ಕರ್ನಾಟಕ

ಮೈಸೂರು ಗ್ಯಾಂಗ್ ರೇಪ್ ‌ಕೇಸಿನ ಐವರು ಆರೋಪಿಗಳು 10 ದಿನ‌ ಪೊಲೀಸ್ ಕಸ್ಟಡಿಗೆ..!

Pinterest LinkedIn Tumblr

ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟದ ಬಳಿಯಲ್ಲಿ ನಡೆದ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಪ್ರಕರಣದ ಐವರು ಆರೋಪಿಗಳನ್ನು ಶನಿವಾರ ಬಂಧಿಸಿದ್ದು ಅವರನ್ನು ರಾತ್ರಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಆರೋಪಿಗಳಿಂದ ಹೆಚ್ಚಿನ ವಿಚಾರಣೆ ಬಾಕಿಯಿದ್ದು ಅವರನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಪೊಲೀಸರು‌ ಮನವಿ ಮಾಡಿದ್ದು ಈ ಬಗ್ಗೆ ಪ್ರಾಸಿಕ್ಯೂಶನ್ ನ್ಯಾಯಾಧೀಶರ ಎದುರು ಮನವಿ‌ ಮಾಡಿದರು. ವಿಚಾರಣೆ ಆಲಿಸಿದ ಮೈಸೂರಿನ ಮೂರನೇ ಜೆ.ಎಂ.ಎಫ್.ಸಿ‌ ನ್ಯಾಯಾಲಯದ ನ್ಯಾಯಾಧೀಶರು ಬಂಧಿತ 5 ಮಂದಿ‌ ಆರೋಪಿಗಳಿಗೆ 10 ದಿನ ಪೊಲೀಸ್ ಕಸ್ಟಡಿ ವಿಧಿಸಿ ಆದೇಶ ಮಾಡಿದ್ದಾರೆ.

ಕಸ್ಟಡಿಗೆ ಪಡೆದ ಪೊಲೀಸರು ಆರೋಪಿಗಳನ್ನು ಇನ್ನಷ್ಟು ತನಿಖೆಗೊಳಪಡಿಸಲಿದ್ದು ಕೃತ್ಯದಲ್ಲಿ ಇನ್ನು ಯಾರಾದರೂ ಭಾಗಿಯಾಗಿದ್ದಾರೆಯೇ‌ ಅನ್ನುವ ನಿಟ್ಟಿನಲ್ಲಿ ವಿಚಾರಣೆ ನಡೆಸಲಿದ್ದಾರೆ.

Comments are closed.