ರಾಷ್ಟ್ರೀಯ

ಭಾರತೀಯರು ಅಪಾಯದಲ್ಲಿದ್ದರೆ ದೇಶ ಎಂದಿಗೂ ಅವರ ಸಹಾಯಕ್ಕೆ ನಿಲ್ಲುತ್ತದೆ: ಪ್ರಧಾನಿ ಮೋದಿ

Pinterest LinkedIn Tumblr

ನವದೆಹಲಿ: ಭಾರತ ದೇಶವು ಪ್ರಸ್ತುತ ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದರೂ ಕೂಡ ತನ್ನ ಜನರನ್ನು ಯುದ್ಧ ಪೀಡಿತ ಸನ್ನಿವೇಶವಿರುವ ಅಫ್ಘಾನಿಸ್ತಾನದಿಂದ ಸ್ಥಳಾಂತರಿಸುವ ಕೆಲಸ ಮಾಡುತ್ತಿದೆ. ಮುಂದೆಯೂ ಈ ಕೆಲಸ ನಡೆಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ನವೀಕೃತ ಜಲಿಯನ್ ವಾಲಾ ಬಾಗ್ ಸ್ಮಾರಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಅಫ್ಘಾನಿಸ್ತಾನದಿಂದ ನೂರಾರು ಭಾರತೀಯರನ್ನು ದೇವಿ ಶಕ್ತಿ ಕಾರ್ಯಾಚರಣೆಯಡಿ ದೇಶಕ್ಕೆ ಕರೆತರಲಾಗಿದೆ. ಅಪ್ಘಾನಿಸ್ತಾನದಲ್ಲಿ ಹಲವು ಸವಾಲುಗಳಿದ್ದು, ಪರಿಸ್ಥಿತಿ ಕಠಿಣವಾಗಿದೆ.

ಜಲಿಯನ್ ವಾಲಾ ಬಾಗ್ ದೇಶದ ಸ್ವಾತಂತ್ಯಕ್ಕಾಗಿ ತಮ್ಮ ಪ್ರಾಣವನ್ನೆ ಅರ್ಪಿಸಿದ ಸರ್ದಾರ್ ಉದ್ದಮ್ ಸಿಂಗ್, ಭಗತ್ ಸಿಂಗ್ ಅವರಂತಹ ಅನೇಕ ಕ್ರಾಂತಿಗಳಿಗೆ ಧೈರ್ಯ ಕೊಟ್ಟ ಸ್ಥಳವಾಗಿದೆ ಎಂದು ಪ್ರಧಾನಿ ತಿಳಿಸಿದರು.

Comments are closed.