್ನು ಭೇಟಿಯಾಗಿದ್ದೆ. ಅದೇ ವರ್ಷ ಸತ್ಯಸಾಯಿ ಬಾಬಾರ ಪುಸ್ತಕ ಓದಿದ ನಂತರ ಮಾಂಸಾಹಾರವನ್ನ ತ್ಯಜಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿ ಸತ್ಯ ಸಾಯಿ ಆಶ್ರಮದಲ್ಲಿ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಅವರು, ನೋವನ್ನು ಕಡಿಮೆ ಮಾಡುವ ಶಕ್ತಿ ವೈದ್ಯರಿಗೆ ಇದೆ. ಒಳಮನಸ್ಸಿನಿಂದ ಸೇವಾ ಮನೋಭಾವ ಬರಬೇಕು ಎಂದು ಸಲಹೆ ನೀಡಿದರು.
ನಾನು 1998 ರಲ್ಲಿ ವೈಟ್ ಫೀಲ್ಡ್ ನಲ್ಲಿ ಸತ್ಯಸಾಯಿ ದರ್ಶನ ಪಡಿದಿದ್ದೆ. ಆಗ ಭಕ್ತರೊಬ್ಬರು ಎರಡು ಗಂಟೆಗಳ ಕಾಲ ಪುಸ್ತಕ ಒದುತ್ತಿದ್ದರು. ನಾನು ಸಹ ಆ ಪುಸ್ತಕ ಒದಿದೆ. ಅದರಲ್ಲಿ ಮಾಂಸಾಹಾರ , ಸಸ್ಯಾಹಾರ ಹಾಗೂ ವೈಜ್ಞಾನಿಕತೆ, ಅಧ್ಯಾತ್ಮಿಕತೆ ಬರೆಯಲಾಗಿತ್ತು. ಆ ಪುಸ್ತಕವನ್ನು ಓದಿ, ಆಗಲೇ ನಾನು ಮಾಂಸಾಹಾರ ತ್ಯಜಿಸಿದೆ. ಅದರಲ್ಲಿ ಬಾಬಾರ ಸಂದೇಶವಿತ್ತು. ಹೀಗಾಗಿ ನಾನು ನಾನ್ ವೆಜ್ ಬಿಟ್ಟೆ ಎಂದು ತಿಳಿಸಿದರು.
ಈ ಮೂಲಕ ತಾನು ಸಸ್ಯಹಾರಿ ಎಂಬುದನ್ನು ಸಿಎಂ ಹೇಳಿಕೊಂಡಿದ್ದಾರೆ.
Comments are closed.