ಕರ್ನಾಟಕ

ಮೈಸೂರು ಗ್ಯಾಂಗ್ ರೇಪ್ ಪ್ರಕರಣ ಭೇದಿಸಿದ ಪೊಲೀಸರಿಗೆ 1 ಲಕ್ಷ ರೂ. ಬಹುಮಾನ ನೀಡಿದ ನಟ ಜಗ್ಗೇಶ್

Pinterest LinkedIn Tumblr

ಬೆಂಗಳೂರು: ಮೈಸೂರು ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಕರ್ನಾಟಕ ರಾಜ್ಯ ಪೊಲೀಸರಿಗೆ ನಟ ಜಗ್ಗೇಶ್ ಅಭಿನಂದನೆ ತಿಳಿಸಿದ್ದಾರೆ. ಅಲ್ಲದೇ ಈ ಪ್ರಕರಣ ಬೇಧಿಸಿದ ಪೊಲೀಸ್​ ಸಿಬ್ಬಂದಿಗಳಿಗೆ ಒಂದು ಲಕ್ಷ ರೂ ಬಹುಮಾನ ನೀಡಿದ್ದಾರೆ.

ಕೆ.ಕೆ ಗೆಸ್ಟ್​ ಹೌಸ್​ನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಭೇಟಿಯಾದ ನಟ ಜಗ್ಗೇಶ್​ ಮತ್ತು ಅವರ ಪತ್ನಿ ಪರಿಮಳ ಜಗ್ಗೇಶ್​ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಒಂದು ಲಕ್ಷ ರೂ ಮೌಲ್ಯದ ಚೆಕ್​ ನೀಡಿದರು.

ಈ ವೇಳೆ ಮಾತನಾಡಿದ ಅವರು, ಅಮಾಯಕ ಮಹಿಳೆ ಮೇಲೆ ದುಷ್ಕೃತ್ಯ ನಡೆಸಿದ ದುರುಳರನ್ನು ತನಿಖೆ ನಡೆಸಿ ಬಂಧಿಸಿದ್ದಾರೆ. ಪೊಲೀಸ್ ಸಿಬ್ಬಂದಿಗಳ ದಕ್ಷತೆಗೆ ಮೆಚ್ಚಿ ಬಹುಮಾನ ಕೊಟ್ಟಿದ್ದೇನೆ ಎಂದು ತಿಳಿಸಿದ್ದಾರೆ.

ಈ ಹಿಂದೆ ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸಿದ್ದ ಹ್ಯಾಂಗ್ ಮ್ಯಾನ್​ಗೆ ಕೂಡ ನವರಸ ನಾಯಕ ಜಗ್ಗೇಶ್ ಉಡುಗೊರೆ ಘೋಷಿಸಿ, ಹ್ಯಾಂಗ್​ ಮ್ಯಾನ್​ ಪವನ್ ಜಲ್ಲಾದ್‍ಗೆ ಜಗ್ಗೇಶ್​ ಒಂದು ಲಕ್ಷ ಉಡುಗೊರೆಯನ್ನು ನೀಡಿದ್ದರು.

ಗೃಹಸಚಿವರ ಶ್ಲಾಘನೆ
ಮೈಸೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳನ್ನು ತಾಂತ್ರಿಕ ಸಾಕ್ಷಾಧಾರಗಳ ಮೂಲಕ ಶೀಘ್ರವಾಗಿ ಬಂಧಿಸಿದ ಪೋಲಿಸರಿಗೆ ನಟ ಜಗ್ಗೇಶ್ ದಂಪತಿಗಳು 1 ಲಕ್ಷ ರೂಪಾಯಿಗಳ ಚೆಕ್ ನೀಡಿ ಅಭಿನಂದಿಸಿದ್ದಾರೆ. ಶ್ರೀ ಜಗ್ಗೇಶ್ ರವರ ಕುಟುಂಬಕ್ಕೆ ಅಭಿನಂದನೆಗಳು ಎಂದಿದ್ದಾರೆ.

 

Comments are closed.